logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಕಟ್ಟಿಗೆ ಹಣಗಿ
(ನಾ)
ಹಸಿಮಡಿಕೆಗಳ ಮೇಲೆ ವಿವಿಧ ಗೆರೆಗಳನ್ನು ಹಾಕಲು ಬಳಸುವ ಸಾಧನ. ತಲೆ ಹಿಕ್ಕುನ ಕಟ್ಟಿಗೆ ಹಣಿಗೆಯ ತುಂಡನ್ನಾಗಲಿ, ಇಲ್ಲವೆ ಐದಾರು, ಸೂಜಿಗಳನ್ನ್ನು ಹಣಿಗೆಯಂತೆ ಜೋಡಿಸಿ ಕಟ್ಟಿ ಮಡಿಕೆಗಳ ಕಂಠ ಮತ್ತು ಬದಿಗಳ ಸುತ್ತಲೂ ಗೆರೆ ಹಾಕಲು ಇದನ್ನು ಉಪಯೋಗಿಸುವರು.

ಕಠೊರಿ
(ನಾ)
ಕಠೊರೆ, ಮೊಹರಂ ಹಬ್ಬದಲ್ಲಿ ಮುಸ್ಲಿಂ ಜನಾಂಗದವರು ಮಡಿಕೆಯಲ್ಲಿಪಾನಕ ಒಯ್ಯುವಾಗ ಅದಕ್ಕೆ ಮುಚ್ಚುವ ಮಣ್ಣಿನ ಮುಚ್ಚಳ.

ಕಡಬಿನ ಪಾಸಾಲೆ
(ನಾ)
ಮುಚ್ಚಳ, ಕಡಬು ಬೇಯಿಸುವ ಪಾತ್ರೆಗೆ ಮುಚ್ಚಲು ಬಳಸುವ ಮುಚ್ಚಳ. ದಕ್ಷಿಣ ಕರ್ನಾಟದಲ್ಲಿ ಬಳಕೆಯಲ್ಲಿದೆ.

ಕಡ್ಲೆಕಾಯಿ ಬೇಯಿಸುವ ಪಾತ್ರೆ
(ನಾ)
ಕಡ್ಲೆಕಾಯಿ ಬೇಯಿಸುವ ಮಡಕೆ. ಅಗಲ ಬಾಯಿಯುಳ್ಳ ಚಟಿಗೆ ಇದರ ಸೊಂಟದ ಭಾಗದಲ್ಲಿ ಚಿಕ್ಕ-ಚ್ಚಿಕ್ಕ ರಂಧ್ರಗಳನ್ನು ಮಾಡಿರುವರು. ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಹೆಚ್ಚಾಗಿ ಇದರ ಬಳಕೆ ಇದೆ.

ಕತ್ತ
(ನಾ)
ನಾರಿನ ಹುರಿಹಗ್ಗ

ಕತ್ತಬಳೆ
(ನಾ)
ಈಸುಕೋಲು-ನೋಡಿ

ಕತ್ತಿ
(ನಾ)
ಕಾಡಿನಿಂದ ಗಿಡಗಂಟಿ ಕೊಯ್ದು ತರಲು ಬಳಸುವ ಉದ್ದನೆಯ ಕತ್ತಿ ಆವಿಗೆಯನ್ನು ತೆಗೆಯುವಾಗ ಬಿಸಿ ಮಡಕೆಗಳನ್ನು ಎತ್ತಿ ಹೊರಗೆ ತೆಗೆಯಲು ಕೂಡ ಬಳಸುವರು.

ಕನ್ನಕೊರೆ
(ಕ್ರಿ)
ಕಿಂಡಿ ಮಾಡುವುದು. ಹರವಿ ಮುಂತಾದ ದೊಡ್ಡ ದೊಡ್ಡ ಪಾತ್ರೆಗಳನ್ನು ತಯಾರಿಸುವಾಗ ಸೊಳಕಲ್ಲಿನಿಂದ ತಟ್ಟಲು ಕೈಗೆ ನಿಲುಕದು. ಆಗ ಮಡಿಕೆಯಲ್ಲಿ ಕೈ ಹೋಗುವಷ್ಟು ಕಿಂಡಿ ಕೊರೆದು ರಂಧ್ರಮಾಡುವ ಕ್ರಿಯೆ. ಆರಂಧ್ರದಲ್ಲಿ ಕೈಹಾಕಿ ಅದನ್ನು ತಟ್ಟುವರು. ಆ ಕೆಲಸ ಮುಗಿದ ಮೇಲೆ ಆ ರಂಧ್ರವನ್ನು ಮುಚ್ಚುವರು.

ಕರ್ಪರ
(ನಾ)
ಗಡಿಗೆ, ಭಿಕ್ಷೆ ಬೇಡುವ ಮಣ್ಣಿನ ಪಾತ್ರೆ

ಕಪ್ಪಾಲ
(ನಾ)
ಭತ್ತ ನೆನೆ ಹಾಕುವ ಮಣ್ಣಿನ ಪಾತ್ರೆ, ದಕ್ಷಿಣ ಕನ್ನಡದಲ್ಲಿ ಬಳಕೆಯಲ್ಲಿದೆ.


logo