logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಹಸ್ಕ್
(ಪವೈ) ಕುರಿಗಳ ಅಥವಾ ದನಗಳ ಶ್ವಾಸನಾಳಗಳಲ್ಲಿ ನೆಮಟೋಡ್ ಹುಳುಗಳು ಸೇರಿಕೊಂಡು ಉಂಟುಮಾಡುವ ಕೆಮ್ಮುರೋಗ. ವಾಸಿ ಮಾಡಲು ಲಸಿಕೆ ಲಭ್ಯ
husk

ಹಸ್ತ
(ಪ್ರಾ) ವಸ್ತುವನ್ನು ಹಿಡಿಯಲು ಅನುಕೂಲವಾಗುವಂತೆ ಮಣಿಕಟ್ಟಿನಿಂದ ಮುಂದೆ ರೂಪಿತವಾದ ತೋಳಿನ ಭಾಗ. ಕೈ
hand

ಹಸ್ತಾಂಗುಷ್ಠ
(ಪ್ರಾ) ಚತುಷ್ಪಾದಿಗಳ ಮುಂಗಾಲಿನ ಅತ್ಯಂತ ಕಿರಿದಾದ ಬೆರಳು
pollex

ಹಳದಿ ಜ್ವರ
(ವೈ) ಏಡೆಸ್ ಈಜಿಪ್ಟಿ ಸೊಳ್ಳೆ ಕಡಿತದಿಂದ ಹರಡುವ ಕಪ್ಪು ವಾಂತಿ ಆಗುವ, ಉಷ್ಣ ದೇಶದ ವೈರಸ್ ರೋಗ. ಸಾಂಕ್ರಾಮಿಕ. ಜ್ವರ ವಿಷಮಿಸುವುದು ಕಾಮಾಲೆರೋಗಕ್ಕೆ ಕಾರಣ
yellow fever

ಹಾಗಲಕಾಯಿ
(ಸ) ಕುಕರ್ಬಿಟೇಸೀ (ಸೌತೆ) ಕುಟುಂಬಕ್ಕೆ ಸೇರಿದ, ನೆಲದ ಮೇಲೆ ಆಥವಾ ಚಪ್ಪರದ ಮೇಲೆ ಹಬ್ಬುವ ಬಳ್ಳಿಸಸ್ಯ. ಮೊಮೊರ್ಡಿಕ ಚರಂಟಿಯ ವೈಜ್ಞಾನಿಕ ನಾಮ. ರುಚಿ ಕಹಿ. ತರಕಾರಿಯಾಗಿ ಬಳಕೆ. ಔಷಧೀಯ ಗುಣಗಳುಂಟು
bitter gourd

ಹಾಗ್
(ಪ್ರಾ) ವೀರ್ಯಗುಂದಿಸಿ ಮಾಂಸಕ್ಕಾಗಿ ಬೆಳೆಸಿದ ಗಂಡುಹಂದಿ. ಒಂದು ಸಾರಿಯೂ ಉಣ್ಣೆ ಕತ್ತರಿಸಿಲ್ಲದ ಚಿಕ್ಕಕುರಿ
hog

ಹಾಫ್ನಿಯಮ್
(ರ) ಆವರ್ತಕೋಷ್ಟಕದಲ್ಲಿ ೪ನೆಯ ಗುಂಪಿನಲ್ಲಿರುವ ಲೋಹಧಾತು. ಪ್ರತೀಕ Hf. ಪಸಂ.೭೨, ಸಾಪರಾ ೧೭೮.೪೯, ಸಾಸಾಂ ೧೨.೧, ದ್ರಬಿಂ ೨೧೫೦0 ಸೆ ಕುಬಿಂ ೫೪೦೦0 ಸೆ. ಜಿರ್ಕೋನಿಯಮ್ ಖನಿಜಗಳಲ್ಲಿ ಲಭ್ಯ. ಟಂಗ್‌ಸ್ಟನ್ ತಂತುಗಳ ತಯಾರಿಕೆಯಲ್ಲಿಯೂ ಬೈಜಿಕ ಕ್ರಿಯಾಕಾರಿಗಳಲ್ಲಿ ನ್ಯೂಟ್ರಾನ್ ಅವಶೋಷಕವಾಗಿಯೂ ಬಳಕೆ
hafnium

ಹಾಯಿ
(ತಂ) ಬೀಸುಗಾಳಿ ಬಳಸಿ ದೋಣಿ ನಡೆಸಲು ಅನುವಾಗುವಂತೆ ಜೋಡಿಸಿರುವ ವಿಶೇಷವಾಗಿ ನೇಯ್ದ ವಸ್ತ್ರವುಳ್ಳ ವ್ಯವಸ್ಥೆ. ಮೂಲದಲ್ಲಿ ಒತ್ತಾಗಿ ಹೆಣೆದ ಹತ್ತಿ ಅಥವಾ ಲಿನೆನ್ ಕ್ಯಾನ್ವಾಸುಗಳನ್ನು ಬಳಸಲಾಗುತ್ತಿತ್ತು. ಈಚೆಗೆ ಹೆಚ್ಚಾಗಿ ನೈಲಾನ್ ಪಾಲಿಸ್ಟರ್ ಬಟ್ಟೆಗಳ ಉಪಯೋಗ. ನೌಕಾಪಟ
sail

ಹಾರಾಟ
(ತಂ) ವಾಯುಬಲವಿಜ್ಞಾನ ಕ್ರಿಯೆ ಅಥವಾ ಇತರ ಬಲಗಳ ಬೆಂಬಲದಿಂದ ವಾತಾವರಣದ ಮೂಲಕ ಅಥವಾ ಆಕಾಶದ ಮೂಲಕ ವಸ್ತುವಿನ ಚಲನೆ. ಲಂಘನ
flight

ಹಾರಾಟ ದಾಖಲೆ ಸಾಧನ
(ತಂ) ಯಾನದಲ್ಲಿರುವ ವಿಮಾನದ ಮತ್ತು ಅದರ ವ್ಯವಸ್ಥೆಗಳ ಕಾರ್ಯ ನಿರ್ವಹಣೆಯ ಬಗೆಗೂ ಭವಿಷ್ಯತ್ತಿನಲ್ಲಿ ಉಪಯೋಗಕ್ಕಾಗಿ ಯಾನ ವೇಳೆಯಲ್ಲಿ ವಿಮಾನ ಎದುರಿಸಿದ ಪರಿಸ್ಥಿತಿಗಳ ಬಗೆಗೂ ಮಾಹಿತಿಗಳನ್ನು ದಾಖಲಿಸುವ ಸಲಕರಣೆ ಅಥವಾ ಸಾಧನ
flight recorder


logo