logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಮಂಕರಿ
(ನಾ)
ಬಂಕ್ರಿ, ದೋಸೆಬೇಯಿಸುವ ಹಂಚಿಗೆ ಮುಚ್ಚುವ ಮುಚ್ಚಳ

ಮಂಡೆ
(ನಾ)
ವತ್ತಲ, ನೀರು ಕಾಯಿಸಲು ಬಳಸುವ ಗಡಗಿ, ಪಚೇಲಿ, ಈ ಪದ ದಕ್ಷಿಣ ಕನ್ನಡದಲ್ಲಿ ಪ್ರಯೋಗದಲ್ಲಿದೆ.

ಮಗ್ಗಲು ತಟ್ಟು
(ಕ್ರಿ)
ಮಡಿಕೆಗಳನ್ನು ದರಗದಲ್ಲಿಟ್ಟು ಕಲ್ಲು ಮತ್ತು ಸೊಳದಿಂದ - ಕೆಳಭಾಗದಿಂದ ತಟ್ಟುತ್ತ ಹೆಚ್ಚಿನ ಮಣ್ಣನ್ನು ಮಧ್ಯಭಾಗಕ್ಕೆ ತಂದು, ಮಡಕೆ ಹಿಗ್ಗಿಸುವ ಕ್ರಿಯೆ.

ಮಗಿ
(ನಾ)
ಮಗೆ, ಮೊಗೆ, ಮಣ್ಣಿನ ತಂಬಿಗೆ, ಚೆಂಬು, ನೀರು ಹಾಕುವ ಮಗೆ, ನೀರು ತುಂಬುವ ಮಗೆ, ಐರಾಣಿ ಗಡಿಗೆಗಳಲ್ಲಿ ಐದು ಮಗಿ ಇಡುವ ಪದ್ಧತಿ ಇದೆ. ಕುರುಬರು ಕುರಿಹಾಲನ್ನು ಮಗೆಯಲ್ಲಿ ಹಾಕಿಡುವರು. ರೈತರು ಹೊಲ-ಗದ್ದೆಗಳಲ್ಲಿ ನೀರು ಕುಡಿಯಲು ಮಗಿಗಳನ್ನು ಬಳಸುವರು. ಗಡಿಗೆ ಹೋಗಿದ್ದಕ್ಕೆ ಮಗಿ ಕೊಟ್ಟು ಶಾಸ್ತ್ರ ಕೇಳಿದರಂತೆ (ಗಾದೆ) ಮಗೆ ಮಾಡದ ಕುಂಬಾರ ಗುಡಾಣ ಮಾಡ್ಯಾನೇನು (ಗಾದೆ)

ಮಜ್ಜಿಗೆ ಗಡಿಗೆ
(ನಾ)
ಮೊಸರು ಕಡೆದು ಮಜ್ಜಿಗೆ ಮಾಡುವ ಗಡಿಗೆ ಹಳ್ಳಿಗಳಲ್ಲಿ ರೈತರ ಮನೆಗಳಲ್ಲಿ ಮಜ್ಜಿಗೆ ಕಂಬದ ಪಕ್ಕದಲ್ಲಿ ಒಂದು ಸಿಂಬೆ ಇಟ್ಟು ಅದರ ಮೇಲೆ ಮಜ್ಜಿಗೆ ಗಡಿಗೆಯನ್ನು ಇಟ್ಟು ಕಡಗೋಲಿಂದ ಮೊಸರನ್ನು ಕಡೆದು, ಮಜ್ಜಿಗೆ ಮಾಡಿ ಬೆಣ್ಣೆ ತೆಗೆಯುವರು.

ಮಡಕೆ
(ನಾ)
ಗಡಿಗೆ, ಸ್ವಾರಿ, ಮೃಣ್ಮಯ ಪಾತ್ರೆ, ನೋಡಿ - ಗಡಿಗೆ

ಮಡಕೆಕೊಯ್ಯೋಮುಳ್ಳು
(ನಾ)
ತಿಗರಿಯ ಮೇಲೆ ಗಡಿಗೆಗಳನ್ನು ತಯಾರಿಸಿದನಂತರ ಅದನ್ನು ಬೇರ್ಪಡಿಸಲು ಉಪಯೋಗಿಸುವ ತಂತಿ ನೋಡಿ - ಚಟೆದಾರ.

ಮಣ್ಣಾವಿಗೆ
(ನಾ)
ಬರಿಮಣ್ಣಿನಿಂದಲೆ ನಿರ್ಮಿಸಿದ ಆವಿಗೆ, ಕುಂಬಾರ ಭಟ್ಟಿ

ಮಣ್ಣಿನ ಕುರ್ಕಿ
(ನಾ)
ಮಣ್ಣಿನ ಪಾತ್ರೆ, ಕಾಡು ಕುರುಬರು ಹೆಚ್ಚಾಗಿ ಬಳಸುವರು.

ಮಣ್ಣಿನ ಕೊರಳಸರ
(ನಾ)
ಹೆಣ್ಣುಮಕ್ಕಳು ಕೊರಳಲ್ಲಿ ಹಾಕಿಕೊಳ್ಳಲು ಮಣ್ಣಿನಿಂದ ಮಾಡಿದ ಮಣಿಗಳ ಸರ, ಬೆಂಗಳೂರಿನಲ್ಲಿ ಈಗಲೂ ಮಣ್ಣಿನಿಂದ ಸುಂದರವಾದ ಸರಗಳನ್ನು ತಯಾರಿಸುವರು. ಮೊಹಂಜೋದಾರು ಹರಪ್ಪ ನಗರಗಳ ಉತ್ಖನದಲ್ಲಿ ಸುಂದರವಾದ ಮಣ್ಣಿನ ಕಂಠಸರಗಳು ದೊರೆತಿವೆ. ಕೇರಳದಲ್ಲಿ ಟೆರ್ರಾಕೂಟಾ ವಸ್ತುಗಳ ಜೊತೆಯಲ್ಲಿ ಮಣಿ ಸರಗಳನ್ನು ತಯಾರಿಸುವರು. ಈಗಲೂ ಕೂಡ ಎನಾಮಲ್ ಮಾಡಿದ ಮಣ್ಣಿನ ಸರಗಳಿಗೆ ಬೇಡಿಕೆ ಇದೆ.


logo