logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಕುಲಾಲಿ
(ನಾ)
ಕುಂಬಾರತಿ, ಕುಂಬಾರಗಿತ್ತಿ The wife of a potter

ಕುಳ್ಳಿ
(ನಾ)
ಮಿಳ್ಳಿ, ಗಿಂಡಿ, ಚಿಕ್ಕಗಡಿಗೆ ಮೊಸರು ಮಜ್ಜಿಗೆ ಹಾಕಿಡಲು ಬಳಸುವರು. ಮಸಿದೌತಿ

ಕೂನಿ
(ನಾ)
ಮುಸರಿಗಡಗಿ

ಕೆಂಡ ಎತ್ತುವ ಜಾಲರಿ
(ನಾ)
ಆವಿಗೆ ಸುಡುವಾಗ ಕುಂಬಾರರು ಬಳಸುವ ಸಾಧನ

ಕೇಲು
(ನಾ)
ಸಣ್ಣ ಕೊಡ, ಕಲಶ, ಐರಾಣಿಗಳಲ್ಲಿ ಒಂದು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಇದರಲ್ಲಿ ನೀರು ತುಂಬಿ, ಕಂಠದ ಸುತ್ತಲು ಮಾವಿನ ಎಲೆಗಳನ್ನಿಟ್ಟು ಅವುಗಳ ಮೇಲೆ ತೆಂಗಿನ ಕಾಯಿ ಇಟ್ಟು ಅರಿಶಿಣ ಕುಂಕುಮ ಹಚ್ಚಿ ಪೂಜಿಸುವರು ಗ್ರಾಮದೇವತೆಗಳ ಉತ್ಸವದಲ್ಲಿ ಕುಂಬಾರರ ಮನೆಯಿಂದ ಕೇಲನ್ನು ಭಕ್ತಿಯಿಂದ ಒಯ್ಯುವ ಪದ್ಧತಿ ಕೆಲವು ಕಡೆ ಇದೆ.

ಕೈ
(ನಾ)
ಪಾತ್ರೆ ಆಕಾರದ ಮಡಕೆ. ಮದುವೆ, ಮೊದಲಾದ ಸಮಾರಂಭಗಳಲ್ಲಿ ಸಾರು ಬಡಿಸಲು ಇದನ್ನು ಉಪಯೋಗಿಸುವರು. ಅದಕ್ಕೆ ಮುಂದುಗಡೆ ಮೂತಿ ಇರುತ್ತದೆ. ಕೆಲವೆಡೆ ಕೈ ಒಳಲೆ ಎಂದು ಕರೆಯುವರು.

ಕೈಗಡಿಗೆ
(ನಾ)
ಕೈಯಿಂದ ತಯಾರಿಸುವ ಮಡಕೆ, ಕುಂಬಾರ ಹೆಣ್ಣು ಮಕ್ಕಳು ಕೈಯಿಂದ ತಯಾರಿಸುವ ಪಾತ್ರೆಗಳು.

ಕೈಪಣತಿ
(ನಾ)
ಕೈದೀಪ, ಬೇಕಾದಾಗ ಮನೆಯೊಳಗೆ ಹಿಡುದುಕೊಂಡು ಓಡಾಡಲು ಅನುಕೂಲವಾದ ಮಣ್ಣಿನ ಪಣತಿ.

ಕೈಪಾಳಿ
(ನಾ)
ಮುಚ್ಚುಳ

ಕೈಸಾಮಾನು
(ನಾ)
ಕೈಯಿಂದ ಮಾಡಿದ ಕುಡಿಕಿ, ಚಟಕಿ, ಬೋಗುಣಿ ಮುಂತಾದ ಮಣ್ಣಿನ ವಸ್ತುಗಳು.


logo