logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಹಿತ್ತಾಳೆ ಬೆಸೆತ
(ತಂ) ಹಿತ್ತಾಳೆಯಂಥ ಕಬ್ಬಿಣೇತರ ಲೋಹವನ್ನು ಕರಗಿಸುವ ಮೂಲಕ ಲೋಹಗಳಿಗೆ ಬೆಸುಗೆ ಹಾಕುವುದು. ಸಂಪರ್ಕ ಬಿಂದುವಿನಲ್ಲಿ ಈ ಲೋಹದ ದ್ರವಣ ಬಿಂದು ಮೂಲ ಲೋಹಗಳ ದ್ರವಣ ಬಿಂದುಗಳಿಗಿಂತ ಕಡಿಮೆ
braze

ಹಿಂದೆರೆ
(ಭೂವಿ) ಹಿಂದಕ್ಕೆ ತೆರಳುವ ಅಲೆ
backwash

ಹಿನ್ನಾಡು
(ಭೂವಿ) ಸಮುದ್ರ ತೀರಕ್ಕೆ ಅಥವಾ ನದಿಯ ದಡಕ್ಕೆ ಹಿಂಭಾಗದಲ್ಲಿರುವ ಪ್ರದೇಶ. ರೇವಿಗೆ ವ್ಯಾಪಾರದ ಸರಕುಗಳನ್ನು ಒದಗಿಸುವ ಒಳನಾಡು ಪ್ರದೇಶ
hinterland

ಹಿನ್ನಿ
(ಪ್ರಾ) ಹೆಣ್ಣು ಕತ್ತೆಗೆ ಗಂಡು ಕುದುರೆಯಿಂದ ಹುಟ್ಟಿದ ಸಂಕರ ಪ್ರಾಣಿ. ಭಾರ ಎಳೆಯಲು ಖ್ಯಾತಿ. ನೋಡಿ: ಹೇಸರಗತ್ತೆ
hinny

ಹಿನ್ನೀರು
(ಭೂ) ಕಟ್ಟೆ ಕಟ್ಟಿ ನಿಲ್ಲಿಸಿದ ಹೊಳೆ ನೀರು ಅಥವಾ ಜಲಾಶಯ. ಕಡಲಿನಿಂದ ಬೇರ್ಪಟ್ಟಿದ್ದರೂ ಇಕ್ಕಟ್ಟು ಭೂಸಂಧಿ ಮೂಲಕ ಅದರ ಜೊತೆ ಸಂಪರ್ಕವಿರುವ ನೀರಿನ ರಾಶಿ. ಒತ್ತು ನೀರು
backwater

ಹಿನ್ನೆಲೆ ಗದ್ದಲ
(ಭೌ) ವಿವಿಧ ಸಂಜ್ಞೆಗಳನ್ನು (ಉದಾ: ರೇಡಿಯೊ ಸಂಜ್ಞೆಗಳನ್ನು) ಉತ್ಪಾದಿಸಲು/ಪತ್ತೆ ಹಚ್ಚಲು, ಅಳೆಯಲು/ದಾಖಲಿಸಲು ಬಳಸುವ ವ್ಯವಸ್ಥೆಯಲ್ಲಿ ಯಾವುದೇ ಕಾರಣದಿಂದ ಹಣುಕುವ ಮತ್ತು ಅಪೇಕ್ಷಿತ ಸಂಜ್ಞೆಗಳೊಂದಿಗೆ ಪ್ರತ್ಯೇಕಿಸಲಾಗದಂತೆ ಮಿಳನಗೊಂಡಿರುವ, ಎಲ್ಲ ಬಗೆಯ ಅಡ್ಡಿ ಅಡಚಣೆಗಳ ಸಮಗ್ರ ಪರಿಣಾಮ
background noise

ಹಿನ್ನೆಲೆ ವಿಕಿರಣ
(ಖ) ಸುಮಾರು ೧೫,೦೦೦,೦೦೦,೦೦೦ ವರ್ಷಗಳ ಹಿಂದೆ ವಿಶ್ವದ ಆದಿಯನ್ನು ಸಾರಿದ ಮಹಾಬಾಜಣೆ ಆಸ್ಫೋಟನೆಯ ಶೇಷ ವಿದ್ಯುತ್ಕಾಂತ ವಿಕಿರಣ. ಇದಕ್ಕೆ 3K ಹಿನ್ನೆಲೆ ಅಥವಾ ವಿಶ್ವದ ಹಿನ್ನೆಲೆ ಕ್ಷೋಭೆ ಎಂಬ ಹೆಸರುಗಳೂ ಉಂಟು. ಅತಿ ದುರ್ಬಲ, ಆದರೆ ಅತಿ ಖಚಿತ ವಿಕಿರಣ. ೧೯೬೪ರಲ್ಲಿ ಮೊತ್ತಮೊದಲು ಆವಿಷ್ಕೃತವಾದಾಗ ಆ ತನಕ ಕೇವಲ ಊಹೆಯಾಗಿದ್ದ ಮಹಾಬಾಜಣೆ ವಾದಕ್ಕೆ ಖಚಿತ ಪುರಾವೆ ದೊರೆತಂತಾಯಿತು. ಸೂಕ್ಷ್ಮ ತರಂಗ ಹಿನ್ನೆಲೆ (ಪವಿ) ಭೂ ಮೇಲ್ಮೈಯಲ್ಲಿ ಮತ್ತು ವಾತಾವರಣದಲ್ಲಿರುವ ಕಡಿಮೆ ತೀವ್ರತೆಯ ಆಯಾನೀಕೃತ ವಿಕಿರಣ. ಭೂಮಿಯ ಶಿಲೆ, ಮಣ್ಣು ಮತ್ತು ವಾತಾವರಣದಲ್ಲಿರುವ ರೇಡಿಯೋ ಸಮಸ್ಥಾನಿಗಳಿಂದ ಮತ್ತು ವಿಶ್ವವಿಕಿರಣದಿಂದ ಇದು ಉಂಟಾಗುತ್ತದೆ. ಈ ರೇಡಿಯೋ ಸಮಸ್ಥಾನಿಗಳು ಸಹಜವಾಗಿ ಆದವುಗಳಾಗಿರಬಹುದು. ಇಲ್ಲವೇ ಬೈಜಿಕ ವಿಕಿರಣ ದೂಳಿನಿಂದ ಅಥವಾ ವಿದ್ಯುದುತ್ಪಾದನಾ ಕೇಂದ್ರ ಗಳಿಂದ ಹೊರಬರುವ ತ್ಯಾಜ್ಯ ಅನಿಲಗಳಿಂದಲೂ ಉಂಟಾಗಿರ ಬಹುದು. ನಿರ್ದಿಷ್ಟ ಆಕರದಿಂದ ಉತ್ಪನ್ನವಾಗುವ ವಿಕಿರಣವನ್ನು ಅಳೆಯಬೇಕಾದಾಗ ಈ ಹಿನ್ನೆಲೆ ವಿಕಿರಣಗಳನ್ನು ಗಣನೆಗೆ ತೆಗೆದುಕೊಳ್ಳಬೇಕು
background radiation

ಹಿನ್ಸರಿತ
(ತಂ) ಯಂತ್ರದ ಎರಡು ಚಲನಶೀಲ ಭಾಗಗಳ ನಡುವಿನ ಸಂಯೋಜಕದ ರಚನೆಯಲ್ಲಿ ಇಲ್ಲವೇ ಹೊಂದಾಣಿಕೆಯಲ್ಲಿ ಊನ ತಲೆದೋರಿದಾಗ ಮೊದಲ ಭಾಗವು ಎರಡನೆಯದಕ್ಕೆ ಚಲನೆಯನ್ನು ಸಂವಹಿಸುವ ಮುನ್ನ ನಡೆಸಬೇಕಾಗಿ ಬರುವ ಅತ್ಯಲ್ಪ ಮುಕ್ತಚಲನೆ. ಈ ಚಲನೆ ಆಗುವ ವೇಳೆ ಚಲನಶೀಲ ಭಾಗಗಳು ಬಾಧಿತವಾಗವು
backlash

ಹಿಪ್ನಾಲಜಿ
(ವೈ) ನಿದ್ರಾವಸ್ಥೆಯನ್ನು ಕುರಿತ ವಿಜ್ಞಾನ. ಸುಪ್ತಿವಿಜ್ಞಾನ
hypnology

ಹಿಪ್ನೋಸಿಸ್
(ವೈ) ಶಾಬ್ದಿಕ (ಮಾತು) ಅಥವಾ ಅಶಾಬ್ದಿಕ (ಮಾತಿಲ್ಲದ) ವಿಧಾನಗಳಿಂದ ತಾತ್ಕಾಲಿಕ ಸುಪ್ತಸ್ಥಿತಿಯನ್ನು ಉಂಟುಮಾಡುವುದು. ಈ ಸ್ಥಿತಿಯಲ್ಲಿ ವ್ಯಕ್ತಿ ಬಾಹ್ಯ ಭಾವ ಪ್ರೇರಣೆಗಳಿಗೆ ಹೆಚ್ಚು ಸುಲಭವಾಗಿ ಓಗೊಡುತ್ತಾನೆ
hypnosis


logo