logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಹಂಚು
(ನಾ)
ಓಡು, ಛಾವಣಿಗೆ ಹೊದಿಸುವ ಹಂಚು, ಅಧಿಕ ಮಳೆ ಬೀಳುವ ಪ್ರದೇಶಗಳಲ್ಲಿ ಮತ್ತು ಮಲೆನಾಡಿನಲ್ಲಿ ಹಂಚಿನ ಬಳಕೆ ಹೆಚ್ಚು ಒಡೆದ ಮಡಿಕೆ ಚೂರಿಗೂ ಕೂಡ ಹಂಚು ಎನ್ನುವರು. ಹಂಚಿನಲ್ಲಿ ನಾನಾ ವಿಧಿಗಳಿವೆ ಕೊರಡು ಹಂಚು, ಹರಿಹಂಚು, ದಂಬೆ ಹಂಚು, ಬೆಂಕ್ಚಿ ಹಂಚು ಇತ್ಯಾದಿ. "ಹಂಚಿನಿದಿರಲಿ ಹಲ್ಲು ತೆರದರೆ ಮಿಂಚುಕನ್ನಡಿಯಾಗಬಲ್ಲುದೆ?" (ಪ್ರಸನ್ನವೆಂಕಟದಾಸರು) ಹಂಚು ಕಾಣದವಳು ಕಂಚು ಕಂಡ್ರೆ ದಿನಕ್ಕೆ ಮೂರಾವರ್ತೆ ಬೆಳಗಿ ತಿಂದ್ಲು (ಗಾದೆ) ಪರ್ಯಾಯ ಪದ : "ದಂಬೆ ಹಂಚು ಮಾಳಿಗೆ ಹಂಚು"
">

ಹಣತೆ
(ನಾ)
ನೋಡಿ - ಪಣತಿ.

ಹರವಿ
(ನಾ)
ಪರವಿ, ಹರಿವಿ, ಹರಿಬಿ, ಹರುಬಿ, ಹರುವಿ, ಕುಡಿಯುವ ನೀರನ್ನು ಹಾಕಿಡಲು ಬಳಸುವ ದೊಡ್ಡ ಗಡಿಗೆ, ನೀರನ ಪಡಗ, ಹಂಡೆ ತರಹ ಇರುವುದು. "ದಂಡಿಗಂಜುವ ಭಂಟ ಒಡಕು ಹರವಿಯ ಕಂಠ" (ಕನಕದಾಸ) ಹರವಿಯ ಅನ್ನದಲ್ಲಿ ಒಂದಗಳು ನೋಡಿದರೆ ಸಾಕು (ಗಾದೆ) ಮುರುವಿಗೆ ಬಗೆ ಇಲ್ಲದಿದ್ರ ಹರವಿಗೂ ದರಿದ್ರವೆ (ಗಾದೆ)
">

ಹರವೀಡು
(ನಾ)
ದಪ್ಪ ಗಡಿಗೆ. ದಕ್ಷಿಣ ಕರ್ನಾಟಕದಲ್ಲಿ ಈ ಪದ ಹೆಚ್ಚಾಗಿ ಬಳಕೆಯಲ್ಲಿದೆ.

ಹರಿಗಲ್ಲು
(ನಾ)
ದೊಡ್ಡ ಮಡಿಕೆಗಳನ್ನು ತಟ್ಟುವ ಕಲ್ಲು

ಹರಿನಾಳಿಗೆ
(ನಾ)
ಮಣ್ಣಿನ ಕೊಳವೆ, ಪೈಪು, ಮಳೆಗಾಲದಲ್ಲಿ ಮಾಳಿಗೆಯ ನೀರು ಹರಿದು ಹೋಗಲು ಕುಂಬಿಯಲ್ಲಿ ಹರಿನಾಳಿಗೆಯನ್ನು ಕೂಡ್ರಿಸುವರು. ಇವು ಸುಮಾರು ಒಂದು ಮೀಟರದಷ್ಟು ಉದ್ದ ಇರುತ್ತವೆ. ಜೋಡು ಹರಿನಾಳಗೆ ಕೂಡ ಇಡುವರು. ಹಳ್ಳಿಗಳಲ್ಲಿ ಮಳೆ ಬಿದ್ದ ಪ್ರಮಾಣವನ್ನು ಹೇಳುವಾಗ 'ಮಳಿ ಹರಿ ನಾಳಿಗಿ ನೀರ ಬಿದ್ದಂಗ ಬಿತ್ತು' - ಎನ್ನುವರು. ಶಾನಬೋಗರ ಕುದುರೆ ನಿಂತು ನೀರು ಹೊಯ್ಯುತ್ತೆ (ಒಗಟು)

ಹರಿವಾಣ
(ನಾ)
ಅರಿವಾಣ, ಅಗಲವಾದ ತಟ್ಟೆ. ಪರಾತ ಚಿನ್ನದ ಹರಿವಾಣವಾದರೂ ಮಣ್ಣಿನ ಗೋಡೆಗೆ ಒರಗಬೇಕು (ಗಾದೆ)

ಹಲ್ಲೆ
(ನಾ)
ಕುಂಬಾರಗಿತ್ತಿಯರು ಕೈಯಿಂದ ಮಡಕೆ ಮಾಡುವಾಗ ಮಣ್ಣನ್ನು ಸುರುಳಿ ಮಾಡಿ, ತುಂಡು ತುಂಡು ಮಾಡಿಕೊಂಡು, ಒಂದೊಂದೆ ತುಂಡನ್ನು ಜಜ್ಜುವಕಲ್ಲಿನಿಂದ ಜಜ್ಜಿ ಅಗಲ ಮಾಡುವರು, ಇದು ರೊಟ್ಟಿಯ ಹಾಗೆ ದುಂಡಗಿರುವದು ಇದನ್ನೇ ಹಲ್ಲೆ ಎನ್ನುವರು, ಮಾಡುವ ಮಡಕೆಯ ಗಾತ್ರಕ್ಕನುಗುಣವಾಗಿ ಸಣ್ಣ ದೊಡ್ಡ ಹಲ್ಲಿ ಮಾಡಿಕೊಳ್ಳುವರು, ಅದನ್ನೇ ತೆಗೆದು ಅಟ್ಟಿಗೆ ಹಾಕಿ ಕೈಯಿಂದ ತೀಡುವರು.

ಹವೆ ಗೂಡು
(ನಾ)
ಆವಿಗೆಯಲ್ಲಿ ಮಡಕೆಗಳನ್ನಿಟ್ಟು ಸುಡುವಾಗ ಒಳಗಿನ ಹಬೆ ಹೊರಕ್ಕೆ ಹೋಗುವಂತೆ ಆವಿಗೆಯ ಮಧ್ಯದಲ್ಲಿ ಬಿಟ್ಟ ಚಿಕ್ಕ ಕಿಂಡಿ.

ಹಳಕು
(ನಾ)
ಹಳಕ, ಆವಿಗೆಯನ್ನು ಬೂದಿಯಿಂದ ಮುಚ್ಚಿ ಆವಿಗೆ ಕಾಯುಸುತ್ತಿರುವಾಗ ಬೂದಿಯಲ್ಲಿ ಬೀಳುವ ತೂತುಗಳು, ಪುನಃ ಅವುಗಳನ್ನು ಬೂದಿಯಿಂದ ಮುಚ್ಚುವರು.


logo