logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಹರ್ನಿಯ
(ವೈ) ಯಾವುದೇ ಅಂಗ, ಮುಖ್ಯವಾಗಿ ಹೊಟ್ಟೆಯಲ್ಲಿಯ ಕರುಳೇ ಮೊದಲಾದವು ತನ್ನ ಆವರಣದ ಪೊರೆಯಲ್ಲಿ ಅಕಸ್ಮಾತ್ ಆದ ತೆರಪು ಅಥವಾ ಬಿರುಕಿನ ಮೂಲಕ ಹೊರಚಾಚಿಕೊಂಡಿರುವುದು. ಹಾಗೆ ಚಾಚಿಕೊಂಡಿರುವ ಅದರ ಭಾಗ. ಅಂಡವಾಯು
hernia

ಹರ್ಪೀಸ್
(ವೈ) ನೋಡಿ: ಸರ್ಪಸುತ್ತು
herpes

ಹರ್ಬೇರಿಯಮ್
(ಸ) ಒಣ ಸಸ್ಯ ಮಾದರಿಗಳನ್ನು ಕಾಗದದ ಮೇಲೆ ಲಗತ್ತಿಸಿ ಇಲ್ಲವೇ ಸಂರಕ್ಷಕ ದ್ರಾವಣಗಳಲ್ಲಿ ಮುಳುಗಿಸಿ ಕ್ರಮಬದ್ಧವಾಗಿ ಜೋಡಿಸಿ ಇಟ್ಟಿರುವ ಸ್ಥಳ. ಸಸ್ಯವಾಟಿ. ಶಾಕಾಲಯ. ಶಾಕಾಗಾರ. ವನಸ್ಪತಿ ಸಂಗ್ರಹಾಲಯ
herbarium

ಹಲಸು
(ಸ) ಮೊರೇಸೀ ಕುಟುಂಬಕ್ಕೆ ಸೇರಿದ ಉಷ್ಣ ವಲಯದ ಜನಪ್ರಿಯ ತರಕಾರಿ ಹಾಗೂ ಫಲವೃಕ್ಷ. ಆರ್ಟೊಕಾರ್ಪಸ್ ಹೆಟರೊಫಿಲಸ್ ವೈಜ್ಞಾನಿಕ ನಾಮ. ಹಲಸಿನ ಹಣ್ಣು
jackfruit

ಹಲುಬೆ
(ತಂ) ಉತ್ತ ನೆಲದ ಹೆಂಟೆಗಳನ್ನು ಒಡೆಯಲು, ಕಳೆ ನಾಶಮಾಡಲು ಮತ್ತು ಬೀಜವನ್ನು ಮುಚ್ಚಲು ಬಳಸುವ ಕಬ್ಬಿಣದ ಹಲ್ಲುಗಳುಳ್ಳ ಭಾರಿ ಕುಂಟೆ
harrow

ಹಲ್ಲಣ
(ಭೂವಿ) ಎರಡು ಶಿಖರಗಳ ನಡುವಿನ ಏಣುರೂಪದ ತಗ್ಗು. ಇಲ್ಲಿಂದ ವಿರುದ್ಧ ದಿಕ್ಕುಗಳಲ್ಲಿ ಹೊಳೆಗಳು ಹರಿಯುತ್ತ ಹೊರಟಿರುತ್ತವೆ. ಈ ತಗ್ಗು ಚಪ್ಪಟೆಯಾಗಿ ಅಗಲವಾಗಿದ್ದು ಕುದುರೆ ಜೀನನ್ನು ಹೋಲುವಂತಿರಬಹುದು
saddle

ಹಲ್ಲಿ
(ಪ್ರಾ) ರೆಪ್ಟೀಲಿಯ ವರ್ಗ, ಲ್ಯಾಸಟಿರೀಲಿಯ ಉಪವರ್ಗಕ್ಕೆ ಸೇರಿದ ಯಾವುದೇ ಸರೀಸೃಪ. ಉದ್ದ ಒಡಲು ಮತ್ತು ಬಾಲ, ನಾಲ್ಕು ಕಾಲು, ಒರಟಾದ ಅಥವಾ ವಲ್ಕಗಳಿಂದ ಕೂಡಿದ ಚರ್ಮ, ಚಲಿಸುವ ಕಣ್ಣು ರೆಪ್ಪೆಗಳು ವಿಶೇಷ ಲಕ್ಷಣಗಳು. ಮೊಟ್ಟೆ ಇಡುತ್ತವೆ, ಮೊಸಳೆ, ಓತಿ, ಹೆಂಟೆಗೊದ್ದ, ಊಸರವಳ್ಳಿ ಹಾಗೂ ನಷ್ಟವಂಶಿ ಪೆಡಂಭೂತಗಳು ಈ ವರ್ಗಕ್ಕೆ ಸೇರಿದವು. ಗೌಳಿ
lizard

ಹಲ್ಲು
(ವೈ) ಮನುಷ್ಯನನ್ನೂ ಒಳಗೊಂಡಂತೆ ಕಶೇರುಕಗಳ ದವಡೆಗಳಲ್ಲಿ ಆಹಾರವನ್ನು ಅಗಿಯಲು ರೂಪುಗೊಂಡ ಅತ್ಯಂತ ಗಡುಸಾದ ಚಾಚುರಚನೆಗಳು. ಆಹಾರವನ್ನು ಅಗೆಯುವುದರ ಜೊತೆಗೆ ಹಲ್ಲುಗಳಿಂದ ಬೇಟೆಯಾಡಬಹುದು, ಆತ್ಮರಕ್ಷಣೆ ಮಾಡಿಕೊಳ್ಳಬಹುದು. ಆಹಾರ ಪದ್ಧತಿಗೆ ಅನುಗುಣವಾಗಿ ಅವುಗಳಲ್ಲಿ ನಮೂನೆಗಳು ಕಂಡುಬರುತ್ತವೆ. ಬಾಚಿಹಲ್ಲುಗಳು ಕತ್ತರಿಸಲು ಉಪಯುಕ್ತವಾದರೆ, ಕೋರೆ ಹಲ್ಲುಗಳು ಸಿಗಿಯಲು ಸಹಾಯಮಾಡುತ್ತವೆ. ಇವು ಮಾಂಸಾಹಾರಿಗಳಲ್ಲಿ ವಿಶೇಷವಾಗಿ ಬೆಳೆದಿರುತ್ತವೆ. ದವಡೆ ಹಲ್ಲುಗಳು ಅರೆಯಲು ನೆರವಾಗುವ ಕಾರಣ ಸಸ್ಯಾಹಾರಿಗಳಲ್ಲಿ ಇವು ಸಮಗ್ರವಾಗಿ ವಿಕಾಸ ಹೊಂದಿರುತ್ತವೆ
tooth

ಹಲ್ಲುಚಕ್ರ
(ತಂ) ಅಂಚಿನ ಸುತ್ತಲೂ ಹಲ್ಲುಗಳು ಇರುವ ಚಕ್ರ
cogwheel

ಹಲ್ಲುಣಿಗೆ
(ತಂ) ನೇಯುವುದಕ್ಕೆ ಮುಂಚೆ ನಾರು, ಉಣ್ಣೆ, ಮೊದಲಾದ ವನ್ನು ಹಿಂಜಲು,ಅಥವಾ ಬಟ್ಟೆಯ ಮೇಲೆ ಜುಂಗು ಎಬ್ಬಿಸಲು ಬಳಸುವ ತಂತಿ ಬ್ರಷ್. ಎಕ್ಕುವ ಸಲಕರಣೆ
card


logo