logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಚೂರಿ
(ನಾ)
ಹೆರಿಗತ್ತಿ, ಗುಪ್ಪೆ ಮಾಡಿಟ್ಟ ಮಣ್ಣನ್ನು ಕತ್ತರಿಸಿ ತೆಗೆಯಲು ಉಪಯೋಗಿಸುವರು.

ಚಾಣಿಗೆ
(ನಾ)
ಜರಡಿ, ಸಾಣಿಗೆ, ಬೂದಿ ಮತ್ತು ಮಣ್ಣನ್ನು ಜಾಣಿಸಲು ಇದನ್ನು ಬಳಸುವರು. ಬೀದರ್ ಜಿಲ್ಲೆಯಲ್ಲಿ ಇದಕ್ಕೆ ಝಲೋಡಿ ಎನ್ನುವರು.

ಚಂಪಲು
(ನಾ)
ಆವಿಗೆಯಲ್ಲಿ ಮಡಕೆಗಳನ್ನು ಸುಡಲು ಜೋಡಿಸಿ ಇಟ್ಟಮೇಲೆ ಅದರ ಮೇಲ್ಗಡೆ ಒಡೆದ ಹಂಚಿನ ಚೂರುಗಳಿಂದ ಮುಚ್ಚುವರು. ನಂತರ ಅದರ ಮೇಲೆ ಒಣಗಿದ ಸೊಪ್ಪುಸೆದೆ ಮುಚ್ಚುವರು.

ಚಿಟಗಿ ಮೊಳೆ
(ನಾ)
ಕೊಡ ಪಡಗ ಮೊದಲಾದವುಗಳನ್ನು ಗೆರೆ ಹಾಕಿ ಅಲಂಕಾರ ಮಾಡಲು ಉಪಯೋಗಿಸುವ ಮೊಳೆ.

ಚಿಪ್ಪು
(ನಾ)
ನೋಡಿ - ಪಲ್ಟಿ

ಚಿಲುಮೆ
(ನಾ)
ತಂಬಾಕು ಸೇದಲು ಬಳಸುವ ಸಾಧನ. ಹುಕ್ಕ ಭಂಗಿ ಕೊಳವೆ ಆರರಿಂದ ಹತ್ತು ಸೆಂ. ಮೀ. ಉದ್ದದ ನಳಿಕೆ, ಇದರಲ್ಲಿ ತಂಬಾಕು ಮತ್ತು ಗಾಂಜಾ ತುಂಬಿ ಸೇದುವರು, ಕರ್ನಾಟಕದಲ್ಲಿ ಬಾಗಲಕೋಟೆಯ ಚಿಲುಮೆಗಳು ಪ್ರಸಿದ್ಧ. ಲಖನೌದ ಚಿಲುಮೆ, ಹುಕ್ಕಾಗಳು ಜಗತ್ ಪ್ರಸಿದ್ಧವಾಗಿವೆ. ಬಳಪುಕಲ್ಲಿನಲ್ಲಿ ಮತ್ತು ಲೋಹಗಳಲ್ಲು ಚಿಲುಮೆಗಳನ್ನು ತಯಾರಿಸುವರು. ಆದರೆ ಮಣ್ಣಿನ ಚಿಲುಮೆಗಳಿಗೆ ಬೆಲೆ ಕಡಿಮೆ ಮತ್ತು ಹಗುರಾಗಿರುವುದರಿಂದ ಇವನ್ನೇ ಹೆಚ್ಚಾಗಿ ಬಳಸುವರು. 'ಚಿಲುಮಿ ತುಂಬಬೇಕೋ ಕಿಲಮನರಿಯಬೇಕೋ' (ತತ್ವಪದ - ಕೊಳ್ಳೂರ ಹಸನಸಾಹೇಬ)

ಜಂಗಿನ ಕೊಡ
(ನಾ)
ದೊಡ್ಡ ಕೊಡ, ಅಡ್ಡೆಯ ನಿಲುವುಗಳಲ್ಲಿ ಇಡುತ್ತಿದ್ದ ಕೊಡಗಳು.

ಜಗುಲಿಗುಳ್ಳ
(ನಾ)
ಎಣ್ಣೆ ಕುಳ್ಳಿ, ದೇವರ ಮುಂದೆ ದೀಪ ಹಚ್ಚಲು ಉಪಯೋಗಿಸಲು ಎಣ್ಣೆ ತುಂಬಿ ಜಗುಲಿಯ ಮೇಲೆ ಇದನ್ನು ಇಡುವರು.

ಜಜ್ಜುಕಲ್ಲು
(ನಾ)
ತದುಗಲ್ಲು, ಜಜ್ಜುವಕಲ್ಲು ಮಣ್ಣಿನ ಉಳ್ಳೆಗಳನ್ನು ಜಜ್ಜಿ ಅಗಲವಾದ ಹಲ್ಲೆಗಳನ್ನು ಮಾಡಲು ಬಳಸುವ ಕಲ್ಲು. ಹೆಣ್ಣು ಮಕ್ಕಳು ಕೈಯಿಂದ ಮಡಿಕೆ ಮಾಡುವಾಗ ಇದನ್ನು ಬಳಸುವರು. ಗಂಡಸರು ಗಡಿಗೆ ತಟ್ಟುವ ಕಲ್ಲಿನ ಹಾಗೆಯೇ ಇದರ ಆಕೃತಿ, ಗಾತ್ರದಲ್ಲಿ ದೊಡ್ಡದು.

ಜರಡಿ
(ನಾ)
ಸಾಣಿಗೆ - ನೋಡಿ


logo