logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಧಾರಾಕುಡಿಕೆ
(ನಾ)
ನಳಿಕೆ - ಜೋಡಿಸಿದ ಮಡಿಕೆ, ಐರಾಣಿಗಡಿಗೆಗಳಲ್ಲಿ ಕೊಡುವ ಮಡಕೆಗಳಲ್ಲಿ ಇದೂ ಒಂದು. ಮದುವೆ ಸಮಾರಂಭಗಳಲ್ಲಿ ಇದರಲ್ಲಿ ಹಾಲನ್ನು ಹಾಕಿಕೊಂಡು ಎರೆಯಲು ಉಪಯೋಗಿಸುವರು. ಇದು ದಕ್ಷಿಣ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದಲ್ಲಿ ಬಳಕೆಯಲ್ಲಿದೆ.

ಧಾರಾಪಾತ್ರೆ
(ನಾ)
ಚಿಕ್ಕ ಗಡಿಗೆ, ಈಶ್ವರ ಲಿಂಗಕ್ಕೆ ಜಲಾಭಿಷೇಕ ಮಾಡಲು ಇದನ್ನು ಬಳಸುವರು. ಈ ಮಡಿಕೆಯಲ್ಲಿ ನೀರು ತುಂಬಿ ಈಶ್ವರ ಲಿಂಗದ ಮೇಲೆ ಸ್ವಲ್ಪ ಅಂತರದಲ್ಲಿ ತೂಗುಬಿಡುವರು. ಮಡಿಕೆಯ ತಳದಲ್ಲಿ ಒಂದು ಚಿಕ್ಕ ರಂಧ್ರಮಾಡಿರುವುದರಿಂದ ನೀರು ಲಿಂಗದ ಮೇಲೆ ಧಾರೆಯಾಗಿ ನಿರಂತರ ಬೀಳುವುದು.

ಧೂಪದಾರತಿ
(ನಾ)
ಧೂಪಾರತಿ ದೂಪುಂಡಿಗೆ, ದೇವರ ಪೂಜೆ ಮಾಡುವಾಗ ಧೂಪ ಲೋಬಾನ ಹಾಕಲು ಮಾಡಿದ ಸಾಧನ.

ಧೂಪುಂಡಿಗೆ
(ನಾ)
ಧೂಪ ಹಾಕುವ ಬಟ್ಟಲು ಇದನ್ನು ಮಣ್ಣಿನಿಂದ ಮಾಡಿರುತ್ತಾರೆ. ನೆಲದ ಮೇಲೆ ಸರಿಯಾಗಿ ನಿಲ್ಲಲು ತಳಭಾಗದಲ್ಲಿ ವೃತ್ತಾಕಾರದ ಕಂಠ ಇರುತ್ತದೆ. ಈ ಬಟ್ಟಲಿಗೆ ಅಗಲವಾದ ಬಾಯಿ ಇರುತ್ತದೆ. ಇದರಲ್ಲಿ ಗಂಧ, ಪಚ್ಚೆ ಕರ್ಪೂರಗಳನ್ನು ಹಾಕಿ ಅದರ ಮೇಲೆ ಬೆಂಕಿ ಕೆಂಡಗಳನ್ನು ಇಡುವರು.


logo