logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅಧಿಕರ್ಷಕ
(ಪ್ರಾ) ಅಂಗವನ್ನು ಅಥವಾ ಅದರ ಭಾಗವನ್ನು ಒಳಮುಖವಾಗಿ ಅಥವಾ ಇನ್ನೊಂದು ಭಾಗದತ್ತ ಸೆಳೆಯುವ ಸ್ನಾಯು. ಅಭಿಕರ್ಷಕ
adductor

ಅಧಿಕ ವರ್ಷ
(ಖ) ಅಧಿಕ ದಿವಸ (ಫೆಬ್ರುವರಿ ೨೯) ಇರುವ ೩೬೬ ದಿವಸಗಳ ವರ್ಷ. ೪ರಿಂದ ಭಾಗವಾಗುವ ಇಸವಿಗಳು, ಶತಾಬ್ದಿ ವರ್ಷಗಳು (ಶತಾಬ್ದಿ ಇಸವಿಗಳು) ಇದಕ್ಕೆ ಹೊರತು. ಅವು ೪೦೦ರಿಂದ ವಿಭಾಗವಾದಾಗ ಅಧಿಕ ವರ್ಷಗಳಾಗುತ್ತವೆ. ನೋಡಿ: ಅಂತರ್ವಿಷ್ಟ
leap year

ಅಧಿಕೇಂದ್ರ
(ಭೂವಿ) ಭೂಕಂಪನ ಅಥವಾ ನ್ಯೂಕ್ಲಿಯರ್ ಆಸ್ಫೋಟದ ಕೇಂದ್ರದಿಂದ ನೇರವಾಗಿ ಮೇಲ್ಭಾಗ ದಲ್ಲಿರುವ ಭೂಮಿಯ ಮೇಲ್ಮೈ ಬಿಂದು
epicentre

ಅಧಿಗಣಿತ
(ಗ) ಗಣಿತ ತರ್ಕದಲ್ಲಿ ಬಳಸಲಾಗುವ ಅಧಿಗಣಿತ. ನಿಗಮನ ತತ್ತ್ವಗಳ ಅಧ್ಯಯನ
metamathematics

ಅಧಿಗ್ರಸನಿ
(ಪ್ರಾ) ಡಿಪ್ಟೇರಾಗಳಲ್ಲಿರುವಂತೆ ಕೆಲವು ಕೀಟಗಳಲ್ಲಿ ಮೇಲ್ದುಟಿಯಿಂದ ಮುಂಚಾಚಿಕೊಂಡು ಬೆಳೆದಿರುವ ಅಂಗುಳಿನ ಚೂಪುತುದಿ
epipharynx

ಅಧಿಚಕ್ರ
(ಗ) ಟಾಲೆಮಿ ಸಿದ್ಧಾಂತದ ಪ್ರಕಾರ ದೊಡ್ಡ ವೃತ್ತದ ಪರಿಧಿಯ ಮೇಲೆ ಚಲಿಸುವ ಕೇಂದ್ರವುಳ್ಳ ಸಣ್ಣ ವೃತ್ತ
epicycle

ಅಧಿಚಕ್ರಜ
(ಗ) ಮತ್ತೊಂದು ವೃತ್ತದ ಮೇಲೆ ಉರುಳುತ್ತಿರುವ ವೃತ್ತದ ಪರಿಧಿಯಲ್ಲಿಯ ಒಂದು ನಿರ್ದಿಷ್ಟ ಬಿಂದು (P) ರೇಖಿಸುವ ವಕ್ರರೇಖೆ (E)
epicycloid

ಅಧಿಚರ್ಮ
(ಪ್ರಾ) ಚರ್ಮದ ಮೂರು ಪದರಗಳ
epidermis

ಅಧಿಚೇತಕ
(ಪ್ರಾ) ಕಶೇರುಕಗಳ ಮಿದುಳಿನಲ್ಲಿ ನರ ಹೊರಡುವ ಬೆನ್ನ ಬಳಿಯ ಜಾಗ
epithalamus

ಅಧಿತರಲ
(ಭೌ) ಇದರಲ್ಲಿ ಗಣನೀಯ ಪ್ರಮಾಣದ ಪರಮಾಣುಗಳು ಅತ್ಯಂತ ತಳಮಟ್ಟದ ಶಕ್ತಿ ಸ್ಥಿತಿಯಲ್ಲಿರುತ್ತವೆ. ಘರ್ಷಣೆಯಿಲ್ಲದೆ ಪ್ರವಹಿಸುವ ಮತ್ತು ಅತ್ಯಂತ ಹೆಚ್ಚಿನ ಉಷ್ಣವಾಹಕತೆಯುಳ್ಳ ತರಲ. ಉದಾ: ೨.೧೮೬ಕೆಲ್ವಿನ್‌ಗೂ ಕಡಿಮೆ ಉಷ್ಣತೆಯ ಹೀಲಿಯಮ್
superfluid


logo