logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಕುಂಬಾರ ಗುಂಡಿ
(ನಾ)
ಮಡಿಕೆಗಳನ್ನು ಮಾಡಲು ಮಣ್ಣು ತರುವ ಸ್ಥಳ, ಮಡಿಕೆ ಮಾಡಲು ಯೋಗ್ಯವಾದ ಮಣ್ಣು ತರಲು,ಕೆರೆ, ಹೊಂಡ ಹಳ್ಳ,ಹೊಲಗಳಲ್ಲಿ ನಿರ್ದಿಷ್ಟವಾದ ಸ್ಥಳ ಇರುವುದು. ಅದಕ್ಕೆ ಕುಂಬಾರ ಗುಂಡಿ ಎಂದು ಹೆಸರು. ಮಡಿಕೆ ಮಾಡಲು ತಂದ ಮಣ್ಣನ್ನು ಒಂದು ಸ್ಥಳದಲ್ಲಿ ಶೇಖರಿಸಿ ಇಡುವ ಸ್ಥಳಕ್ಕೂ ಮಣ್ಣುಗುಂಡಿ ಎನ್ನುವುದುಂಟು.

ಕುಂಬಾರ ಗೇಣಿ
(ನಾ)
ಕುಂಬಾರಿಗೆ ಕೊಡುವ ಆಯ

ಕುಂಬಾರ ಶೆಟ್ಟಿ
(ನಾ)
ಕುಂಬಾರಶೆಟ್ರು, ಮಡಿಕೆ ವ್ಯಾಪಾರಿ, ಗಡಿಗೆಗಳ ವ್ಯಾಪಾರ ಮಾಡುವ ಕುಂಬಾರರು ತಮ್ಮ ಹೆಸರಿನ ಮುಂದೆ ‘ಶೆಟ್ರು’ ಎಂಬ ಪದವನ್ನು ಸೇರಿಸಿಕೊಳ್ಳುವ ವಾಡಿಕೆಯುಂಟು. ಉದಾ: ಬಸಪ್ಪ ಶೆಟ್ಟಿ ಸಿದ್ದನಂಜ ಶೆಟ್ಟಿ, ತುಮಕೂರು ಚಿಕ್ಕಮಗಳೂರು, ಹಾಸನ ಕಡೆಗಳಲ್ಲಿ ಈ ಪದ ಬಳಕೆಯಲ್ಲಿದೆ.

ಕುಂಬಾರ ಸಾಲೆ
(ನಾ)
ಮಡಕೆಗಳನ್ನು ಮಾಡುವ ಮನೆ, ಕುಂಭ ಶಾಲಾ, ಮಡಕೆಗಳನ್ನು ತಯಾರಿಸುವ ಕಾರ್ಯಗಾರ.

ಕುಂಬಾರ ಹಸಕ
(ನಾ)
ಕುಂಬಾರ ಅಂಗಡಿ potter’s shop.

ಕುಂಭ
(ನಾ)
ಘಟಗುಂಭ, ನೀರಿನಗಡಿಗೆ, ಕೊಡ, ಕಲಶ, ಮಡಿಕೆ, ಬಾವಿಯಿಂದ ನೀರನ್ನು ತರುವ ಮಡಿಕೆಗೆ ಕುಂಭ ಎನ್ನುವರು. ಕುಂಭಗಳಲ್ಲಿ ವಿವಿಧ ಪ್ರಕಾರಗಳಿವೆ ಶಿಲಾಶಾಸನಗಳಲ್ಲಿ ಮತ್ತು ಗ್ರಂಥಗಳಲ್ಲಿ ಮಂಗಳ ಕುಂಭ, ಪೂರ್ಣಕುಂಭ ಮಂಗಳ ಫಟ ಎಂಬ ಹೆಸರಿನಿಂದ ಉಲ್ಲೇಖಿಸಿದ್ದಾರೆ. 'ತೋಯವಿಲ್ಲದ ಕುಂಭ ಜ್ಞಾನವಿಲ್ಲದ ಫಟ ದೇವರಿಲ್ಲದ ಗುಡಿ ಇವು ಹಾಳು ದೇಗುಲಕ್ಕೆ ಸಮವು.' (ಅಂಬಿಗರ ಚೌಡಯ್ಯ) 'ಕೊಟ್ಟಿಗೆ ತುಂಬ ಕರುಗಳ ಅಂಬಾ ಆಕಳ ಕೆಚ್ಚಲು ಅಮೃತ ಕುಂಭ.' (ಕೆ.ಎಸ್. ನಿಸಾರ್ ಅಹಮದ್)

ಕುಂಭಶಾಖ
(ನಾ)
ಕಾದ ಮಡಿಕೆಯಿಂದ ಕೊಡುವ ಶಾಖ

ಕುಂಭಾಲಂಕರಣ
(ವಿ)
ಮಡಕೆ ಕುಡಿಕೆಗಳನ್ನು ಮಣಿಸರ ಗಜ್ಜುಗದಿಂದ ಉಜ್ಜಿ ಇಲ್ಲವೆ ಮೆರುಗಣ್ಣೆ ಬಳಿದು ಬಣ್ಣ ಹಾಕಿ ಅಂದಗೊಳಿಸುವುದು. ಅರೆಹಸಿ ಇದ್ದಾಗ ಮಡಕೆಗಳ ಮೈಮೇಲೆ, ಬಗೆ ಬಗೆಯ ಹೂ ಬಳ್ಳಿ ಚಿತ್ರಗಳನ್ನು ಅಚ್ಚಿನಿಂದ ಒತ್ತಿ ಅಲಂಕಾರ ಮಾಡುವರು. ಕುಂಭಾಲಂಕರಣದಲ್ಲಿ ಬೇರೆ, ಬೇರೆ ವಿಧಾನಗಳಿವೆ.

ಕುಂಭೇಶ್ವರ
(ನಾ)
ಕುಂಬಾರ ಜನಾಂಗದ ದೇವರು. ಕೋಲಾರ ಜಿಲ್ಲೆಯ ಹಲವಾರು ಕಡೆ ಕುಂಭೇಶ್ವರ ದೇವಸ್ಥಾನಗಳಿವೆ ಕಾರ್ತೀಕ ಮಾಸದಲ್ಲಿ ವಿಶೇಷವಾದ ಪೂಜೆ ನಡೆಯುತ್ತದೆ.

ಕುಡಕಿ
(ನಾ)
ಚಿಕ್ಕ ಗಡಿಗೆ ಮಡಿಕೆ-ಕುಡಿಕೆ ಜೋಡುಪದ, ಪಲ್ಯ, ಅನ್ನ, ಸಾರು, ಅಂಬ್ಲಿ ಮೊದಲಾದ ಆಹಾರ ಪದಾರ್ಥಗಳನ್ನು ತಯಾರಿಸಲು ಇದನ್ನು ಬಳಸುವರು. ಮತ್ತು ಹಾಲು, ಮೊಸರು, ತುಪ್ಪ, ಎಣ್ಣೆ, ಬೆಣ್ಣೆ, ಹಣ ಹಾಕಿಡಲು ಇದನ್ನು ಬಳಸುವರು. 'ಮಾತಿನಲ್ಲಿ ಆಗದವನ ಮನದಲ್ಲಿ ತೂತಿನ ಕುಡಿಕೆಯ ಆಶೆ' (ನಗೆ ಮಾರಿತಂದೆ) ಕೂತು ಉಂಡರೆ ಕುಡಿಕೆ ಹೊನ್ನು ಸಾಲದು (ಗಾದೆ) ಮಡಕೆ ಲಾಭಕುಡಿಕೇಲೆ ಹೋಯ್ತು (ಗಾದೆ)


logo