logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅಧಿರಚನೆ
(ತಂ) ಅಡಿಪಾಯದ ಮೇಲೆ ನಿರ್ಮಿಸಿರುವ ಸಂರಚನೆಯ ಭಾಗ
superstructure

ಅಧಿವಹನ
(ಖ) ವಾಯುವಿನ ಕ್ಷಿತಿಜೀಯ ಚಲನೆಯ ಕಾರಣವಾಗಿ ಉಷ್ಣ, ಒತ್ತಡ ಮೊದಲಾದವುಗಳ ಸಾಗಣೆ. ಉದಾ: ಉಷ್ಣದ ಇಂಥ ಸಾಗಣೆಯ ಪರಿಣಾಮವೇ ಹವೆಯಲ್ಲಿ ಕಂಡುಬರುವ ಬದಲಾವಣೆಗಳು
advection

ಅಧಿವಾಹಕ
(ಭೌ) ಒಂದು ನಿಶ್ಚಿತ ಉಷ್ಣತೆಗಿಂತ ಕೆಳಗೆ ಅಧಿವಾಹಕತ್ವ ಗುಣವುಳ್ಳ, ಅಂದರೆ ವಿದ್ಯುತ್ಪ್ರವಹನಕ್ಕೆ ಅತ್ಯಂತ ಕಡಿಮೆ ರೋಧ ತೋರುವ ಗುಣವುಳ್ಳ, ಪದಾರ್ಥ (ಉದಾ : ಸೀಸ, ವೆನೆಡಿಯಮ್, ತವರ)
superconductor

ಅಧಿವಾಹಕತೆ
(ಭೌ) ಅತ್ಯಂತ ಕಡಿಮೆ (ನಿರಪೇಕ್ಷಶೂನ್ಯ ಸಮೀಪ) ಉಷ್ಣತೆಯಲ್ಲಿ ಕೆಲವು ಶುದ್ಧ ಲೋಹ ಹಾಗೂ ಮಿಶ್ರಲೋಹಗಳು ವಿದ್ಯುತ್ಪ್ರವಹನಕ್ಕೆ ಕನಿಷ್ಠ ರೋಧ ತೋರುವ ಗುಣ. ಪದಾರ್ಥಕ್ಕೆ ಈ ಗುಣವನ್ನು ಒದಗಿಸುವ ಉಷ್ಣತೆಗೆ ಅದರ ಕ್ರಾಂತಿ/ಸಂಕ್ರಮಣ ಉಷ್ಣತೆ ಎಂದು ಹೆಸರು. ಇದು ಪದಾರ್ಥದಿಂದ ಪದಾರ್ಥಕ್ಕೆ ಭಿನ್ನ. ಅಧಿವಾಹಕ ಸಾಮಗ್ರಿ ವರ್ತುಲದಲ್ಲಿ ಕಾಂತಕ್ಷೇತ್ರ ಪ್ರೇರಿತ ವಿದ್ಯುತ್ ಹರಿಯುತ್ತಿರುವಾಗ, ಕಾಂತಕ್ಷೇತ್ರ ನಿರ್ಮೂಲಾನಂತರವೂ ವಿದ್ಯುತ್ ಹರಿಯುತ್ತಲೇ ಇರುತ್ತದೆ. ಅತ್ಯಲ್ಪ ವಿದ್ಯುತ್ತಿನ ವೆಚ್ಚದಲ್ಲಿ ಭಾರಿ ಕಾಂತಕ್ಷೇತ್ರ ನಿರ್ಮಿಸಲು ಇದು ತುಂಬ ಉಪಯುಕ್ತ
superconductivity

ಅಧಿವಿರಮ
(ವೈ) ಒಂದು ಜೀನ್‌ನ ಅಥವಾ ಒಂದಕ್ಕಿಂತ ಹೆಚ್ಚಿನ ಜೀನ್‌ಗಳ ಪ್ರಕಟ ಲಕ್ಷಣವನ್ನು ತಡೆಹಿಡಿಯಬಲ್ಲ ಮತ್ತೊಂದು ಜೀನ್‌ನ ಸಾಮರ್ಥ್ಯ. ಇದನ್ನು ‘ಅಧಿವಿರಮ’ ಎಂದೂ ಲಕ್ಷಣಗಳು ಪ್ರಕಟವಾದ ಜೀನನ್ನು ‘ಅಧೋವಿರಮ’ ಎಂದೂ ಕರೆಯುತ್ತಾರೆ
epistatic

ಅಧಿಶೈತ್ಯೀಕರಣ
(ಭೌ) ಯಾವುದೇ ದ್ರವವನ್ನು ಅದರ ಸಹಜ ಘನೀಭವನ ಬಿಂದುವಿಗಿಂತ ಕೆಳಗಿನ ಉಷ್ಣತೆಗೆ ತಣಿಸಿ ಅದನ್ನು ಇನ್ನೂ ದ್ರವಸ್ಥಿತಿಯಲ್ಲೇ ಉಳಿಸಿಕೊಂಡಿರುವುದು. ಮಿತಸ್ಥಿರದ್ರವ. ಕಾಲಕ್ರಮದಲ್ಲಿ ಅದು ಘನೀಭವಿಸಬಹುದು. ಉದಾ : ಗಾಜು
supercooling

ಅಧಿಶೋಷಕ
(ರ) ಹೊರ ಹೀರುಗ; ಅಧಿಚೂಷಕ (ಘನ ಅಥವಾ ದ್ರವವಸ್ತು); ಅಧಿಶೋಷಣೆಯ ಸ್ಥಿರಪ್ರಾವಸ್ಥೆ
adsorbent

ಅಧಿಶೋಷಣೆ
(ರ) ಹೊರ ಹೀರುವಿಕೆ; ಅಧಿಚೂಷಣ; ಒಂದು ಸ್ಥಿರ ಪ್ರಾವಸ್ಥೆಯ ಮೇಲ್ಪದರದಲ್ಲಿ ಚರ ಪ್ರಾವಸ್ಥೆಯ ಅಣುಗಳು ಬಂಧಿತವಾಗಿರುವುದು. ಏಕಪದರವೂ ಬಹುಪದರವೂ ಆಗಿರಲು ಸಾಧ್ಯ. ಬಂಧವು ವ್ಯಾನ್‌ಡರ್‌ವಾಲ್ಸ್ ಬಂಧವಾದರೆ ಭೌತ ಅಧಿಶೋಷಣೆ ಎಂದೂ, ರಾಸಾಯನಿಕವಾಗಿದ್ದಲ್ಲಿ ರಾಸಾಯನಿಕ ಅಧಿಶೋಷಣೆ ಎಂದೂ ಹೇಳಬಹುದು
adsorption

ಅಧಿಶೋಷ್ಯ
(ರ) ಅಧಿಶೋಷಣೆಯ ಚರಪ್ರಾವಸ್ಥೆಯ ದ್ರವ್ಯ. ಹೊರ ಹೀರಿಕೆಗೆ ಒಳಗಾದ ದ್ರವ್ಯ. ಅಧಿಚೂಷಿತ
adsorbate

ಅಧಿಸಂಕಲ್ಯ
(ಗ) ನೋಡಿ: ಸಂಕಲ್ಯ ಫಲನ
superadditive


logo