logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅನಿರ್ದಿಷ್ಟ
(ಸ) ಶಲಾಕೆಗಳು ಕುರಿತಂತೆ, ಬಹು ಸಂಖ್ಯೆಯ, ಸುಲಭವಾಗಿ ಎಣಿಸಲಾಗದ
indefinite

ಅನಿರ್ದಿಷ್ಟ ಅನುಕಲ
(ಗ) ನೋಡಿ : ಅನುಕಲ
indefinite integral

ಅನಿರ್ದಿಷ್ಟ ಪುಷ್ಪವಿನ್ಯಾಸ
(ಸ) ನೋಡಿ: ಅಸೀಮಾಕ್ಷ ಪುಷ್ಪಮಂಜರಿ
racemose inflorescence

ಅನಿರ್ಧರಣೀಯ ರೂಪ
(ಗ) ಚರದ ಯಾವುದೋ ಮೌಲ್ಯಕ್ಕೆ ಫಲನ ಮುಂತಾದವು ಆದಾಗ ಫಲನ ಆ ಮೌಲ್ಯದಲ್ಲಿ ಅನಿರ್ಧರಣೀಯ ರೂಪ ತಳೆಯುತ್ತದೆ. ಉದಾ: (x2-4) / (x-2) ಫಲನದಲ್ಲಿ x = 2 ಆದೇಶಿಸಿದಾಗ ಇದರ ರೂಪ
indeterminate form

ಅನಿರ್ಧರಣೀಯ ಸಮೀಕರಣ
(ಗ) ಸಹಾಂಕಗಳ ನಡುವಿನ ಸಂಬಂಧಗಳಲ್ಲಿ ಕೆಲವು ಕೊರತೆಗಳ ಕಾರಣವಾಗಿ ಅನಂತ ಪರಿಹಾರಗಳಿರುವ ಸಮೀಕರಣ. ಉದಾ: ax+by+c=0; ax+by+cz+d=0, lx+my+nz+p=0. ಮೊದಲನೆಯದರಲ್ಲಿ x ಅಥವಾ yಯನ್ನು ಏಕೈಕವಾಗಿ ನಿರ್ಧರಿಸಲಾಗುವುದಿಲ್ಲ; ಮುಂದಿನ ಸಮೀಕರಣಗಳಲ್ಲಿ x,y,z ಚರಗಳನ್ನು ಕೂಡ ಹಾಗೆ. ಪೂರ್ಣಾಂಕ ಸಹಾಂಕಗಳಿರುವ ಸಮೀಕರಣಕ್ಕೆ ಪೂರ್ಣಾಂಕ ಪರಿಹಾರಗಳಿರುವಾಗ ಅದರ ಹೆಸರು ಡಯೊಫಾಂಟೈನ್ ಸಮೀಕರಣ. ಉದಾ: x + 2y = 3, 2x + y = 4 ಇತ್ಯಾದಿ. ನೋಡಿ: ನಿರ್ಧರಣೀಯ
indeterminate equation

ಅನಿರ್ಧರಣೀಯತೆ
(ಭೌ) ನೋಡಿ: ಅನಿಶ್ಚಿತತಾ ತತ್ತ್ವ
indeterminacy

ಅನಿಲ
(ರ) ವಸ್ತುವಿನ ಸ್ಥಿತಿತ್ರಯಗಳಲ್ಲಿ ಒಂದು. ಉಳಿದೆರಡು ಘನ ಹಾಗೂ ದ್ರವ. ಅನಿಲ ಸ್ಥಿತಿಯಲ್ಲಿ ವಸ್ತುವಿನ ಅಣುಗಳ ನಡುವಿನ ಬಂಧ ಬಲು ಸಡಿಲ, ದ್ರವದಂತೆ ಇದಕ್ಕೂ ನಿಶ್ಚಿತ ರೂಪವಿರುವುದಿಲ್ಲ. ಆದರೆ ಎಷ್ಟೇ ಅಲ್ಪ ಪ್ರಮಾಣದಲ್ಲಿದ್ದರೂ ಧಾರಕದ ಇಡೀ ಸ್ಥಳವನ್ನು ಆಕ್ರಮಿಸಿಕೊಳ್ಳುತ್ತದೆ. ಕಲ್ಲಿದ್ದಲು, ಎಣ್ಣೆ ಇತ್ಯಾದಿಗಳಿಂದ ತಯಾರಿಸಿದ ಅನಿಲವನ್ನು ಬೆಳಕು, ಶಾಖ ಮುಂತಾದವನ್ನು ಪಡೆಯಲು ಬಳಸಲಾಗುತ್ತದೆ. ಸಾಮಾನ್ಯ ಉಷ್ಣತೆಯಲ್ಲಿ ಅನಿಲವು ದ್ರವ ಅಥವಾ ಘನ ಆಗದು. ಹಾಗೆ ಆಗುವುದಕ್ಕೆ ಅದಕ್ಕೆ ಹೆಚ್ಚು ಒತ್ತಡ / ಕಡಿಮೆ ಉಷ್ಣತೆ ಬೇಕು
gas

ಅನಿಲ ಕಾರ್ಬನ್
(ರ) ಕಲ್ಲಿದ್ದಲ ವಿನಾಶಕ ಬಟ್ಟೀಕರಣ ಕಾಲದಲ್ಲಿ ಬಟ್ಟಿ ಪಾತ್ರೆಯ ಒಳಗೋಡೆಗಳ ಮೇಲೆ ನಿಕ್ಷೇಪವಾಗುವ ಶುದ್ಧ ಕಾರ್ಬನ್. ಉತ್ತಮ ವಿದ್ಯುದ್ವಾಹಿ. ಎಲೆಕ್ಟ್ರೋಡ್‌ಗಳಾಗಿ ಬಳಕೆ
gas carbon

ಅನಿಲಗಳ ಚಲನ ಸಿದ್ಧಾಂತ
(ರ) ಅನಿಲದ ಬಹುತೇಕ ಗುಣಗಳನ್ನು ಅದರ ಅಣುಗಳ ಚಲನೆ ಮೂಲಕ ವಿವರಿಸುವ ಸಿದ್ಧಾಂತ. ಇದರ ಅತ್ಯಂತ ಸರಳ ರೂಪದಲ್ಲಿ ಎಲ್ಲ ಅನಿಲಾಣುಗಳನ್ನು ಪುಟಿತಗೋಳಗಳೆಂದೂ ಇವು ಅನಿಲಧಾರಕದ ಭಿತ್ತಿಗಳನ್ನು ನಿರಂತರವಾಗಿ ಘಾತಿಸುತ್ತಿರುವುದರಿಂದ ಒತ್ತಡ ಉಂಟಾಗುತ್ತದೆ ಎಂದೂ ಭಾವಿಸಲಾಗಿದೆ. ಅಣುಗಳ ಸರಾಸರಿ ಅಂತರಕ್ಕೆ ಹೋಲಿಸಿದಾಗ ಇವು ಅಲ್ಪ ಗಾತ್ರದವೆಂದೂ ಡಿಕ್ಕಿ ಆದ ಹೊರತು ಪರಸ್ಪರ ಬಲಗಳನ್ನು ಹೇರುವುದಿಲ್ಲವೆಂದೂ ಅಂಗೀಕರಿಸಿದ್ದಾದರೆ ಅನಿಲ ನಿಯಮಗಳಿಗೆ ಈ ಸಿದ್ಧಾಂತ ಸರಳ ವಿವರಣೆ ಕೊಡುತ್ತದೆ ಮತ್ತು ಇದರಿಂದ ಅನಿಲಸ್ನಿಗ್ಧತೆ ಮತ್ತು ಉಷ್ಣವಾಹಕತೆ ಕುರಿತಂತೆ ಉಪಯುಕ್ತ ಫಲಿತಾಂಶಗಳು ಸಿದ್ಧಿಸುತ್ತವೆ
kinetic theory of gases

ಅನಿಲ ತಿರುಬಾನಿ
(ತಂ) ಉಷ್ಣ ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಮಾರ್ಪಡಿಸಲು ಬಳಸುವ ಸರಳ ಮತ್ತು ಉನ್ನತ ವೇಗದ ಯಂತ್ರ. ಇದರಲ್ಲಿ ಒತ್ತಡಕ್ಕೊಳಗಾದ ಬಿಸಿ ಅನಿಲದ ಧಾರೆಯನ್ನು ತಿರುಬಾನಿ ಗಾಲಿಯ ಅಲಗುಗಳಿಗೆ ಎದುರಾಗಿ ರಭಸದಿಂದ ಬಿಡಲಾಗುತ್ತದೆ. ಆಗ ಗಾಲಿಯ ದಂಡ ಆವರ್ತಿಸ ತೊಡಗಿ ಯಾಂತ್ರಿಕ ಶಕ್ತಿ ಉತ್ಪನ್ನವಾಗುತ್ತದೆ
gas turbine


logo