logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅತ್ಯಾಮ್ಲತೆ
(ವೈ) ಜಠರ ರಸದಲ್ಲಿ ಸಹಜವಾಗಿ ಇರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಾಂಶ ಇರುವುದು
hyperacidity

ಅತ್ಯುಚ್ಚ ಆವೃತ್ತಿ
(VHF) (ಭೌ) ೩೦ರಿಂದ ೩೦೦ ಮೆಗಾಹರ್ಟ್ಸ್ ವ್ಯಾಪ್ತಿಯಲ್ಲಿರುವ ರೇಡಿಯೋ ಆವೃತ್ತಿಗಳು. ಇವುಗಳ ಅಲೆಯುದ್ದಗಳ ವ್ಯಾಪ್ತಿ ೧೦ ಮೀ-೧ ಮೀ. ನೋಡಿ: ಅತಿ ನಿಮ್ನ ಆವೃತ್ತಿ
very high frequency

ಅತ್ಯುಜ್ಜ್ವಲ ಪ್ರಕಾಶ
(ತಂ) ‘ಆಕ್ಸಿಹೈಡ್ರೊಜನ್’ ಜ್ವಾಲೆಯಲ್ಲಿ ಸುಟ್ಟಸುಣ್ಣದ ಉರುಳೆಯನ್ನು ಕಾಸುವುದರಿಂದ ಬರುವ ಅತ್ಯುಜ್ಜ್ವಲ ಬಿಳಿ ಬೆಳಕು. ಹಿಂದೆ ಚಿತ್ರಮಂದಿರಗಳಲ್ಲಿ ಬಳಕೆಯಾಗುತ್ತಿತ್ತು
limelight

ಅದಮ್ಯ ಕಾಮ
(ವೈ) ಕೆಲವು ಸ್ತ್ರೀಯರಲ್ಲಿ ರೋಗವೆಂದು ಕರೆಯಬಹುದಾದ ಪ್ರಮಾಣದಲ್ಲಿ ಕಂಡುಬರುವ ಕಾಮ ವಾಂಛೆ. ಸುರತೌತ್ಕಟೇಚ್ಛೆ. ಪುರುಷಗೀಳು. ಕಾಮಗೀಳು
nymphomania

ಅದರ್ಶನ
(ಖ) ಒಂದು ಆಕಾಶಕಾಯ ಇನ್ನೊಂದರ ಹಿಂದೆ /ಅದರ ನೆರಳಿನಲ್ಲಿ ಮರೆಯಾಗುವುದು. ನೋಡಿ : ಗ್ರಹಣ
immersion

ಅದಲು ಕೋಶ
(ಗ) ನೋಡಿ: ಮಾತೃಕೆಯ ಪರಿವರ್ತಿ
transpose matrix

ಅದಲುಬದಲು
(ಜೀ) ಎರಡು ಕ್ರೊಮೊಸೋಮ್ (ವರ್ಣತಂತು)ಗಳ ಮಧ್ಯ ಭಾಗಗಳ ಪರಸ್ಪರ ವರ್ಗಾವಣೆ
interchange

ಅದಹ್ಯ
(ತಂ) ಬೆಂಕಿಯಲ್ಲಿ ಹೊತ್ತಿಕೊಳ್ಳದ. ಅದಹನಶೀಲ
incombustible

ಅದಳ
(ಸ) ಹೂವಿನ ಎಸಳುಗಳಿರದ, ದಳರಹಿತ
apetalous

ಅದಿರು
(ಭೂವಿ) ಒಂದು ಅಥವಾ ಹೆಚ್ಚು ಖನಿಜಗಳಿಂದ ಕೂಡಿದ, ನೈಸರ್ಗಿಕವಾಗಿ ಲಭಿಸುವ ಖನಿಜ. ಇದರೊಂದಿಗಿರುವ ಪ್ರಶಸ್ತವಾದ ಅಥವಾ ಉಪಯುಕ್ತವಾದ ಲೋಹವನ್ನು ಗಣಿ ತೋಡಿ ತೆಗೆಯಲಾಗುತ್ತದೆ. ಉದಾ: ಬಾಕ್ಸೈಟ್, ಅಲ್ಯೂಮಿನಿಯಮ್‌ನ ಅದಿರು. ಅದಿರಿನಲ್ಲಿ ಲೋಹ ಮೂಲರೂಪದಲ್ಲೇ (ಅಸಂಯುಕ್ತ ವಾಗಿ) ಇರಬಹುದು. ಸರ್ವ ಸಾಮಾನ್ಯವಾಗಿ ಅದು ಆಕ್ಸೈಡ್, ಸಲ್ಫೇಟ್, ಸಲ್ಫೈಡ್, ಸಿಲಿಕೇಟ್ ಇತ್ಯಾದಿ ಸಂಯುಕ್ತ ರೂಪದಲ್ಲಿ ಕಂಡುಬರುತ್ತದೆ. ಅದಿರು ಸಾಮಾನ್ಯವಾಗಿ ಇಕ್ಕಟ್ಟಾದ ಕಲ್ಲಿನ ಬಿರುಕುಗಳಲ್ಲಿ ನಿಕ್ಷೇಪಗೊಂಡಿರುತ್ತದೆ. ಇಂಥ ನಿಕ್ಷೇಪಗಳಿಗೆ ಸಿರ, ಅದಿರು ರೇಖೆ (ಲೋಡ್) ಎಂಬ ಹೆಸರುಂಟು
ore


logo