logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಕುಂದ
(ನಾ)
ಮಣ್ಣಿನ ಬೋಗುಣಿ, ಹಸಿ ಇದ್ದಾಗ, ಇದರ ತಳದಲ್ಲಿ ಚಿಕ್ಕ ಚಿಕ್ಕ ಚೂಪಾದ ಬೆಣಚು ಕಲ್ಲುಗಳನ್ನು ನೆಟ್ಟು ತಯಾರಿಸಿದ ಪಾತ್ರೆ. ಅಲೆಮಾರಿ ಜನ ಮೆಣಸಿನಕಾಯಿ ಪುಡಿ, ಹಿಂಡಿ ಇತ್ಯಾದಿ ತಯಾರಿಸಲು ಬಳಸುವರು. ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಈ ಕುಂದದ ಬಳಕೆ ಕಂಡು ಬರುವುದು. ಅಲೆಮಾರಿಗಳು ಇದನ್ನು ಹೆಚ್ಚಾಗಿ ಉಪಯೋಗಿಸುವರು. ಮಣ್ಣಿನ ಬೋಗುಣಿ, ಹಸಿ ಇದ್ದಾಗ, ಇದರ ತಳದಲ್ಲಿ ಚಿಕ್ಕ ಚಿಕ್ಕ ಚೂಪಾದ ಬೆಣಚು ಕಲ್ಲುಗಳನ್ನು ನೆಟ್ಟು ತಯಾರಿಸಿದ ಪಾತ್ರೆ. ಅಲೆಮಾರಿ ಜನ ಮೆಣಸಿನಕಾಯಿ ಪುಡಿ, ಹಿಂಡಿ ಇತ್ಯಾದಿ ತಯಾರಿಸಲು ಬಳಸುವರು. ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಈ ಕುಂದದ ಬಳಕೆ ಕಂಡು ಬರುವುದು. ಅಲೆಮಾರಿಗಳು ಇದನ್ನು ಹೆಚ್ಚಾಗಿ ಉಪಯೋಗಿಸುವರು.

ಕುಕ್ಕುಮಣಿ
(ನಾ)
ಅಚ್ಚು ಕುಕ್ಕುವ ಸೊಳ, ಅದರ ಮುಂಭಾಗದ ಹಲಗೆಯಲ್ಲಿ ಅಚ್ಚನ್ನು ಕೂರಿಸಲು ರಂಧ್ರ ಮಾಡಿರುತ್ತಾರೆ. ಮಡಕೆಗಳನ್ನು ಅಲಂಕಾರ ಮಾಡಲು ಅವು ಸ್ವಲ್ಪ ಹಸಿ ಇರುವಾಗಲೆ ಕುಕ್ಕುಸೂಳದಿಂದ ಕಂಠದ ಬದಿ, ಸೊಂಟಕ್ಕೆ ಅಚ್ಚನ್ನು ಒತ್ತುವರು.

ಕುದುರು
(ಕ್ರಿ)
ಆವಿಗೆಯಲ್ಲಿ ಹಸಿಮಡಕೆಯನ್ನು ಸುಡಲು ಕ್ರಮವಾಗಿ ಜೋಡಿಸುವುದು. ಹಸಿಮಡಕೆಗಳನ್ನು ಜೋಡಿಸಲು ತಳದಲ್ಲಿ ದೊಡ್ಡ ಗಾತ್ರದ ಸುಟ್ಟ ಮಡಕೆಯ ಕಂಠಗಳನ್ನು ಬಳಸಿ ಅದರ ಮೇಲೆ ಹಸಿ ಮಡಕೆಗಳನ್ನು ಜೋಡಿಸುವುದು. ಇದರಿಂದಾಗಿ ಹಸಿ ಮಡಕೆಗಳಿಗೆ ಯಾವ ಹಾನಿಯು ಆಗುವುದಿಲ್ಲ ಬೇಯುವವರೆಗೆ ಸುರಕ್ಷಿತವಾಗಿರುತ್ತವೆ. ಈ ಪದ ಕರ್ನಾಟಕದಲ್ಲಿ ಹೆಚ್ಚಾಗಿ ಬಳಕೆಯಲ್ಲಿದೆ

ಕುಂದಾಲಗಡಿಗೆ
(ನಾ)
ಕಂದಲುಗಡಿಗೆ ಅರಣಿಗಡಿಗೆ ದಕ್ಷಿಣ ಕರ್ನಾಟಕದಲ್ಲಿ ಬಳಕೆಯಲ್ಲಿದೆ.

ಕುಂಬರಗೋಲ್
(ನಾ)
ತಿಗುರಿಕೋಲು, ಚಕ್ರವನ್ನು ತಿರುಗಿಸುವ ಕೋಲು, ತಿಗುರಿ ಬಡಿಗೆ

ಕುಂಬಾರ
(ನಾ)
ಕುಂಬಿಗ, ಬಾಂಬಕೋವ, ಮಣ್ಣಿನಿಂದ ಮಡಿಕೆ ಮಾಡುವವ. ಕುಂಭಕಾರ ಕುಂಭಾರ, ಕುಮ್ಮಾರ, ಕುಬೇರ, ಕುಂಬಾರ ಕುಂಭರ ಖುಂಭಾರ, ಸಜ್ಜನಕುಂಬಾರ ಇವೇ ಮೊದಲಾದ ಹೆಸರಿನಿಂದ ಕುಂಬಾರರು ಕರೆಯಲ್ಪಡುವರು “ಕುಂಭಂ ಕರೋತಿ ಇತಿಃ” “ಕುಂಭಕಾರ” ತಮಿಳಿನಲ್ಲಿ ಕುಶವನ್, ತೆಲುಗಿನಲ್ಲಿ ಕುಮ್ಮರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಲಾಲ, ಉತ್ತರ ಕನ್ನಡ ಕರಾವಳಿ ಪ್ರದೇಶದಲ್ಲಿ ಗುನಗ, ಧಾರವಾಡ, ಹಾವೇರಿ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳಲ್ಲಿ ಚಕ್ರಸಾಲಿ, ಮೈಸೂರು ಪ್ರದೇಶದಲ್ಲಿ ಗುಂಡಾಭಕ್ತ ಎಂದು, ತುಳುವಿನಲ್ಲಿ ಮೂಲ್ಯ, ಓಡಾರಿ ಎಂದು ಕರೆಯಲ್ಪಡುವರು. ಜೈನ, ವೀರಶೈವ, ವೈಷ್ಣವ, ಬೌದ್ಧ ಜೈನ, ಸಿಕ್, ಮುಸ್ಲಿಮ್, ಕ್ರಿಶ್ಚಿಯನ್, ಧರ್ಮಗಳಲ್ಲೂ ಕುಂಬಾರರಿದ್ದಾರೆ ಕರ್ನಾಟಕದಲ್ಲಿ ಲಿಂಗಾಯತ ಕುಂಬಾರರು, ಮರಾಠಿ ಕುಂಬಾರರು, ತೆಲಗು ಕುಂಬಾರರು, ತಮಿಳು ಕುಂಬಾರರು , ಮಲೆಯಾಳಿ ಕುಂಬಾರರು , ಕೊಂಕಣಿ ಕುಂಬಾರರು ಇದ್ದಾರೆ. ಇರುವ ದೇಶದ ಕೆಲಭಾಗಗಳಲ್ಲಿ ಕೇವಲ ಕುಂಬಾರರೇ ಇರುವ ಹಳ್ಳಿಗಳಿವೆ ಅವಕ್ಕೆ ಕುಂಬಾರಹಳ್ಳಿ, ಕುಂಬಾರಹಟ್ಟಿ, ಕುಂಬಾರಕೊಪ್ಪಲು ಎಂದು ಕರೆಯುವರು. 1. “ಕುಂಬಾರ ಗುಂಡಯ್ಯ ಮಾಡುವ ಭಕ್ತಿ ಊರೆಲ್ಲ ಮಾಡುವದ್ದಯ್ಯ” (ಅಂಬಿಗರ ಚೌಡಯ್ಯ) 2. “ಊರಿಂಗೆ ಕುಂಬಾರ ಲೇಸು” (ಸರ್ವಜ್ಞ) 3. ಊರಿಗೊಬ್ಬ ಕುಂಬಾರ ಬೇಕು (ಗಾದೆ) 4. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ (ಗಾದೆ) 5. ಕುಂಬಾರ ಮಾಡದ ಮಡಿಕೆ ಇಲ್ಲ, ಬಡಿಗ ಮಾಡದ ಚಕ್ರವಿಲ್ಲ (ಗಾದೆ) 6. ಕುಂಬಾರನ ಸಿಟ್ಟು ಕುಡ್ಕಿ ಮುಂದೆ.(ಗಾದೆ)

ಕುಂಬಾರಗಿತ್ತಿ
(ನಾ)
ಕುಂಬಾರತಿ, ಕುಂಬಾರಿಕೆ ಮಾಡುವವಳು ಕುಂಬಾರ ಹೆಣ್ಣುಮಕ್ಕಳು ಗಂಡಸರೊಂದಿಗೆ ಮಡಕೆ ಮಾಡುವಲ್ಲಿ ನೆರವಾಗುವರು. ಮತ್ತು ಸ್ವತಃ ಹಣತಿ, ಮುಚ್ಚಳ, ಹಂಚು ಚಿಕ ಚಿಕ್ಕ ಮಡಿಕೆ ಮೊದಲಾದವುಗಳನ್ನು ಕೈಯಿಂದ ಮಾಡುವರು. ತಲೆಯಲ್ಲಿ ಹೊತ್ತು ಊರೂರಿಗೆ ಹೋಗಿ ಮಾರುವ ಕಾರ್ಯದಲ್ಲಿ ಇವರು ನೆರವಾಗುವರು. ಗಾಣಗಿತ್ತಿಗಸಿಗೂ ಕುಂಬಾರಗಿತ್ತಿ ಮಸಿಗೂ ಸರಿಹೋಯ್ತು (ಗಾದೆ) ಕುಂಬಾರತಿಗುಣವೋ ಅವಳ ಕುಡ್ಕಿ ಗುಣವೋ (ಗಾದೆ)

ಕುಂಬಾರ ತೆರಿಗೆ
(ವಿ)
ಕುಂಬಾರಕಾಣಿ Tax to be paid by potters

ಕುಂಬಾರ ಬೂದಿ
(ನಾ)
ಆವಿಗೆಯ ಬೂದಿ

ಕುಂಬಾರಿಕೆ
(ನಾ)
ಕುಂಬೋದ್ಯಮ, ಮಣ್ಣಿನ ಪರಿಕರಗಳನ್ನು ತಯಾರಿಸುವ ಉದ್ಯೋಗ


logo