logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಹಿಸ್ಟಮೀನ್‌ರೋಧಕ
(ವೈ) ಶರೀರದಲ್ಲಿ ಹಿಸ್ಟಮೀನ್ ವರ್ತಿಸುವ ನೆಲೆಯನ್ನು ಪ್ರತಿಬಂಧಿಸಿ ಅದರ ಕ್ರಿಯೆಯನ್ನು ನಿಲ್ಲಿಸುವ ಔಷಧಿಗಳ ಒಂದು ಗುಂಪು. ಅಲರ್ಜಿ ಯಿಂದಾಗುವ ರೋಗಗಳ ಉಪಚಾರದಲ್ಲಿ ಬಳಕೆ
antihistamine

ಹಿಸ್ಟರಾಟಮಿ
(ವೈ) ಗರ್ಭಾಶಯದ ಶಸ್ತ್ರಕ್ರಿಯೆ. ಗರ್ಭಾಶಯವನ್ನು ಕತ್ತರಿಸಿ ಹಾಕುವುದು. ಗರ್ಭಾಶಯ ವಿಚ್ಛೇದ
hysterotomy

ಹಿಸ್ಟಿಡೀನ್
(ರ) C6H9O2N. ಸ್ಫಟಿಕೀಯ ಪ್ರತ್ಯಾಮ್ಲೀಯ ಅಮಿನೋ ಆಮ್ಲ. ಹಿಮೊಗ್ಲಾಬಿನ್‌ನಲ್ಲಿ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಹೆಚ್ಚಾಗಿ ಪ್ರೋಟೀನ್‌ಗಳ ಜಲವಿಭಜನೆಯಿಂದ ರೂಪುಗೊಳ್ಳುತ್ತದೆ. ನೋಡಿ: ಅಮೀನೊಆಮ್ಲಗಳು
histidine

ಹಿಸ್ಟಿರಿಸಿಸ್
(ಭೌ) ಮುಖ್ಯವಾಗಿ ವಸ್ತುಗಳ ಸ್ಥಿತಿಸ್ಥಾಪಕ ಹಾಗೂ ಕಾಂತೀಯವರ್ತನೆಯಲ್ಲಿ ಎದುರಾಗುವ ಭೌತ ವಿದ್ಯಮಾನ. ವಸ್ತುವನ್ನು ಪೀಡನೆಗೆ ಒಳಪಡಿಸಿದಾಗ ಅದರಲ್ಲಿ ಕೃಷ್ಟಿ (ತುಯ್ತ) ಪ್ರಕಟವಾಗುತ್ತದೆ. ಪೀಡನೆ-ಕೃಷ್ಟಿ ಈ ಸಂಬಂಧದಲ್ಲಿ ಪೀಡನೆ ಏರಿದಂತೆ ಕೃಷ್ಟಿ ಏರುವ ದರವು ಪೀಡನೆ ಇಳಿದಂತೆ ಕೃಷ್ಟಿ ಇಳಿಯುವ ದರಕ್ಕಿಂತ ಅಧಿಕ. ಅಂದರೆ ಪೀಡನೆ ಇಳಿಯುವಾಗ ಕೃಷ್ಟಿ ಇಳಿಯುವು ದರಲ್ಲಿ ಹಿಂದೆ ಬೀಳುತ್ತದೆ. ಎಂದೇ ಪೀಡನೆಯ ನಿರ್ದಿಷ್ಟ ಬೆಲೆಗೆ ಸಂವಾದಿಯಾದ ಕೃಷ್ಟಿ, ಆರೋಹಣ ಸ್ಥಿತಿಯಲ್ಲಿಯದಕ್ಕಿಂತ ಅವರೋಹಣ ಸ್ಥಿತಿಯಲ್ಲಿಯದು ಅಧಿಕ. ಪೀಡನೆಯನ್ನು ಪೂರ್ಣವಾಗಿ ಇಲ್ಲವಾಗಿಸಿದಾಗಲೂ ವಸ್ತುವಿನಲ್ಲಿ ಶೇಷಕೃಷ್ಟಿ ಉಳಿದೇ ಇರುವುದು. ಹೀಗೆ ಕಾರಣ (ಪೀಡನೆ) ಕುರಿತಂತೆ ಪರಿಣಾಮದ (ಕೃಷ್ಟಿ) ಹಿಂಜರಿಕೆಯೇ ಹಿಸ್ಟಿರಿಸಿಸ್. ಇದೇ ರೀತಿ ಕಾಂತೀಕರಣ ಕ್ಷೇತ್ರ ಕುರಿತಂತೆ ಕಾಂತೀಕರಣ ಹಿಂಜರಿಕೆಯು ಫೆರ್ರೋಕಾಂತೀಯ ವಸ್ತುಗಳಲ್ಲಿ ಕಂಡುಬರುತ್ತದೆ
hysterisis

ಹಿಸ್ಟಿರಿಸಿಸ್ ಚಕ್ರ
(ಭೌ) ಪೀಡನೆ ಮೊದಲು ಹೆಚ್ಚುತ್ತ ಅನಂತರ ಇಳಿಯುತ್ತ ಹೋದಂತೆ ಪದೇಪದೇ ಮಾಡಿದ ಪೀಡನೆ-ಕೃಷ್ಟಿ ಅಳತೆಗಳನ್ನು ಒಂದು ಆಲೇಖದಲ್ಲಿ ದಾಖಲಿಸಿದಾಗ ಅದು ಸಂವೃತ ಕುಣಿಕೆಯ ರೂಪತಾಳುತ್ತದೆ. ಇದೇ ಹಿಸ್ಟಿರಿಸಿಸ್ ಚಕ್ರ
hysterisis cycle

ಹಿಸ್ಟೊಜನ್
(ಸ) ಒಂದು ಭಾಗ ಆಗಲೇ ಶಾಶ್ವತ ಊತಕವಾಗಿ ಅಭವರ್ಧನೆಗೊಂಡಿರುವಂಥ ಪ್ರಾಥಮಿಕ ಊತಕ
histogen

ಹಿಸ್ಟೋನ್
(ರ) ಸಸ್ಯ ಹಾಗೂ ಪ್ರಾಣಿ ಕ್ರೋಮೊಸೋಮ್‌ಗಳ ಡಿಎನ್‌ಎಯೊಂದಿಗೆ ಕಂಡುಬರುವ ಜಲವಿಲೇಯ ಪ್ರೋಟೀನ್‌ಗಳು. ಇವು ಅಧಿಕ ಪ್ರಮಾಣದಲ್ಲಿ ಪ್ರತ್ಯಾಮ್ಲೀಯ (ಧನಾವಿಷ್ಟ) ಅಮೀನೊ ಆಮ್ಲಗಳು. ಲೈಸೀನ್, ಆರ್ಜಿನೈನ್ ಹಾಗೂ ಹಿಸ್ಟಿಡೈನ್‌ಗಳನ್ನು ಒಳಗೊಂಡಿರುತ್ತವೆ. ಕೋಶವಿಭಜನೆಯ ಸಮಯದಲ್ಲಿ ಕ್ರೋಮೊಸೋಮ್‌ಗಳು ಸಾಂದ್ರಗೊಳ್ಳಲೂ ಸುರುಳಿಗೊಳ್ಳಲೂ ಇವೇ ಕಾರಣವೆಂದು ನಂಬಲಾಗಿದೆ. ಕಶೇರುಕಗಳ ರೇತ್ರಾಣು ಕೋಶಗಳಲ್ಲಾಗಲೀ ಬ್ಯಾಕ್ಟೀರಿಯಗಳಲ್ಲಾಗಲೀ ಇವು ಕಾಣಬರವು
histone

ಹೀಮಚೂರಿಯ
(ವೈ) ಮೂತ್ರದಲ್ಲಿ ರಕ್ತವಿರುವ ವ್ಯಾಧಿ. ರಕ್ತಮೂತ್ರ
haematuria

ಹೀಮಟೈಟ್
(ರ) ಕಬ್ಬಿಣದ ಅಮೂಲ್ಯ ಅದಿರು. ನೈಸರ್ಗಿಕ ಫೆರಿಕ್ ಆಕ್ಸೈಡ್, Fe2O3. ತ್ರಿಕೋಣೀಯ ವ್ಯವಸ್ಥೆ ಯಲ್ಲಿ ಸ್ಫಟಿಕೀಕರಿಸುತ್ತದೆ. ಎರಡು ಪ್ರಧಾನ ರೂಪಗಳು: ಒಂದು, ಬೃಹತ್ತಾಗಿ ಮೂತ್ರಪಿಂಡ ಆಕಾರದ ಕೆಂಪು ಅದಿರು, ಮತ್ತೊಂದು ಬೂದು-ಕಪ್ಪು ಬಣ್ಣಗಳ ಲೋಹೀಯ ಸ್ಫಟಿಕ. ಕಾಠಿಣ್ಯಾಂಕ ೫.೫-೬.೫, ಸಾಸಾಂ ೪.೯-೫.೩, ಕಬ್ಬಿಣದ ಅಂಶ ಶೇ. ೭೦. ಕಬ್ಬಿಣದ ಉತ್ಪಾದನೆಯಲ್ಲೂ, ವರ್ಣದ್ರವ್ಯವಾಗಿಯೂ ಬಳಕೆ
haematite

ಹೀಮಟೊಫಾಗಸ್
(ಪ್ರಾ) ರಕ್ತ ಕುಡಿದು ಜೀವಿಸುವ (ಪ್ರಾಣಿಗಳು). ಉದಾ : ಜಿಗಣೆ, ತಿಗಣೆ, ರಕ್ತಭಕ್ಷಿ
haematophagous


logo