logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅಧಿದೈತ್ಯ
(ಖ) ನೈಜ ಪರಮೋಜ್ಜ್ವಲತೆಯ ನಕ್ಷತ್ರ ಕುಟುಂಬದ ಸದಸ್ಯ. ಹರ್ಟ್ಝ್‌ಸ್ಪ್ರುಂಗ್ ರಸಲ್ ಆಲೇಖದ ಅಗ್ರದಲ್ಲಿದೆ. ಅಧಿದೈತ್ಯಗಳ ಉಷ್ಣತೆ ೩೦,೦೦೦-೩೦೦೦ಕೆ.ವರೆಗೂ, ಕಾಂತಿ ಸೂರ್ಯನದರ ೧೦೪-೧೦೬ರವರೆಗೂ ಇರಬಹುದು. ಉದಾ: ಮಹಾವ್ಯಾಧ ಪುಂಜದಲ್ಲಿರುವ ಕೆಂಪು ನಕ್ಷತ್ರ ಆರ್ದ್ರಾ ಉನ್ನತ ದೀಪ್ತಿಯ, ನಿಮ್ನ ಸಾಂದ್ರತೆಯ ಹಾಗೂ ಸೂರ್ಯನ ವ್ಯಾಸಕ್ಕಿಂತ ಹಲವು ನೂರುಪಟ್ಟು ಹೆಚ್ಚು ಹಿರಿದಾದ ವ್ಯಾಸದ ನಕ್ಷತ್ರ
supergiant

ಅಧಿನಾದ
(ಭೌ) ಸಂಕೀರ್ಣ ಸ್ವರದಲ್ಲಿ ಮೂಲ ಸ್ವರದ ಆವೃತ್ತಿಗಿಂತ ಉನ್ನತ ಆವೃತ್ತಿಯ ಯಾವುದೇ ಸ್ವರ. ಉಚ್ಚಸ್ಥಾಯಿ
overtone

ಅಧಿಪಾದಪ
(ಸ) ನೋಡಿ: ಅಪ್ಪುಸಸ್ಯ
epiphyte

ಅಧಿಪೃಷ್ಠಕ
(ಪ್ರಾ) ಬೆನ್ನಿನ ಮೇಲೆ, ಬೆನ್ನು ಮೂಳೆಯ ಹೊರಪಕ್ಕದಲ್ಲಿದ್ದು ಅದರ ಭಾಗವೇ ಆಗಿರುವ. ಕಶೇರುಕಗಳಲ್ಲಿ ಅಭಿವರ್ಧನೆಯ ಆರಂಭಿಕ ಘಟ್ಟಗಳಲ್ಲಿ ಕಾಣಬರುವ ಯಾವುದೇ ಮೆಲ್ಲೆಲುಬು ಅಥವಾ ಮೃದ್ವಸ್ಥಿಗಳಲ್ಲೊಂದು
superdorsal

ಅಧಿಪೊರೆ
(ವೈ) ಬಹುಕೋಶ ಜೀವಿಗಳ ಭ್ರೂಣದ ಹೊರಪೊರೆ. ನೋಡಿ : ಭ್ರೂಣದ ಹೊರಪೊರೆ
ectoblast

ಅಧಿಪೋಷಣೆ
(ಪ್ರಾ) ಮಿತಿಮೀರಿದ ಪೋಷಣೆ. ನೋಡಿ: ನ್ಯೂನಪೋಷಣೆ
overnutrition

ಅಧಿಪ್ರಾವರಕ
(ಜೀ) ಅನೇಕ ಜಾತಿಯ ಹವಳಗಳ ಕವಚದ ತಳಭಾಗದ ಸುತ್ತ ಆವರಿಸಿರುವ ಸುಣ್ಣ ಕಲ್ಲು ಸ್ತರ. ಅಧಿಶಂಕುವಿನ ರಕ್ಷಣಾತ್ಮಕ ಆವರಣ. ಸೂಕ್ಷ್ಮದರ್ಶಕೀಯ ಏಕಕೋಶೀಯ ಸಸ್ಯ ಜೀವಿಯ (ಶೈವಲ) ಎರಡು ಕವಾಟಗಳುಳ್ಳ ಕವಚದ ಹೊರಭಾಗ
epitheca

ಅಧಿಪ್ಲವಕ
(ಜೀ) ಸಮುದ್ರದ ಮೇಲ್ಮೈಯಿಂದ ಸುಮಾರು ೧೦೦ ಫ್ಯಾದಮ್ (ನೋಡಿ) ಆಳದವರೆಗೆ ತೇಲುತ್ತ ಹೋಗುವ ಜೀವರಾಶಿ
epiplankton

ಅಧಿಮುಖಕ
(ಪ್ರಾ) ವಲ್ಕವಂತ ಪ್ರಾಣಿಗಳಲ್ಲಿ ಬಾಯಿಗೂ ದ್ವಿತೀಯಕ ಸ್ಪರ್ಶಾಂಗಗಳಿಗೂ ನಡುವಿನ ಭಾಗ. ಅನೇಕ ಕೀಟಗಳಲ್ಲಿ ಬಾಯಿ ತಳ (ಒಳತುಟಿ) ಹಾಗೂ ಅಧಿಕಪಾಲಗಳ ನಡುವಿನ ಭಾಗ
epistome

ಅಧಿಮೂತ್ರಪಿಂಡಕ
(ಪ್ರಾ) ಮೂತ್ರಪಿಂಡದ ಮೇಲಿನ ಅಥವಾ ಮುಂದಿನ
suprarenal


logo