logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಘಟ
(ನಾ)
ಘಟಕೆ, ಗಡಿಗೆ, ಮಣ್ಣಿನ ಪಾತ್ರೆ, ಬಾವಿಯಿಂದ ನೀರು ತರಲು ಬಳಸುತ್ತಿದ್ದರೆಂದು ಮಹಾಭಾಷ್ಯದಲ್ಲ ಅನೇಕ ಕಡೆ ಹೇಳಲಾಗಿದೆ. ಘಟ ಪದವನ್ನು ದೇಹಕ್ಕೆ ಹೋಲಿಸುವರು. "ಘಟವ ಮಾಡಿದವ ಘಟದಲ್ಲಿರದಂತೆ" (ನಗೆಯ ಮಾರಿತಂದೆ) "ಧಾನ್ಯ ಹೊಯಿದಿದ್ದ ಘಟ ಅಳತೆಗೆ ಬಪ್ಪುದೆ?" (ಮೋಳಿಗೆ ಮಾರಯ್ಯ)
">

ಘಟಂ
(ನಾ)
ಗಡಿಗೆ, ಇದನ್ನು ವಾದ್ಯವಾಗಿ ಬಳಸುವರು. ಇದರ ಬಾಯಿ ಸ್ವಲ್ಪ ಅಗಲವಾಗಿದ್ದು. ಅದನ್ನು ಬೋರಲಾಗಿ ಇಟ್ಟು ಇಲ್ಲವೆ ಹೊಟ್ಟೆಗೆ ಆನಿಸಿಕೊಂಡು ಎರಡೂ ಕೈ ಬೆರಳುಗಳಿಂದ ಬಡಿಯುತ್ತಾ ಹೋದಂತೆಲ್ಲಾ ಶುಶ್ರಾವ್ಯವಾದ ನಾದ ಹೊರಹೊಮ್ಮುತ್ತದೆ. ದಕ್ಷಿಣ ಭಾರತದ ಸಂಗೀತ ಕಛೇರಿಗಳಲ್ಲಿ "ಘಟಂ ವಾದ್ಯ" ಪ್ರಸಿದ್ದವಾಗಿದೆ. ಪಾಲ್ಘಾಟ್ ಸುಬ್ರಹ್ಮಣ್ಯ ಅಯ್ಯರ್ ಘಟ ನುಡಿಸುವುದರಲ್ಲಿ ಪ್ರಸಿದ್ಧರಾಗಿದ್ದಾರೆ.
">

ಘಟ ಸ್ಥಾಪನೆ
(ಕ್ರಿ)
ದಸರಾ ಹಬ್ಬದಲ್ಲಿ ಮಣ್ಣಿನ ತಟ್ಟೆಯಲ್ಲಿ ಮಣ್ಣು ತುಂಬಿ ವಿವಿಧ ಧಾನ್ಯಗಳನ್ನು ಹಾಕಿ ಜಗುಲಿಯ ಮೇಲಿಟ್ಟು ಹತ್ತು ದಿನಗಳ ಕಾಲ ಅದಕ್ಕೆ ನೀರು ಹಾಕಿ ಪೂಜಿಸುವ ವಿಧಾನ.

ಘಟಾಗ್ನಿ
(ನಾ)
ಕೊಡದೊಳಗಿನ ಬೆಂಕಿ

ಘಳಿಗೆ ಬಟ್ಟಲು
(ನಾ)
ಗಳಿಗೆ ಬಟ್ಟಲು, ಮಣ್ಣು ಇಲ್ಲವೆ ಗಾಜಿನಿಂದ ತಯಾರಿಸಿದ ಬಟ್ಟಲು ಪ್ರಾಚಾನ ಕಾಲದಲ್ಲಿ ವೇಳೆಯನ್ನು ತಿಳಿಯಲು ಮಾಡಿದ ಸಾಧನ. ಒಂದು ಬಟ್ಟಲಿನ ತಳದಲ್ಲಿ ಸಣ್ಣ ರಂಧ್ರ ಮಾಡಿ ಅದನ್ನು ನೀರಿನಲ್ಲಿ ತೇಲಿ ಬಿಡುತ್ತಿದ್ದರು. ಅದರಲ್ಲಿ ನೀರು ತುಂಬಿಕೊಂಡು ಮುಳುಗುವಷ್ಟು ಸಮಯಕ್ಕೆ ಒಂದು ಗಳಿಗೆ ಎಂದು ಕರೆಯುತ್ತಿದ್ದರು.


logo