logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಕಲಸು
(ಕ್ರಿ)
ಮಣ್ಣನ್ನು ಕಲಸು, ಕುಂಬಾರರು ಮಡಕೆ ಮಾಡುವ ಮಣ್ಣಿಗೆ ನೀರು ಹಾಕಿ ಕಲಸುವರು.

ಕಲ್ಲಿ
(ನಾ)
ಜಾಳಿಗೆ, ನಾರಿನಿಂದ ತಯಾರಿಸುವರು. ಕುಂಬಾರರು ಇದರಲ್ಲಿ ಗಡಿಗೆಗಳನ್ನು ಕಟ್ಟಿಕೊಂಡು ತಲೆಮೇಲೆ ಹೊತ್ತು ಮಾರಾಟಕ್ಕೆ ಹೋಗುವರು ಮತ್ತು ಉರುವಲು ಸೊಪ್ಪು ತರಲು ಕೂಡ ಬಳಸುವರು. "ಗಾಳೀಯ ಹಿಡಿದು ಗಡಿಗ್ಯಾಗ ತುಂಬಿ ಕಲ್ಲೀಗ ಹೇರಲೇನ" (ಸೋಮಶೇಖರ ಇಮ್ರಾಪುರ)
">

ಕಲ್ಗುಂಡು
(ನಾ)
ಹಿಡಗುಂಡು, ಹರಿಗಲ್ಲು, ತಟ್ಟುವ ಕಲ್ಲು, ಲಿಂಗಾಕಾರದ ಕಲ್ಲು ಹಸಿ ಮಡಿಕೆಗಳನ್ನು ತಟ್ಟಲು ಇದನ್ನು ಬಳಸುವರು. ಕಲ್ಗುಂಡೆಗಳಲ್ಲಿ ಚಿಕ್ಕ, ಮಧ್ಯ ಮತ್ತು ದೊಡ್ಡ ಗಾತ್ರದವು ಇರುತ್ತವೆ.

ಕಲ್ಲುಗಡಗಿ
(ನಾ)
ತಳದಪ್ಪವಿರುವ ಮಧ್ಯಮ ಗಾತ್ರದ ಗಡಿಗೆ. ಉಪ್ಪು ಎಣ್ಣೆ ಇತ್ಯಾದಿ ವಸ್ತುಗಳನ್ನು ಹಾಕಿಡಲು ಇದನ್ನು ಬಳಸುವರು.

ಕವಳಿ
(ನಾ)
ಬೆಣ್ಣೆಯಂತೆ ತಿಳಿಯಾಗಿರುವ ಮಣ್ಣು, ಚಕ್ರದ ಮೇಲೆ ಮಡಿಕೆ ಮಾಡುವಾಗ ಕೈಯಲ್ಲಿ ಸಂಗ್ರಹವಾಗುವ ತಿಳು ಮಣ್ಣು.

ಕವಳಿ ಗಡಿಗೆ
(ನಾ)
ಕೆಸರಿನ ಗಡಿಗೆ, ಮಡಿಕೆ ತಯಾರಿಸುವಾಗ ಕೈಯಲ್ಲಿ ಸಂಗ್ರಹವಾಗುವ ತೆಳುವಾದ ಹೆಚ್ಚುವರಿಯಾಗಿ ಬಂದ ಈ ಕವಳಿ ಮಣ್ಣನ್ನು ಚಕ್ರದ ಪಕ್ಕದಲ್ಲಿರುವ ಕವಳಿ ಗಡಿಗೆಗೆ ತೆಗೆದು ಹಾಕುವರು.

ಕವಳಿದಾರ
(ನಾ)
ತಿಗುರಿಯಮೇಲೆ ತಯಾರಿಸಿದ ಗಡಿಗೆಯನ್ನು ಕೊರೆದು ಚಕ್ರದಿಂದ ಬೇರ್ಪಡಿಸಲು ಬಳಸುವ ದಾರ, ಇದಕ್ಕೆ ಕೊರೆದಾರ, ಚಟಿದಾರ ಎಂದು ಕರೆಯುವರು. ಕವಳಿ ಚಟಿಗೆಯಲ್ಲಿ ಕವಳಿದಾರ ಇರುವುದನ್ನು ಚಿತ್ರದಲ್ಲಿ ಕಾಣಬಹುದು.

ಕವೆಗೋಲು
(ನಾ)
ಆವಿಗೆಯಲ್ಲಿ ಗಡಿಗೆಗಳನ್ನು ಸುಡುವಾಗ ಕಿಚ್ಚನ್ನು ಉರುವಲನ್ನು ಆವಿಗೆ ಒಳಕ್ಕೆ ಚಾಚಲು ಬಳಸುವ ಕೋಲು. ಇದಕ್ಕೆ ಬ್ಯಾಕೋಲು ಎಂದು ಕೂಡ ಕರೆಯುವರು. ಕಬ್ಬಿಣದ ಸಲಾಕೆಯನ್ನು ಕೂಡ ಇದಕ್ಕೆ ಉಪಯೋಗಿಸುವರು.

ಕಳಸ
(ನಾ)
ಕಲಶ, ಕುಂಭ, ಕೊಡ, ಧಾರ್ಮಿಕ ಆಚರಣೆಯ ಸಂದರ್ಭಗಳಲ್ಲಿ ಬಳಸುವ ಒಂದು ಬಗೆಯ ಪವಿತ್ರ ಕುಂಭ. ಶುಭ ಕಾರ್ಯಗಳನ್ನು ಆರಂಭಿಸುವಾಗ ಕಲಶ ಪೂಜೆ ಮಾಡುವ ಸಂಪ್ರದಾಯವಿದೆ ಉತ್ತರ ಕನ್ನಡದಲ್ಲಿ ಬಂಡಿ ಹಬ್ಬದಂದು ಕಲಶವನ್ನು ಕೂಡ್ರಿಸಿ ವಿಜೃಂಭಣೆಯಿಂದ ಪೂಜಿಸುವರು. ಕಲಶ ಪೂಜೆಯನ್ನು ಶೈವ, ವೈಷ್ಣವ, ಜೈನ ಎಲ್ಲ ಧರ್ಮದವರು ಪೂಜಿಸುವರು. ಗಂಡು ಹುಟ್ಟಿದರೆ ಚಿನ್ನದ ಕಳಸ ಹೆಣ್ಣು ಹುಟ್ಟಿದರೆ ಮಣ್ಣಿನ ಕಳಸ (ಗಾದೆ)

ಕಳಸದ ಚಂಬು
(ನಾ)
ನೋಡಿ - ಕಳಸ


logo