logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಖಣಿಕುಳ್ಳಿ
(ನಾ)
ಖಣಿಗಡಿಗೆ ಕುದರೆಲದ್ದಿ ಮಿಶ್ರಣ ಮಾಡದೆ ತಯಾರಿಸುವ ಮಡಕೆ

ಖಪ್ಪುರ
(ನಾ)
ಒಡೆದ ಮಡಕೆ ಚೂರು, ಬೋಕಿ, ಬೀದರ ಜಿಲ್ಲೆಯಲ್ಲಿ ಈ ಪದ ಬಳಕೆಯಲ್ಲಿದೆ.

ಖಫರೋಳಿಗೆ
(ನಾ)
ಮನೆಮಾಳಿಗೆ ಹಂಚು, ಬೀದರ ಜಿಲ್ಲೆಯಲ್ಲಿ ಈ ಪದ ಬಳಕೆಯಲ್ಲಿದೆ.

ಖಾಸದಾನ
(ನಾ)
ಪಾನಪಟ್ಟಿ ಇಡುವ ಮಣ್ಣಿನ ಪಾತ್ರೆ ಬೇಸಿಗೆ, ಕಾಲದಲ್ಲಿ ಎಲೆಗಳು ಬಾಡದಂತೆ ಇಡಲು ಅಂದವಾಗಿ ತಯಾರಿಸಿದ ಪಾತ್ರೆ. ಲಖೌನದ ಖಾಸ ದಾನಗಳು ತುಂಬಾ ಪ್ರಸಿದ್ಧವಾಗಿವೆ.

ಖುದಬಾಡ
(ನಾ)
ಸೊಳಗಳಲ್ಲಿ ಒಂದು ವಿಧ. ಬೀದರ ಜಿಲ್ಲೆಯಲ್ಲಿ ಈ ಪದ ಬಳಕೆಯಲ್ಲಿದೆ.


logo