logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ನಾದು
(ಕ್ರಿ)
ಉಜ್ಜುವುದು, ಮಡಿಕೆ ಮಾಡಲು ಹದಮಾಡಿಟ್ಟ ಮಣ್ಣನ್ನು ಚೆನ್ನಾಗಿ ಮಿದಿಯುವುದು. ಕಲಸುವುದು.

ನೀರಹರವಿ
(ನಾ)
ನೀರು ತುಂಬಿದ ಹರವಿ, ಗ್ರಾಮದೇವತೆಯ ಹಬ್ಬದ ಸಂದರ್ಭದಲ್ಲಿ ಕುಂಬಾರನ ಮನೆಯಿಂದ ಹಾಲ ಹರವಿ ಜೊತೆಗೆ ನೀರಹರವಿಯನ್ನು ಒಯ್ದು ಹಾಲಹರವಿಯ ಜೊತೆ ಸ್ಥಾಪಿಸುವರು.

ನೀಲಗಾರ ಕುಂಬಾರ
(ನಾ)
ಸೀರಿಗೆ ನೀಲಿಬಣ್ಣ ಹಾಕುವ, ನೀಲಗಾರ ಕುಂಬಾರರಿದ್ದರು. ಅದೇ ಅವರ ಉದ್ಯೋಗವಾಗಿತ್ತು.

ನೀವಿ
(ಕ್ರಿ)
ತೀಡು, ಬೋಸಿತೀಡುವುದು.

ನುಣಿಸು
(ಕ್ರಿ)
ನುಣುಪು ಮಾಡುವುದು. ಮಡಿಕೆಯನ್ನು ತಯಾರಿಸಿದ ಮೇಲೆ ಕೊನೆಯ ಹಂತದಲ್ಲಿ ತೆಳುವಾದ ಸೊಳದಿಂದ ಗಟ್ಟಿಸುವ ಕ್ರಿಯೆಗೆ ನುಣಿಸುವುದು ಎನ್ನುವರು.

ನುಚ್ಚಿನಗಡಿಗಿ
(ನಾ)
ಜೋಳದ ನುಚ್ಚನ್ನು ಮಾಡಲು ಬಳಸುವ, ಮಡಕೆ, ಅಂಬ್ಲಿಗಡಿಗೆ, ಗಂಜಿಮಡಕೆ "ನುಚ್ಚಿನ ಗಡಗಿ ಸ್ವಚ್ಛ ತೊಳಿಯಮ್ಮ ಎಚ್ಚರದಿಂದ ನಿಗಾ ಇಡಮ್ಮ" ತತ್ವಪದ - ನಿಂಬೋಳಿ ತಿಪ್ಪಣ್ಣ
">


logo