logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ದದ್ದು
(ನಾ)
ಗಡಿಗೆಯಲ್ಲಿ ಸಣ್ಣಗೆ ಬಿಡುವ ಬಿರುಕು 'ಕೃಷ್ಣ ದದ್ದು ಮಡಿಕೆಯಲ್ಲಿ ಮೋಟುಮರಕ್ಕೆ ನೀರ್ಹೊತ್ತ ರೀತಿ" (ಕಾ.ತ.ಚಿಕ್ಕಣ್ಣ)
">

ದಬ್ಬಿಗಡಿಗೆ
(ನಾ)
ರೊಕ್ಕದ ಗಡಿಗೆ, ಹುಂಡಿ ಗಡಿಗೆ, ಬಾಯಿ ಮುಚ್ಚಿಮಾಡಿದ ಗಡಿಗೆ ಅದರ ನೆತ್ತಿಯ ಮೇಲೆ ನಾಣ್ಯ ಹೋಗುವಷ್ಟು ರಂಧ್ರ ಮಾಡಲಾಗಿರುವುದು. ಮನೆಯಲ್ಲಿ ಮಕ್ಕಳು ಮತ್ತು ಹೆಂಗಸರು ದುಡ್ಡನ್ನು ಉಳಿತಾಯ ಮಾಡಲು ದಬ್ಬಿಗಡಿಗೆಯಲ್ಲಿ ಹಾಕುವರು. ಅದು ಪೂರ್ತಿ ತುಂಬಿದ ಮೇಲೆ ಇಲ್ಲವೆ ಹಣದ ಅವಶ್ಯಕತೆ ಬಿದ್ದಾಗ ಅದನ್ನು ಒಡೆಯುವರು.

ದರಗ
(ನಾ)
ಗಂಡಸರು ಹಸಿ ಮಡಕೆಗಳನ್ನು ತಟ್ಟುವ ಸ್ಥಳ, ಕೆಳಗಡೆ ಗೋಣಿತಟ್ಟು ಹಾಕಿಕೊಂಡು, ತಟ್ಟಲು ಅನುಕೂಲವಾಗುವ ಹಾಗೆ ಮಾಡಿಕೊಳ್ಳುವರು.


logo