logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಕುಡಕಿ ಬಿರುಸು
(ನಾ)
ಮಸಿ ಗಡಿಗೆ, ಮದ್ದಿನ ಕುಡಕಿ

ಕುದುಬಿನ ಸೊಳ
(ನಾ)
ಗಡಿಗೆಗಳನ್ನು ತಟ್ಟಲು ಮೊದಲ ಹಂತದಲ್ಲಿ ಉಪಯೋಗಿಸುವ ಸೊಳ.

ಕುದುರು
(ನಾ)
ಮಡಿಕೆಗಳ ಕಂಠ

ಕುದುಪೆ
(ನಾ)
ಹಾಲು ಕಾಯಿಸಲು ಮತ್ತು ಮೊಸರು ಹೆಪ್ಪು ಹಾಕಲು ಬಳಸುವ ಗಡಿಗೆ, ತುಳುಪದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಳಕೆಯಲ್ಲಿದೆ.

ಕುದುಮು
(ಕ್ರಿ)
ತಟ್ಟು ಬಡಿ, ಸೊಳದಿಂದ ಮಡಿಕೆಗಳನ್ನು ತಟ್ಟುವುದು.

ಕುರುಪಿ
(ನಾ)
ಮಣ್ಣನ್ನು ಅಗೆದು ತರಲು ಬಳಸುವ ಸಾಧನ

ಕುಲುವಲಿಗೆ
(ನಾ)
ಸೊಳ, ಮಡಿಕೆ ತಟ್ಟಲು ಬಳಸುವ ಸಲಕರಣೆ ಇದನ್ನು ಕಟ್ಟಿಗೆಯಿಂದ ತಯಾರಿಸುವರು ಕಲ್ಲಿನ ತೆಳುವಾದ ಹಲಗೆಯಿಂದಲೂ ಮಾಡುವರು.

ಕುಲಾಲ
(ನಾ)
ಕುಂಬಾರ, ಕುಲಾಲ ಎಂಬ ಮಾತು ವೈದಿಕ ವಾಙ್ಮಯದಲ್ಲಿಯೂ ಮಧ್ಯಕಾಲೀನ ಗ್ರಂಥಗಳಲ್ಲಿ ಹೆಚ್ಚು ಬಳಕೆಯಲ್ಲಿದೆ. ದಕ್ಷಿಣ ಕನ್ನಡದಲ್ಲಿ ಈ ಪದ ವ್ಯಾಪಕವಾಗಿ ಬಳಕೆಯಲ್ಲಿದೆ.

ಕುಲಾಲಕರಣ
(ಕ್ರಿ)
ಕುಂಬಾರಿಕೆ. Doing the work of potter

ಕುಲಾಲ ಚಕ್ರ
(ನಾ)
ಕುಂಬಾರನ ತಿಗುರಿ, ಚಕ್ರ, ಮಡಕೆ ಮಾಡುವ ಚಕ್ರ.


logo