logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಕೋವ
(ನಾ)
ಕೋವರ, ಕುಂಬಾರ ಕೋವರ ಚಕ್ರಂ ತಿರಿವ ತೆರದೆ ತಿರಿದೆತ್ತೆನಸುಂ (ರನ್ನ)

ಕೋಳಿಫಾರ್ಮಗಡಿಗೆ
(ನಾ)
ಕೋಳಿ ಫಾರ್ಮಗಳಲ್ಲಿ ಕೋಳಿಗಳಿಗೆ ಕಾವು ಕೊಡಲು ಬಳಸುವ ಮಡಿಕೆ ಈ ಗಡಿಗೆಗಳ ಸೊಂಟದ ಭಾಗದಲ್ಲಿ ಸುತ್ತಲೂ ಎರಡು ಸಾಲು ಚಿಕ್ಕ ಚಿಕ್ಕ ರಂಧ್ರಗಳನ್ನು ಮಾಡಿ, ಅದರಲ್ಲಿ ಬೆಂಕಿಕೆಂಡಗಳನ್ನು ಹಾಕಿ ಫಾರ್ಮಗಳಲ್ಲಿ ಇಡುವರು.

ಕೌಳಿ
(ನಾ)
ತಿಗುರಿಯಿಂದ ಮಡಕೆಗೇಯುವಾಗ ಹಾಗೂ ಕುಂಬಾರಗಿತ್ತಿಯರು ಕೈಗಡಿಗೆ ತೀಡುವಾಗ ಬಟ್ಟೆಯಿಂದ ಆಕೃತಿಯನ್ನು ತೀಡುವ ಸಂದರ್ಭದಲ್ಲಿ ಬರುವ ಅತಿ ತೆಳುವಾದ ಮಣ್ಣು. ನೋಡಿ-ಕವಳಿಗಡಿಗೆ

ಖಣಿಕುಳ್ಳಿ
(ನಾ)
ಖಣಿಗಡಿಗೆ ಕುದರೆಲದ್ದಿ ಮಿಶ್ರಣ ಮಾಡದೆ ತಯಾರಿಸುವ ಮಡಕೆ

ಖಪ್ಪುರ
(ನಾ)
ಒಡೆದ ಮಡಕೆ ಚೂರು, ಬೋಕಿ, ಬೀದರ ಜಿಲ್ಲೆಯಲ್ಲಿ ಈ ಪದ ಬಳಕೆಯಲ್ಲಿದೆ.

ಖಫರೋಳಿಗೆ
(ನಾ)
ಮನೆಮಾಳಿಗೆ ಹಂಚು, ಬೀದರ ಜಿಲ್ಲೆಯಲ್ಲಿ ಈ ಪದ ಬಳಕೆಯಲ್ಲಿದೆ.

ಖಾಸದಾನ
(ನಾ)
ಪಾನಪಟ್ಟಿ ಇಡುವ ಮಣ್ಣಿನ ಪಾತ್ರೆ ಬೇಸಿಗೆ, ಕಾಲದಲ್ಲಿ ಎಲೆಗಳು ಬಾಡದಂತೆ ಇಡಲು ಅಂದವಾಗಿ ತಯಾರಿಸಿದ ಪಾತ್ರೆ. ಲಖೌನದ ಖಾಸ ದಾನಗಳು ತುಂಬಾ ಪ್ರಸಿದ್ಧವಾಗಿವೆ.

ಖುದಬಾಡ
(ನಾ)
ಸೊಳಗಳಲ್ಲಿ ಒಂದು ವಿಧ. ಬೀದರ ಜಿಲ್ಲೆಯಲ್ಲಿ ಈ ಪದ ಬಳಕೆಯಲ್ಲಿದೆ.

ಗಗರಿ
(ನಾ)
ಮಣ್ಣಿನ ಕೊಡ, ಹಿಂದಿ ಶಬ್ದ.

ಗಟಗಡ್ಲೆ
(ನಾ)
ದೀಪ ಹಚ್ಚಲು ಬಳಸುವ ಮಣ್ಣಿನ ಪಾತ್ರೆ, ಪಣತಿ.


logo