logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಓಡಾರಿ
(ನಾ)
ಕುಂಬಾರ, ತುಳುಶಬ್ದ

ಓಡು
(ನಾ)
ಹಂಚು, ಮಡಿಕೆಚೂರು-ಬೋಕಿ, ಮಡಕೆ, ಕಾವಲಿ ಹಂಚು, ಮಾಳಿಗೆ ಹಂಚು, ನಾಡಹಂಚು, ಮಳೆ ಹೆಚ್ಚಾಗಿ ಬೀಳುವ ಪ್ರದೇಶದಲ್ಲಿ ಮನೆಯ ಮಾಳಿಗೆಯನ್ನು ಓಡು-ಹಂಚುಗಳಿಂದ ಹೊದಿಸುವರು. ಗ್ರಾಮೀಣ ಭಾಗಗಳಲ್ಲಿ ಜನರು ಹೆಚ್ಚಾಗಿ ನಾಡಹಂಚುಗಳನ್ನು ಬಳಸುವರು. ಇವುಗಳನ್ನು ಕುಂಬಾರರು ಚಕ್ರದ ಮೇಲೆ ತಯಾರಿಸಿ ಚೆನ್ನಾಗಿ ಸುಟ್ಟಿರುವರು. ಇವು ಹೆಚ್ಚಾಗಿ ಕಪ್ಪು ಬಣ್ಣದವು ಇರುತ್ತವೆ. ಕಾರ್ಖಾನೆಗಳಲ್ಲೂ ಹಂಚುಗಳನ್ನು ತಯಾರಿಸಲಾಗುತ್ತಿದ್ದು, ಇವಕ್ಕೆ ಮಂಗಳೂರು ಹಂಚು ಎಂದು ಕರೆಯುವ ರೂಢಿ ಇದೆ. ಹಂಚಿನ ಮನೆ ಬೇಸಿಗೆಯ ಕಾಲದಲ್ಲಿ ತಂಪಾದ ಗಾಳಿಯನ್ನು ನೀಡುವುದರಿಂದ ಆರೋಗ್ಯಕ್ಕೆ ಹಿತ. ರೊಟ್ಟಿ ಬೇಯಿಸುವ ತವೆಗೆ ಹಂಚು ಎಂದೂ ಹೆಸರು. ಕೆಲವರು ಮಣ್ಣಿನ ಹಂಚಿನಲ್ಲಿ ರೊಟ್ಟಿ ಸುಡುವರು. 1. "ಓಡಂ ಪಿಡಿದೊಡೆ ಕೈ ಮಸಿ" (ನಯಸೇನ) 2. "ಓಡಿನೊಳಗುಂಟೆ ಕನ್ನಡಿಯ ನೋಟ" (ಅಲ್ಲಮ) 3. "ಓಡಿನಲಿ ಉಂಬವಗೆ ಹರಿವಾಣವೇಕೆ?" (ಪುರಂದರದಾಸರು) 4. ಓಡುಮಣ್ಣಲಿ ಹುಟ್ಟಿಕೂಡುವುದೆ ಜಾತಿಯನು (ಸರ್ವಜ್ಞ) 5. ಒಡಿನಿಂದ ಸಿಡಿದು ಬಾಣಲೆಗೆ ಬಿದ್ದಹಾಗೆ (ಗಾದೆ)
">


logo