logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಗ್ವಾದಲಿ
(ನಾ)
ಗೋದಲಿ, ಗೊದಲು, ದನಕರುಗಳಿಗೆ ಮೇವು ಹಾಕುವ ಕಟ್ಟೆ, ಸ್ಥಳ, ಮಣ್ಣೆತ್ತಿನ ಅಮಾವಾಸ್ಯೆಯಂದು ಮಣ್ಣಿನ ಎತ್ತುಗಳನ್ನು ಪೂಜಿಸುವರು. ಎತ್ತುಗಳ ಜೊತೆಯಲ್ಲಿ ಅದರ ಗ್ವಾದಲಿಯನ್ನು ಕುಂಬಾರರು ಮಣ್ಣಿನಿಂದ ತಯಾರಿಸಿಕೊಡುವರು.

ಗ್ವಾರಿ
(ನಾ)
ಗೋರಿ, ಸಲಿಕೆ, ಆವಿಗೆ ಹಾಕುವಾಗ ಮತ್ತು ತೆಗೆಯುವಾಗ ಇದನ್ನು ಬಳಸುವರು.

ಗಿಲ್ಲೋದು
(ನಾ)
ಹಸಿ ಮಡಿಕೆಗಳ ಮೇಲೆ ಗೀರು ಹಾಕಿ ಅಂದಗೊಳಿಸಲು ಉಪಯೋಗಿಸುವ ಕಬ್ಬಿಣದ ಪಟ್ಟಿ ದಕ್ಷಿಣ ಕರ್ನಾಟಕದ ಕುಂಬಾರರಲ್ಲಿ ಈ ಪದ ಹೆಚ್ಚು ಬಳಕೆಯಲ್ಲಿದೆ.

ಗುಂಡಾಲಿ
(ನಾ)
ಗುಂಡಾಳಿ, ಬಟ್ಟಲಿನಂತಹ ಮಣ್ಣಿನ ಪಾತ್ರೆ, ದೊಡ್ಡ ಗುಂಡಾಲು, ಸಣ್ಣ ಗುಂಡಾಲು ಎಂದು ಎರಡು ವಿಧಗಳಿವೆ.

ಗುಂಭ
(ನಾ)
ಕುಂಭ, ಕೊಡ

ಗುಗ್ಗಳ ಕೊಡ
(ನಾ)
ವೀರಭದ್ರ ದೇವರ ಭಕ್ತರು ಗುಗ್ಗಳ ಹೋರಟಾಗ ಗುಗ್ಗಳ ತೆಗೆಯಲು ಬಳಸುವ ಕೊಡ, ಇದೊಂದು ಪವಿತ್ರ ಮಡಕೆ, ಅರ್ಧ ಕುಂಭದಲ್ಲಿ ಕಂಠಕೆಳಗೆ ಮಾಡಿ ಬುಡ ಮೇಲೆ ಮಾಡಿದ ಅರೆ ಕುಂಭ.

ಗುಡಾಣ
(ನಾ)
ಹರವಿ, ರಂಜಣಗಿ, ಪಡಗ, ಆಕಾರದಲ್ಲಿ ದುಂಡಾಗಿದ್ದು ಸುಮಾರು ಒಂದು ಮೀಟರ್ ಎತ್ತರ ಇರುತ್ತದೆ. ರೈತರು ಇದನ್ನು ನೀರು ತುಂಬಿಡಲು, ಕಾಳುಕಡೆ ಹಾಕಿಡಲು ಬಳಸುವರು. ಸೂಜಿಯಷ್ಟು ಬಾಯಿ ಗುಡಾಣದಷ್ಟು ಹೊಟ್ಟೆ (ಗಾದೆ)

ಗುದ್ಲಿ
ನಾ
ಕೈಗುದ್ಲಿ, ನೆಲವನ್ನು ಅಗೆಯಲು ಬಳಸುವ ಕಬ್ಬಿಣದ ಉಪಕರಣ, ಅದಕ್ಕೆ ಕಟ್ಟಿಗೆ ಹಿಡಿ ಇರುತ್ತದೆ.

ಗುಬ್ಬಕಲ್ಲು
(ನಾ)
ಹಣೆಗಲ್ಲು, ತಿಗುರಿಯ ಮಧ್ಯದಲ್ಲಿ ಕುಳಿ ಮಾಡಿದ ಬೆಣಚು ಕಲ್ಲು ಸುಮಾರು ಅಂಗೈ ಅಗಲದಷ್ಟು ಈ ಕಲ್ಲು ಇದ್ದು, ಇದನ್ನು ತಿಗುರಿಯ ಮಧ್ಯ ಭಾಗದ ಹಣೆಯಲ್ಲಿ ಭದ್ರವಾಗಿ ಹಾಕಿರುವರು. ತಿಗುರಿಯನ್ನು ಗೂಟ(ಶೂಲ)ಕ್ಕೆ ಹಾಕುವಾಗ, ಈ ಗುಬ್ಬಿಕಲ್ಲಿನ ಗುಣಿಯಲ್ಲಿ ತಿಗುರಿಯಗೂಟ ಕೊಡುವಂತೆ ಹಾಕುವರು.

ಗುಳ್ಳಿ
(ನಾ)
ಕುಳ್ಳಿ, ಚಿಕ್ಕ ಗಡಿಗೆ.


logo