logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಕಂಗಜ
(ನಾ)
ಬಟ್ಟೆ ಹಾಕಿಡಲು ಬಳಸುತ್ತಿದ್ದ ಹರವಿ ಆಕಾರದ ತುಸು ಚಿಕ್ಕ ಬಾಯಿಯ ಮಡಕೆ. ಮಲೆನಾಡಿನ ಶೈವ ಒಕ್ಕಲಿಗರು ಇದನ್ನು ಬಳಸುತ್ತಿದ್ದರು.

ಕಂಠ
(ನಾ)
ಗಡಿಗೆಯ ಕುತ್ತಿಗೆ, ಹರವಿಯ ಕಂಠ, ಕೊರಳು

ಕಂಠಕಟ್ಟು
(ಕ್ರಿ)
ಕುಂಬಾರ ಗಿತ್ತಿಯರು ಬೋಸಿ ತೀಡಿ ಅದು ಸ್ವಲ್ಪ ಒಣಗಿದ ನಂತರ ಮಣ್ಣಿನ ಸುರಳಿ ಮಾಡಿ ಬಾಯಿಗೆ ಕಂಠ ಕಟ್ಟುವರು ಇದನ್ನೇ ಕಂಠ ಹಚ್ಚುವದು ಎನ್ನುವರು.

ಕಂದಲು
(ನಾ)
ಮಣ್ಣಿನ ಚಿಕ್ಕ ಪಾತ್ರೆ, ಗಿಂಡಿ, ಬಟ್ಟಲು "ಹಾಲು ಕಂದಲು ತುಪ್ಪದ ಮಡಿಕೆಯ-ಬೊಡು ಮುಕ್ಕೆನಬೇಡ" - ಬಸವಣ್ಣ
">

ಕಂಬಿ
(ನಾ)
ಕೋಲು, ಟೊಳ್ಳಾದ ದಪ್ಪನೆಯ ಬಿದಿರು, ತಿಗರಿಯ ಮೇಲೆ ಹರವಿ, ಕೊಡ, ಗಡಿಗೆ ಮಾಡುವಾಗ ಅವುಗಳ ಕಂಠಗಳನ್ನು ನುಣುಪು ಮಾಡಲು ಉಪಯೋಗಿಸುವ ಸಾಧನ.

ಕಚ್ಚಣಿ
(ನಾ)
ಮುಚ್ಚಳ

ಕಚ್ಚುಹೊಡೆ
(ಕ್ರಿ)
ಕಚ್ಚು ಹಾಕು, ಅಚ್ಚು ಹಾಕುವುದು ಮಡಕೆ, ಕೊಡ ಬಿಂದಿಗೆ, ಹರವಿ, ಮೊದಲಾದ ಪಾತ್ರೆಗಳು ಅಂದವಾಗಿ ಕಾಣಲೆಂದು ಅವುಗಳ ಕಂಠ ಮತ್ತು ಮಧ್ಯಭಾಗದ ಸುತ್ತಲೂ ಕಚ್ಚುಸೂಳದಿಂದ ಕಚ್ಚುಹೊಡೆಯುವರು. ಮಡಿಕೆಗಳು ಹಸಿ ಇರುವಾಗ, ಕಚ್ಚು ಮತ್ತು ಮುದ್ರೆಗಳನ್ನು ಒತ್ತುವರು.

ಕರ್ಜನ
(ನಾ)
ಬಟ್ಟೆ ಇಡಲು ಬಳಸುತ್ತಿದ್ದ ಮಣ್ಣಿನ ಪಾತ್ರೆ. ಹಿಂದಿನ ಕಾಲದಲ್ಲಿ ಇಂಥ ಅಪೂರ್ವ ಪಾತ್ರೆಗಳನ್ನು ಬಳಸುತ್ತಿದ್ದರು. ದಕ್ಷಿಣ ಕನ್ನಡಜಿಲ್ಲೆಯಲ್ಲಿ ಸೂಳ್ಯ ತಾಲ್ಲೂಕಿನಲ್ಲಿ ಒಂದು ಕರ್ಜನ್ ಪಾತ್ರೆದೊರೆತಿದ್ದು, ಅದನ್ನು ಮೈಸೂರು ವಿಶ್ವವಿದ್ಯಾನಿಲಯದ ಜಾನಪದ ವಸ್ತು ಸಂಗ್ರಾಹಲಯದ ಕ್ಯುರೇಟರರಾದ ಯು.ಎಸ್. ರಾಮಣ್ಣ ಅವರು ಸಂಗ್ರಹಿಸಿದ್ದಾರೆ.

ಕಟಕಿ
(ನಾ)
ಕುಡಕಿ, ಚಿಕ್ಕ ಗಡಿಗೆ, ಕುಡಿಕೆ

ಕಟ್ಟಿಗೆ ಹಣಗಿ
(ನಾ)
ಹಸಿಮಡಿಕೆಗಳ ಮೇಲೆ ವಿವಿಧ ಗೆರೆಗಳನ್ನು ಹಾಕಲು ಬಳಸುವ ಸಾಧನ. ತಲೆ ಹಿಕ್ಕುನ ಕಟ್ಟಿಗೆ ಹಣಿಗೆಯ ತುಂಡನ್ನಾಗಲಿ, ಇಲ್ಲವೆ ಐದಾರು, ಸೂಜಿಗಳನ್ನ್ನು ಹಣಿಗೆಯಂತೆ ಜೋಡಿಸಿ ಕಟ್ಟಿ ಮಡಿಕೆಗಳ ಕಂಠ ಮತ್ತು ಬದಿಗಳ ಸುತ್ತಲೂ ಗೆರೆ ಹಾಕಲು ಇದನ್ನು ಉಪಯೋಗಿಸುವರು.


logo