logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಹೃತ್‌ಸಂಬಂಧಿತ
(ವೈ) ಹೃದಯಕ್ಕೆ ಮತ್ತು ಜಠರದ ಮೇಲು ಪಾರ್ಶ್ವಕ್ಕೆ ಸಂಬಂಧಿಸಿದ
cardiac

ಹೃದಯ
(ವೈ) ಹೃದಯ ಎನ್ನುವುದು ಶಂಕುವಿನಾಕಾರದ, ಸ್ನಾಯುಗಳಿಂದ ರಚಿತವಾದ ಪೊಳ್ಳು ಅಂಗ. ಇದು ಸುಮಾರು ೩೦೦ ಗ್ರಾಂ ತೂಗುತ್ತದೆ. ಎದೆಗೂಡಿನಲ್ಲಿ ಎರಡು ಶ್ವಾಸಕೋಶಗಳ ನಡುವೆ ಇರುತ್ತದೆ. ತುದಿ ಮಾತ್ರ ಎಡಗಡೆಗೆ ಚಾಚಿರುತ್ತದೆ. ಹೃದಯದಲ್ಲಿ ನಾಲ್ಕು ಕೋಣೆ (ಕೋಷ್ಠ)ಗಳಿದ್ದು, ಮೇಲಿನ ಎರಡು ಕೋಣೆಗಳನ್ನು ಹೃತ್ಕರ್ಣಗಳೆಂದು ಹಾಗೂ ಕೆಳಗಿನ ಎರಡು ಕೋಣೆಗಳನ್ನು ಹೃತ್ಕುಕ್ಷಿಗಳೆಂದು ಕರೆಯುವರು. ಎಡಹೃತ್ಕರ್ಣ ಹಾಗೂ ಹೃತ್ಕುಕ್ಷಿಗಳ ನಡುವೆ ಹೃತ್ಕುಕ್ಷಿಯೊಳಕ್ಕೆ ಮಾತ್ರ ತೆರೆದುಕೊಳ್ಳಬಲ್ಲ ಕವಾಟ - ದ್ವಿದಳ ಕವಾಟ - ಇರುತ್ತದೆ. ಹಾಗೆಯೇ ಬಲ ಹೃತ್ಕರ್ಣ ಹಾಗೂ ಹೃತ್ಕುಕ್ಷಿಯ ನಡುವೆ, ಹೃತ್ಕುಕ್ಷಿ ಯೊಳಕ್ಕೆ ಮಾತ್ರ ತೆರೆದುಕೊಳ್ಳುವ ಒಂದು ಕವಾಟ - ತ್ರಿದಳ ಕವಾಟ - ಇರುತ್ತದೆ. ಎಡ ಹೃತ್ಕುಕ್ಷಿಯಿಂದ ಮಹಾಧಮನಿ ಹುಟ್ಟಿದರೆ, ಬಲ ಹೃತ್ಕುಕ್ಷಿಯಿಂದ ಶ್ವಾಸಕ ಧಮನಿ ಹುಟ್ಟುತ್ತದೆ. ಹೃದಯವು ನಿಮಿಷಕ್ಕೆ ಸರಾಸರಿ ೭೨ ಸಲ ಮಿಡಿಯುತ್ತದೆ. ಒಬ್ಬ ಮನುಷ್ಯನ ಸಾಮಾನ್ಯ ಜೀವಿತಾವಧಿಯಲ್ಲಿ ಹೃದಯ ಸುಮಾರು ೨೦೦೦ ದಶಲಕ್ಷಕ್ಕೂ ಹೆಚ್ಚು ಸಲ ಮಿಡಿಯುತ್ತದೆ. ಈ ಅವಧಿಯಲ್ಲಿ ಇದು ಸುಮಾರು ೫೦೦ ದಶಲಕ್ಷ ಲೀಟರ್ ರಕ್ತವನ್ನು ಪಂಪ್ ಮಾಡಿರುತ್ತದೆ. ಗುಂಡಿಗೆ
heart

ಹೃದಯ ನಾಟಿ
(ವೈ) ಹೃದಯಕ್ಕೆ ತಗುಲಿದ ಹಾನಿಯನ್ನು ಬೇರಾವ ರೀತಿಯಲ್ಲೂ ಗುಣಪಡಿಸಲು ಆಗದಿದ್ದಾಗ, ಮಾನವ ದಾನಿ-ಹೃದಯವನ್ನು ರೋಗಿಯ ದೇಹದೊಳಗಿನ ನಾಟಿ ಮಾಡುವ ಕ್ರಿಯೆ. ಹೀಗೆ ನಾಟಿ ಮಾಡಿದ ದಾನಿ-ಹೃದಯವು ಅದನ್ನು ಸ್ವೀಕರಿಸಿದ ರೋಗಿಯ ಶರೀರದಾದ್ಯಂತ ರಕ್ತವನ್ನು ಪಂಪ್ ಮಾಡುವ ಕಾರ್ಯವನ್ನು ವಹಿಸಿಕೊಳ್ಳುತ್ತದೆ
heart transplant

ಹೃದಯ ಮಿಡಿತ
(ವೈ) ಹೃದಯದ ಕ್ರಮಬದ್ಧ ಸಂಕೋಚನ-ವ್ಯಾಕೋಚನ ಕ್ರಿಯೆ. ಇದು ಒಂದು ನಿಮಿಷದಲ್ಲಿ ಸರಾಸರಿ ೭೨ ಸಲ ಜರಗುತ್ತದೆ. ಸ್ಟೆತೊಸ್ಕೋಪ್ ಮೂಲಕ ಈ ಮಿಡಿತವನ್ನು ಕೇಳಿಸಿಕೊಳ್ಳಬಹುದು. ಆರೋಗ್ಯವಂತ ವ್ಯಕ್ತಿಯಲ್ಲಿ ಒಂದೊಂದು ಮಿಡಿತದಲ್ಲೂ ಸುಮಾರು ಐದು ಔನ್ಸ್‌ಗಳಷ್ಟು, ಅಂದರೆ ಒಂದು ದಿನದಲ್ಲಿ ಸುಮಾರು ೪೦೦೦ ಗ್ಯಾಲನ್‌ಗಳಷ್ಟು ರಕ್ತ ಶರೀರದಾದ್ಯಂತ ಎಲ್ಲ ಭಾಗಗಳಲ್ಲೂ ಪ್ರವಹಿಸುತ್ತದೆ
heart beat

ಹೃದಯ ವಿಜ್ಞಾನ
(ವೈ) ಹೃದಯದ ಕ್ರಿಯೆ ಮತ್ತು ವ್ಯಾಧಿಗಳನ್ನು ಅಭ್ಯಸಿಸುವ ವೈದ್ಯಕೀಯ ವಿಭಾಗ
cardiology

ಹೃದಯ ವೈಫಲ್ಯ
(ವೈ) ಯಾವುದೇ ಕಾರಣಕ್ಕೆ ಹೃದಯವು ಶರೀರದ ಎಲ್ಲ ಅಂಗಗಳಿಗೂ ಸಾಕಷ್ಟು ರಕ್ತ ಒದಗಿಸಲು ವಿಫಲವಾಗಿ ರೋಗಿಯಲ್ಲಿ ಏದುಸಿರು ಮುಂತಾದ ಲಕ್ಷಣಗಳು ತಲೆದೋರುವುದು
heart failure

ಹೃದಯ ಸಂಕೋಚನ
(ಭೌ) ಹೃದಯದ ಕ್ರಿಯಾಚಕ್ರದಲ್ಲಿ ಸಂಕೋಚಿಸುವ ಘಟ್ಟ
systole

ಹೃದಯರೋಧ
(ವೈ) ಹೃತ್ಕರ್ಣದಿಂದ ಹೃತ್ಕುಕ್ಷಿಗೆ ಸಂಕೋಚನ ಆವೇಗವನ್ನು ಸಾಗಿಸುವ ವಿಶೇಷ ಊತಕಕ್ಕೆ ಗಾಯವಾದಾಗ ಸಂಕೋಚನ ಅಲೆ ವ್ಯಾಪಿಸುವುದು ತಪ್ಪಿ ಹೃತ್ಕರ್ಣ ಹೃತ್ಕುಕ್ಷಿಗಳ ನಡುವೆ ಪರಸ್ಪರ ಹೊಂದಾಣಿಕೆ ತಪ್ಪಿಹೋಗುವಂಥ ಸ್ಥಿತಿ. ಇದರಿಂದ ನಾಡಿಮಿಡಿತ ನಿಧಾನಗೊಳ್ಳುವುದಲ್ಲದೆ ಅನೇಕ ವೇಳೆ ಮಿದುಳಿನಲ್ಲಿ ರಕ್ತಹೀನತೆಯೂ ಉಂಟಾಗುತ್ತದೆ
heart block

ಹೃದಯಸ್ತಂಭನ
(ವೈ) ನಿರಂತರ ರಕ್ತರೇಚನ ಕ್ರಿಯೆ ಯಲ್ಲಿ ನಿರತವಾಗಿರುವ ಹೃದಯವು ಹಠಾತ್ತನೆ ನಿಂತುಹೋಗುವುದು
cardiac arrest

ಹೃದಯಾಕಾರದ
(ಸ) ಕೆಲವು ಬಗೆಯ ಎಲೆಗಳ ತೊಟ್ಟಿನ ಭಾಗವು ಸಾಂಪ್ರದಾಯಿಕ ಹೃದಯದ ಆಕಾರದಲ್ಲಿರುವುದು
cordate


logo