logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಘಟಾಗ್ನಿ
(ನಾ)
ಕೊಡದೊಳಗಿನ ಬೆಂಕಿ

ಘಳಿಗೆ ಬಟ್ಟಲು
(ನಾ)
ಗಳಿಗೆ ಬಟ್ಟಲು, ಮಣ್ಣು ಇಲ್ಲವೆ ಗಾಜಿನಿಂದ ತಯಾರಿಸಿದ ಬಟ್ಟಲು ಪ್ರಾಚಾನ ಕಾಲದಲ್ಲಿ ವೇಳೆಯನ್ನು ತಿಳಿಯಲು ಮಾಡಿದ ಸಾಧನ. ಒಂದು ಬಟ್ಟಲಿನ ತಳದಲ್ಲಿ ಸಣ್ಣ ರಂಧ್ರ ಮಾಡಿ ಅದನ್ನು ನೀರಿನಲ್ಲಿ ತೇಲಿ ಬಿಡುತ್ತಿದ್ದರು. ಅದರಲ್ಲಿ ನೀರು ತುಂಬಿಕೊಂಡು ಮುಳುಗುವಷ್ಟು ಸಮಯಕ್ಕೆ ಒಂದು ಗಳಿಗೆ ಎಂದು ಕರೆಯುತ್ತಿದ್ದರು.

ಚಕ್ರ
(ನಾ)
ನೋಡಿ - ತಿಗುರಿ

ಚಕ್ರ ಕಾಣಿಕೆ
(ನಾ)
ತಿಗುರಿಯ ಮೇಲೆ ವಿಧಿಸುತ್ತಿದ್ದ ಕರ ಹಳೆಯ ಕಾಲದಲ್ಲಿ ಕುಂಬಾರಿಕೆ ವೃತ್ತಿಯ ಮೇಲೆ ತೆರಿಗೆ ವಿಧಿಸುತ್ತಿದ್ದ ಬಗೆಗೆ ಚರಿತ್ರೆಯಲ್ಲಿ ಸಾಕಷ್ಟು ದಾಖಲೆಗಳಿವೆ.

ಚಟಗಿ
(ನಾ)
ಚಟಿಗೆ, ಚಟಿಕೆ, ಚಿಕ್ಕ ಗಡಿಗೆ ಇದರ ಬಾಯಿ ಸ್ವಲ್ಪ ಅಗಲವಿರುವುದು ಇದನ್ನು ಪಲ್ಯ, ಸಾರು, ಅನ್ನ ಮಾಡಲು, ಹಾಲು, ಮೊಸರು, ಬೆಣ್ಣೆ ಹಾಕಿ ಇಡಲು ಬಳಸುವರು. ಗ್ರಾಮೀಣ ಪ್ರದೇಶದ ರೈತರು ಮನೆಯಲ್ಲಿ ಬೆಕ್ಕಿಗೆ ಸಿಗದಿರಲೆಂದು ಹಾಲು, ಮೊಸರು, ಬೆಣ್ಣೆಯನ್ನು ಚಟಿಗೆಗಳಲ್ಲಿ ಹಾಕಿ ನಿಲುವಿನಲ್ಲಿಟ್ಟು ತೂಗಿಬಿಡುವದನ್ನು ಈಗಲೂ ಕಾಣಬಹುದು. ಧಾರವಾಡ, ಹಾವೇರಿ, ವಿಜಾಪುರ, ಬೆಳಗಾವಿ ಜಿಲ್ಲೆಗಳಲ್ಲಿ ಕೆನೆಮೊಸರನ್ನು ಚಟಿಗೆಯಲ್ಲಿ ತುಂಬಿಟ್ಟ ಚಟಿಗೆಯನ್ನೆ ಮಾರುವರು. ಸುಣ್ಣದ ಚಟಿಗ್ಯಾಗ ತಣ್ಣೀರ ಹೊಯ್ದಾಂಗ (ಗಾದೆ)

ಚಟ್ಟಿ
(ನಾ)
ಮಡಿಕೆ, ತಟ್ಟೆ ಆಕಾರದ ಮಣ್ಣಿನ ಪಾತ್ರೆ, ಹೂ ಕುಂಡಕ್ಕೆ ಚಟ್ಟಿ ಎನ್ನುವ ಪದ ದಕ್ಷಿಣ ಕನ್ನಡದಲ್ಲಿ ಬಳಕೆಯಲ್ಲಿದೆ.

ಚಡೆ
(ನಾ)
ಆವಿಗೆಯ ಅಕ್ಕಪಕ್ಕದ ಗೋಡೆಯ ಮೇಲ್ಭಾಗ

ಚಪ್ಪನಿ
(ನಾ)
ಮಣ್ಣಿನ ಪಾತ್ರೆ, ಹಬ್ಬದ ಸಮಯದಲ್ಲಿ ಮುಸ್ಲಿಮ್ ಜನಾಂಗದವರು ಬಳಸುವ ಪಾತ್ರೆ ಬೀದರ ಜಿಲ್ಲೆಯಲ್ಲಿ ಹೆಚ್ಚಾಗಿ ಬಳಕೆಯಲ್ಲಿದೆ.

ಚರಗದ ಗಡಿಗೆ
(ನಾ)
ಚರಗದ ಸೋರೆ, ಹೊಲ - ಗದ್ದೆಗಳಲ್ಲಿ ಪೈರು ಕಾಳು ತುಂಬಿನಿಂತಾಗ ರೈತರು ಭೂತಾಯಿಗೆ ನೈವೇದ್ಯ ಅರ್ಪಿಸುವಾಗ ಹೊಸಗಡಿಗೆಯಲ್ಲಿ ಆಹಾರ ಪದಾರ್ಥಗಳನ್ನು ಇಟ್ಟುಕೊಂಡು ಹೋಗಲು ಬಳಸುವ ಗಡಿಗೆಗೆ ಚರಗದ ಗಡಿಗೆ ಎನ್ನುವರು.

ಚಾಚು ಕೋಲು
(ನಾ)
ಆವಿಗೆಯಲ್ಲಿ ಮಡಿಕೆಗಳನ್ನು ಸುಡುವಾಗ ಕಿಚ್ಚನ್ನು ಒಳಕ್ಕೆ ತಳ್ಳಲು ಬಳಸುವ ಉದ್ದವಾದ ಕವಲು - ಕಟ್ಟಿಗೆ. ಕೆಲವು ಪ್ರದೇಶದಲ್ಲಿ ಕುಂಬಾರರು ಇದರ ಹಿಂಭಾಗದಲ್ಲಿ ತಟ್ಟು ಕಟ್ಟಿ, ಅದು ಸುಡದಿರಲೆಂದು ಮಣ್ಣು ಮೆತ್ತಿ ಕಿಚ್ಚನ್ನು ತಳ್ಳುವರು.


logo