logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಕಳಸಿಗೆ
(ನಾ)
ಧಾನ್ಯ ಮತ್ತು ನೀರನ್ನು ತುಂಬಿ ಇಡಲು ಬಳಸುವ ದೊಡ್ಡಗಾತ್ರದ ಮಣ್ಣಿನ ಗುಡಾಣ

ಕಾವಲಿ
(ನಾ)
ಹಂಚು, ಪದಾರ್ಥಗಳನ್ನು ಎಣ್ಣೆಯಲ್ಲಿ ಕಾಯಿಸಲು ಉಪಯೋಗಿಸುವ ಮಣ್ಣಿನ ಬಾಳ್ಳಿ, ಲೋಹದ ಕಾವಲಿಗಳ ಬಳಕೆಯೆ ಈಗ ಹೆಚ್ಚು. ಎಲ್ಲರ ಮನೆಯಲ್ಲಿ ದೋಸೆಗೆ ತೂತು ನಮ್ಮಲ್ಲಿ ಕಾವಲಿಗೆ ತೂತು (ಗಾದೆ)

ಕಾವುಪೆಂಡಿ
(ನಾ)
ಆವಿಗೆ ಕಾದ ನಂತರ ಅದರ ಬಾಯಿ ಮುಚ್ಚುವ ಮುನ್ನ ಉದ್ದಕ್ಕೆ ಕಟ್ಟಿಗೆಯ ತುಂಡುಗಳನ್ನು ಬಾಯಲ್ಲಿಟ್ಟು ಬೂದಿಯಿಂದ ಬಾಯನ್ನು ಮುಚ್ಚುವರು.

ಕಾಸುಕಟ್ಟಿಗೆ
(ನಾ)
ಕಾಸುವ ಕಟ್ಟಿಗೆ, ಆವಿಗೆಯನ್ನು ಕಾಯಿಸುವ ಆರಂಭದಲ್ಲಿ ಉಪಯೋಗಿಸುವ ಚಿಕ್ಕ ಚಿಕ್ಕ ಕಟ್ಟಿಗೆಯ ತುಂಡುಗಳು, ಕೆಲವೆಡೆ ಸಗಣಿಯ ಬೆರಣಿಯನ್ನು ಉಪಯೋಗಿಸುವರು.

ಕಿಟ್ಟ
(ನಾ)
ಬೂದಿಗೆ ಕೀಲೆಣ್ಣೆ ಸೇರಿಸಿ ಮಾಡಿದ ಕಣಕ. ಸುಟ್ಟ ಮಡಿಕೆಗಳಲ್ಲಿ ಎಲ್ಲಿಯಾದರೂ ಚಿಕ್ಕ ಬಿರುಕು, ರಂಧ್ರ ಆಗಿದ್ದರೆ ಅದಕ್ಕೆ ಈ ಕಿಟ್ಟವನ್ನು ಒತ್ತುವರು. ಇದು ಸಿಮೆಂಟಿನಂತೆ ಗಟ್ಟಿಯಾಗಿ ಅಂಟಿಕೊಳ್ಳುವುದರಿಂದ ರಂಧ್ರ ಮತ್ತು ಬಿರುಕು ಕಾಣದು. ಮಡಕೆ ಸೋರುವುದು ನಿಲ್ಲುತ್ತದೆ.

ಕಿಲ್ಲೆ
(ನಾ)
ಹಾಲು, ಚಹ, ಕಾಫಿ ದ್ರವಪದಾರ್ಥಗಳನ್ನು ತುಂಬಿ ಸುರಿಯಲು ಉಪಯೋಗಿಸುವ ಮಣ್ಣಿನ ಚಿಕ್ಕ ಪಾತ್ರೆ. ಈ ಪದ ದಾವಣಗೆರೆ, ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಯೋಗದಲ್ಲಿದೆ.

ಕಿವುಚು
(ಕ್ರಿ)
ಹಿಚುಕು, ಕುಂಬಾರಿಕೆಯ ಮಣ್ಣನ್ನು ಕಾಲಿನಿಂದ ತುಳಿದು ಹದಮಾಡುವಂತೆ ಕೈಯಿಂದ ಹಿಚುಕಿ ಹದ ಮಾಡುವುದು. 'ಸಂಗಪ್ಪ ಮಣ್ಣ ಕಿವಚಕ ಹತ್ಯಾನ' (ಆಡು ಮಾತು)

ಕಿವಿ ಹಚ್ಚು
(ಕ್ರಿ)
ಮಡಿಕೆ ಹಿಡಿದುಕೊಳ್ಳಲು ಅನುಕೂಲವಾಗಲೆಂದು ಅಗಲ ಬಾಯಿಯ ಮಡಿಕೆಗಳ ಹೊರಭಾಗದಲ್ಲಿ ಕಿವಿ ಹಚ್ಚುವುದು, ಹೊರಚಾಚು, ಕಿವಿಹಚ್ಚಿದ ಚಟಿಗೆ.

ಕುಂಡ
(ನಾ)
ಬಟ್ಟಲಿನಂಥ ಪಾತ್ರೆ, ಹೂದಾನಿ, ಹೂವಿನ ಕುಂಡ, ಕುಂಡಾಲಿ ಇದರಲ್ಲಿ ಹೂವಿನಗಿಡ. ಸಸಿ ಇತ್ಯಾದಿಗಳನ್ನು ನೆಟ್ಟು ಮನೆಮುಂದೆ ಅಂದಕ್ಕಾಗಿ ಇಡುವರು.

ಕುಂಡ
ಕುಂಡವನ್ನು ಶ್ರೋತ್ರಿಯವರ ಮನೆಯಲ್ಲಿ ಅಗ್ನಿಯನ್ನು ಇರಿಸಿಕೊಳ್ಲಲು ಬಳಸುತ್ತಿದ್ದರು. "ಕುಂಡದಲ್ಲಿ ಕಾವ್ಯ ಅಃ ಎನಿತು ಶ್ರಾವ್ಯ" (ಕುವೆಂಪು)
">


logo