logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅಡಿನಾಯ್ಡ್
(ವೈ) ಮೂಗಿನ ಒಳ ಹೊರಳೆ ಮತ್ತು ಗಂಟಲಿನ ನಡುವಿನ ಪ್ರದೇಶದ ಮಾಳಿಗೆಯಲ್ಲಿ ಇರುವ ಗ್ರಂಥಿರೂಪಿ ರಚನೆ. ಇದಕ್ಕೆ ಲುಷ್ಕಾ ಟಾನ್ಸಿಲ್ ಎಂಬ ಮತ್ತೊಂದು ಹೆಸರಿದೆ. ಮಕ್ಕಳಲ್ಲಿ ಇದು ಅತಿವೃದ್ಧಿಯಾದಾಗ ಉಸಿರಾಟಕ್ಕೆ ಹಾಗೂ ಮಾತನಾಡುವುದಕ್ಕೆ ತೊಂದರೆ ಉಂಟುಮಾಡುತ್ತದೆ
adenoid

ಅಡಿಪಾಯ
(ತಂ) ಕಟ್ಟಡ ಭದ್ರವಾಗಿ ನಿಲ್ಲಲು ನೆಲದಲ್ಲಿ ಅಗೆದು ನಿರ್ಮಿಸಿದ ಗಟ್ಟಿನೆಲ. ಅಸ್ತಿಭಾರ
foundation

ಅಡಿಪಿಕ್ ಆಮ್ಲ
(ರ) ಬ್ಯೂಟೇನ್ ಡೈಕಾರ್ಬಾಕ್ಸಿಲಿಕ್ ಆಮ್ಲ. ವರ್ಣರಹಿತ, ಸೂಜಿರೂಪ. HOOC. (CH2)4.COOH ದ್ರಬಿಂ ೧೫೨೦ಸೆ. ಕುಬಿಂ ೨೬೫೦ಸೆ. ನೈಲಾನ್ ತಯಾರಿಕೆಯಲ್ಲಿ ಬಳಕೆ
adipic acid

ಅಡುಗೆ ಸೋಡ
(ರ) ಬಿಳಿ ವಿಲೇಯ ಪುಡಿ. ಬೇಕಿಂಗ್ ಪುಡಿಗಳು, ಅಗ್ನಿಶಾಮಕಗಳು ಮತ್ತು ಜಠರಾಮ್ಲ ನಿರೋಧಕಗಳಲ್ಲಿ ಬಳಕೆ. NaHCO3
sodium bicarbonate

ಅಡುಗೆ ಸೋಡ
(ರ) ಕೇಕ್, ಬ್ರೆಡ್ ಮುಂತಾದವನ್ನು ತಯಾರಿಸುವಾಗ ಅವುಗಳ ಜೊತೆ ಈ ಚೂರ್ಣವನ್ನು ಬೆರೆಸಿದಾಗ, ಇದು ಬಿಡುಗಡೆ ಮಾಡುವ ಕಾರ್ಬನ್ ಡೈಆಕ್ಸೈಡ್ ಅವನ್ನು ಉಬ್ಬುವಂತೆ ಮಾಡುತ್ತದೆ. ಮುಖ್ಯವಾಗಿ ಕಾರ್ಬನೇಟ್ (ಸಾಮಾನ್ಯವಾಗಿ NaHCO3) ಮತ್ತು ಒಂದು ಆಮ್ಲೀಯ ಪದಾರ್ಥ ಈ ಚೂರ್ಣದ ಘಟಕಗಳು. ಹುದುಗು ಪುಡಿ. ಉಬ್ಬು ಪುಡಿ
baking powder

ಅಡೆನೈನ್
(ರ) ನ್ಯೂಕ್ಲಿಯಿಕ್ ಆಮ್ಲದ ಐದು ಪ್ರತ್ಯಾಮ್ಲಗಳ ಪೈಕಿ ಒಂದು. ಡಿಎನ್‌ಎಯಲ್ಲಿ ಥೈಮೀನ್‌ನೊಂದಿಗೂ ಆರ್‌ಎನ್‌ಎಯಲ್ಲಿ ಯೂರಸಿಲ್‌ನೊಂದಿಗೂ ಜೊತೆಗೂಡಿರುತ್ತದೆ. ೬-ಅಮೀನೊ ಪ್ಯೂರೀನ್. C5H5N5. ದ್ರಬಿಂ ೩೬೦೦-೩೬೫೦ ಸೆ
adenine

ಅಡೆನೊಸೀನ್ ಟ್ರೈಫಾಸ್ಫೇಟ್
(ಜೀ) ವಿಭಿನ್ನ ಕಿಣ್ವ ಕ್ರಿಯೆಗಳ ನಡುವೆ ಕೊಂಡಿ ಏರ್ಪಡಿಸುವ ಸಹಕಿಣ್ವ; ಜೀವಿಗಳ ಉಪಾಪಚಯದಲ್ಲಿಯೂ ಅತಿಮುಖ್ಯ ಸಂಯುಕ್ತಗಳ ಪೈಕಿ ಒಂದು. ಸಂಕ್ಷಿಪ್ತ ಎಟಿಪಿ. C10H16N5O12P3
adenosine triphosphate

ಅಡ್ಡ ಅಕ್ಷ
(ಗ) ಎರಡು ಆಯಾಮಗಳ ಕಾರ್ಟೀಸಿಯನ್ ನಿರ್ದೇಶಕ ವ್ಯವಸ್ಥೆಯಲ್ಲಿ x-ಅಕ್ಷ. y-ಅಕ್ಷಕ್ಕೆ ಅನುವರ್ತಿ ಅಕ್ಷವೆಂದು ಹೆಸರು
transverse axis

ಅಡ್ಡಕಂಬಿ
(ತಂ) ೧. ಜಮೀನು ಅಳೆಯಲು ಬಳಸುವ ಉದ್ದದ ಏಕಮಾನ. ೫.೦೨೯೨ ಮೀಟರಿಗೆ ಸಮ. ಸಲೆ ಅಥವಾ ವಿಸ್ತೀರ್ಣದ ಏಕಮಾನ. ೨೫.೨೯ ಚಮೀಗೆ ಸಮ. ೨. ಹಕ್ಕಿ ಕುಳಿತುಕೊಳ್ಳಲು ಹಾಕಿರುವ ಕಂಬಿ. ತಂಗು ಕಂಬಿ
pench

ಅಡ್ಡಗಾಲುವೆ
(ಎಂ) ರಸ್ತೆ, ರೈಲು ಮಾರ್ಗಗಳ ಕೆಳಗೆ, ನೀರು ಹರಿದುಹೋಗಲು ಪೈಪು, ಪ್ರಬಲಿತ ಕಾಂಕ್ರೀಟ್ ಇತ್ಯಾದಿಗಳಿಂದ ಅಡ್ಡಲಾಗಿ ನಿರ್ಮಿಸುವ ರಚನೆ
culvert


logo