logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಗೇಯುವುದು
(ಕ್ರಿ)
ಚಕ್ರದಿಂದ ಮಡಕೆ ಮಾಡುವುದು.

ಗೇರು ಹಚ್ಚು
(ಕ್ರಿ)
ಸುಟ್ಟಾಗ ಬಿರಿಬಿಟ್ಟ ಮಡಕೆಗಳಿಗೆ, ಗೇರು ಹಾಲು, ಸುಣ್ಣ, ಬೂದಿ ಸೇರಿಸಿ ಕಣಕದ ಹಾಗೆ ಮಾಡಿ ಬಿರಿಬಿಟ್ಟ ಭಾಗಕ್ಕೆ ಹಚ್ಚುವುದು.

ಗ್ಲೇಸಿಂಗ್
(ಕ್ರಿ)
ಗಾಜು ಮೈಭರಿಸುವುದು, ಹೊಳಪುಮಾಡುವುದು, 'ಗ್ಲೇಸಿಂಗ್' ಕನ್ನಡದ ಧ್ವನಿಗೆ ಒಗ್ಗುವುದರಿಂದ 'ಗ್ಲೇಸಿಂಗ್' ಇಂಗ್ಲಿಷ್ ಪದ ಉಳಿಸಿಕೊಳ್ಳುವುದು ಉತ್ತಮ. ಗ್ಲೇಸಿಂಗ್ ಮಣ್ಣಿನ ವಸ್ತುಗಳಿಗೆ ಒಂದು ರೀತಿಯ ಅಲಂಕರಣವೆಂದು ಹೇಳಬಹುದು. ನಾವು ನಿತ್ಯ ಬಳಸುವ ಆಹಾರ ಬೇಯಿಸುವ ಮಣ್ಣಿನ ಮಡಕೆ, ಚಟಿಗೆಯನ್ನು ಗ್ಲೇಸಿಂಗ್ ಮಾಡುವದಿಲ್ಲ. ಚಹ ಕುಡಿಯುವ ಕಪ್ಪು ಬಸಿ, ಹೂಜಿ, ಉಪ್ಪಿನಕಾಯಿ ಭರಣಿ ಆಟಿಕೆ ಸಾಮಾನು, ಇತ್ಯಾದಿ ವಸ್ತುಗಳನ್ನು ಗ್ಲೇಸಿಂಗ್ ಮಾಡುವರು. ಗ್ಲೇಸಿಂಗ್ ಕುಂಭ ವಸ್ತುಗಳನ್ನು ಅಂದಗೊಳಿಸುವುದರ ಜೊತೆಗೆ ಅದು ಒಂದು ಕವಚವಾಗಿ ಕುಂಭದ ಬಲವನ್ನು ಹೆಚ್ಚಿಸುತ್ತದೆ. ಸಚ್ಛಿದ್ರತೆ ಮುಚ್ಚಿ ಹೋಗುತ್ತದೆ. ಸಮತಟ್ಟಾದ, ನುಣುಪಾದ ಮೈ ಉಂಟಾಗುವುದು. ಇದರಿಂದ ಕುಂಭ ವಸ್ತಿಗಳನ್ನು ಸ್ವಚ್ಛ ಮಾಡಲು ಅನುಕೂಲವಾಗುವದು. ಗ್ಲೇಸಿಂಗ್ ಮಾಡಲು ಉಪಯೋಗಿಸುವ ಲೋಹ ಮತ್ತು ಆಕ್ಸೈಡುಗಳಿಗೆ ಅನುಗುಣವಾಗಿ ಅನೇಕ ವಿಧಗಳಿವೆ.

ಗೊಂದಳ ಕೊಡ
(ನಾ)
ಲಕ್ಷ್ಮಿಪೂಜೆಯಲ್ಲಿ ಬಳಸುವ ಕೊಡ, ಬೀದರ ಜಿಲ್ಲೆಯಲ್ಲಿ ಬಳಕೆಯಲ್ಲಿದೆ.

ಗೊಂಬೆ
(ನಾ)
ಬೊಂಬೆ, ಮಣ್ಣಿನ ಗೊಂಬೆ, ಆಟಿಕೆ ಗೊಂಬೆ, ಮಣ್ಣಿನಿಂದ ಕುಂಬಾರರು ವಿವಿಧ ಬಗೆಯ ಗೊಂಬೆ ಮಾಡುವರು. ಮಂತ್ರದ ಗೊಂಬೆ, ದೃಷ್ಟಿ ಗೊಂಬೆ. ಬೀದರ್ ಜಿಲ್ಲೆಯಲ್ಲಿ ಮಣ್ಣಿನ ಗೊಂಬೆಯನ್ನು ಮಾಡುವ ಕುಂಬಾರರ ಪಂಗಡ ಒಂದಿದೆ ಅವರನ್ನು ಗೊಂಬಿ ಕುಂಬಾರರು ಎಂದು ಕರೆಯಲಾಗುತ್ತದೆ. ಬಂಗಾಲದ ಕೃಷ್ಣನಗರದ ಮಣ್ಣಿನ ಗೊಂಬೆಗಳು ಲೋಕ ಪ್ರಸಿದ್ಧವಾಗಿವು. ಹಾಗೆಯೆ ಪಾಂಡೆಚೇರಿ ಮಣ್ಣಿನ ಗೊಂಬೆಗಳು ಪ್ರಸಿದ್ಧವಾಗಿವೆ. ಹರಪ್ಪ ಮೊಹಂಜೊದಾರ ಉತ್ಖನನದಲ್ಲಿ ಅನೇಕ ಪ್ರಾಣಿ, ಪಕ್ಷಿ, ಮಕ್ಕಳಾಟಿಕೆಯ ಗೊಂಬೆಗಳು ದೊರೆತಿವೆ.

ಗೆರೆ ಎಳೆಯುವ ಮೊಳೆ
(ನಾ)
ಮಡಕೆ ಇನ್ನೂ ಸ್ವಲ್ಪ ಹಸಿ ಇರುವಾಗ ಮಡಕೆಯ ಕಂಠದ ಕೆಳಗೆ, ಸೊಂಟದ ಭಾಗಕ್ಕೆ ಗೆರೆ ಎಳೆದು ಅಂದಗೊಳಿಸಲು ಉಪಯೋಗಿಸುವ ಕಬ್ಬಿಣದ ಚಿಕ್ಕ ಮೊಳೆ.

ಗೊಬ್ಬಿ
(ನಾ)
ಗೊಬ್ಬೆ ಹೆಂಡದ ಮಡಿಕೆ, ಈಚಲ ಮರದಿಂದ ಕಳ್ಳು ತೆಗೆಯಲು ಕಟ್ಟುವ ಗಡಿಗೆ. ದಕ್ಷಿಣ ಕನ್ನಡದಲ್ಲಿ ಹೆಂಡ ತೆಗೆಯಲು ತಾಳೆಮರಕ್ಕೆ ಗಡಿಗೆ ಕಟ್ಟುವರು. ಸುಟ್ಟು ಏಡಿ ಮರ ಹತ್ತೈತಿ (ಒಗಟು)

ಘಟ
(ನಾ)
ಘಟಕೆ, ಗಡಿಗೆ, ಮಣ್ಣಿನ ಪಾತ್ರೆ, ಬಾವಿಯಿಂದ ನೀರು ತರಲು ಬಳಸುತ್ತಿದ್ದರೆಂದು ಮಹಾಭಾಷ್ಯದಲ್ಲ ಅನೇಕ ಕಡೆ ಹೇಳಲಾಗಿದೆ. ಘಟ ಪದವನ್ನು ದೇಹಕ್ಕೆ ಹೋಲಿಸುವರು. "ಘಟವ ಮಾಡಿದವ ಘಟದಲ್ಲಿರದಂತೆ" (ನಗೆಯ ಮಾರಿತಂದೆ) "ಧಾನ್ಯ ಹೊಯಿದಿದ್ದ ಘಟ ಅಳತೆಗೆ ಬಪ್ಪುದೆ?" (ಮೋಳಿಗೆ ಮಾರಯ್ಯ)
">

ಘಟಂ
(ನಾ)
ಗಡಿಗೆ, ಇದನ್ನು ವಾದ್ಯವಾಗಿ ಬಳಸುವರು. ಇದರ ಬಾಯಿ ಸ್ವಲ್ಪ ಅಗಲವಾಗಿದ್ದು. ಅದನ್ನು ಬೋರಲಾಗಿ ಇಟ್ಟು ಇಲ್ಲವೆ ಹೊಟ್ಟೆಗೆ ಆನಿಸಿಕೊಂಡು ಎರಡೂ ಕೈ ಬೆರಳುಗಳಿಂದ ಬಡಿಯುತ್ತಾ ಹೋದಂತೆಲ್ಲಾ ಶುಶ್ರಾವ್ಯವಾದ ನಾದ ಹೊರಹೊಮ್ಮುತ್ತದೆ. ದಕ್ಷಿಣ ಭಾರತದ ಸಂಗೀತ ಕಛೇರಿಗಳಲ್ಲಿ "ಘಟಂ ವಾದ್ಯ" ಪ್ರಸಿದ್ದವಾಗಿದೆ. ಪಾಲ್ಘಾಟ್ ಸುಬ್ರಹ್ಮಣ್ಯ ಅಯ್ಯರ್ ಘಟ ನುಡಿಸುವುದರಲ್ಲಿ ಪ್ರಸಿದ್ಧರಾಗಿದ್ದಾರೆ.
">

ಘಟ ಸ್ಥಾಪನೆ
(ಕ್ರಿ)
ದಸರಾ ಹಬ್ಬದಲ್ಲಿ ಮಣ್ಣಿನ ತಟ್ಟೆಯಲ್ಲಿ ಮಣ್ಣು ತುಂಬಿ ವಿವಿಧ ಧಾನ್ಯಗಳನ್ನು ಹಾಕಿ ಜಗುಲಿಯ ಮೇಲಿಟ್ಟು ಹತ್ತು ದಿನಗಳ ಕಾಲ ಅದಕ್ಕೆ ನೀರು ಹಾಕಿ ಪೂಜಿಸುವ ವಿಧಾನ.


logo