logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಲಿಂಗ ನಿಷ್ಪತ್ತಿ
(ಸಂ) ಒಂದು ಪ್ರದೇಶದ ಜನಸಂಖ್ಯೆಯಲ್ಲಿ ಗಂಡು-ಹೆಣ್ಣುಗಳ ಸಂಖ್ಯೆಗಳ ನಿಷ್ಪತ್ತಿ. ಉದಾ: ೫೭೦೦೦ ಜನಸಂಖ್ಯೆಯ ಪ್ರದೇಶದಲ್ಲಿ ೨೭೦೦೦ ಹೆಂಗಸರಿದ್ದರೆ ಗಂಡು- ಹೆಣ್ಣು ಲಿಂಗ ನಿಷ್ಪತ್ತಿ ೧೦೦೦:೯೦೦
sex ratio

ಲಿಗ್ನಿನ್
(ಸ) ಸಸ್ಯಗಳ ಕೋಶಭಿತ್ತಿಗೆ ನಾರು ಸ್ವರೂಪ ಕೊಡಲು ಕಾರಣವಾದ, ಸೆಲ್ಯೂಲೋಸ್‌ನಂಥ ಒಂದು ಪಾಲಿಮರ್ ಸಂಯುಕ್ತ
lignin

ಲಿಗ್ನಿಫಿಕೇಷನ್
(ಸ) ಸಸ್ಯ ಜೀವಕೋಶಗಳ ಭಿತ್ತಿಯಲ್ಲಿ ಭೌತ, ರಾಸಾಯನಿಕ ಬದಲಾವಣೆಗಳನ್ನು ಉಂಟುಮಾಡಿ ಅದನ್ನು ಲಿಗ್ನಿನ್ ಅಥವಾ ಲಿಗ್ನೊ ಸೆಲ್ಯುಲೋಸ್ ಆಗಿ ಪರಿವರ್ತಿಸಿ ದಾರುವಾಗಿಸುವ ಪ್ರಕ್ರಿಯೆ. ಕಾಷ್ಠೀಕರಣ
lignification

ಲಿಗ್ನೈಟ್
(ಭೂವಿ) ಸಸ್ಯದ ದಾರು ರಚನೆಯ ಗುರುತಿರುವ, ಬಿಟುಮಿನಸ್ ಕಲ್ಲಿದ್ದಲಿಗೂ ಮತ್ತು ಸಸ್ಯಾಂಗಾರಕ್ಕೂ ನಡುವಣ ಸ್ಥಿತಿಯ, ಕಂದು ಕಲ್ಲಿದ್ದಲು. ಕೆಲವು ಜಲಜಶಿಲೆಗಳಲ್ಲಿ ದೊರೆಯುವ ಇದು ಕಲ್ಲಿದ್ದಲು ಉಂಟಾಗುವ ಪ್ರಕ್ರಿಯೆಯಲ್ಲಿ ಎರಡನೆಯ ಹಂತಕ್ಕೆ ಸೇರಿದುದು. ಇದರಲ್ಲಿ ಆವಿಶೀಲ ವಸ್ತುಗಳು ಅಧಿಕ. ಇಂಗಾಲದ ಅಂಶ ಕಡಿಮೆ. ಲಿಗ್ನೈಟ್ ನಿಕ್ಷೇಪಗಳು ಭಾರತದಲ್ಲಿ ನೈವೇಲಿ, ಕಾಶ್ಮೀರ ಮತ್ತು ಅಸ್ಸಾಮ್‌ಗಳಲ್ಲಿ ಕಾಣಬರುತ್ತವೆ
lignite

ಲಿಗ್ಯಾಂಡ್
(ರ) ಸಂಕೀರ್ಣ ಅಯಾನುವೊಂದರಲ್ಲಿ ಕೇಂದ್ರ ಪರಮಾಣುವಿಗೆ ಬಂಧಿಸಿಕೊಂಡಿರುವ ಪರಮಾಣು ಅಥವಾ ಅಣು ಅಥವಾ ಅಯಾನ್. ಉದಾ: Fe(CN)64_ನಲ್ಲಿ (CN)_. ಸಹಯೋಜಕ ಬಂಧವೇರ್ಪಡುವಾಗ ಇಲೆಕ್ಟ್ರಾನ್ ಯುಗ್ಮಗಳನ್ನು ಒದಗಿಸಿ ಬಂಧದಲ್ಲಿ ಪಾಲ್ಗೊಳ್ಳುವ ಘಟಕ
ligand

ಲಿಗ್ರೋಯಿನ್
(ರ) ಪೆಟ್ರೋಲಿಯಮ್‌ನ ಆಂಶಿಕ ಆಸವನದಲ್ಲಿ ದೊರಕುವ, ಆವಿಶೀಲ ಹೈಡ್ರೊಕಾರ್ಬನ್‌ಗಳ ಮಿಶ್ರಣವಾಗಿರುವ, ರಾಸಾಯನಿಕ ಪ್ರಕ್ರಿಯೆಗಳಲ್ಲಿ ದ್ರಾವಣವಾಗಿ ಬಳಸುವ ತೈಲದಂಥ ದ್ರವ. ಕುಬಿಂ ೮೦0-೧೨೦0ಸೆ
ligroin

ಲಿಂಟಲ್
(ತಂ) ಬಾಗಿಲಿನ ಅಥವಾ ಕಿಟಕಿಯ ಮೇಲೆ ಗೋಡೆಗೆ ಆಸರೆಯಾಗಿ ಅಡ್ಡವಾಗಿ ಹಾಕುವ ಹಾಸುಮರ, ಹಾಸುಗಲ್ಲು ಮೊದಲಾದವು. ಉತ್ತರಂಗ. ದಾರವಂದ ಪಟ್ಟಿ
lintel

ಲಿಂಟ್
(ವೈ) ಗಾಯ ತೊಳೆದು ಕಟ್ಟುವುದಕ್ಕಾಗಿ ಪಕ್ಕದಲ್ಲಿ ಕೆರೆದು ಮೃದು ಮಾಡಿದ ಹತ್ತಿಯ ಬಿಳಿಯ ಬಟ್ಟೆ. ಗಾಯದ ಮೆದುಬಟ್ಟೆ. (ಸ) ಹತ್ತಿ ಗಿಡದ ಪ್ರಧಾನ ಬೀಜ ಕೋಶಗಳು
lint

ಲಿಟ್ಮಸ್
(ರ) ದ್ರವದಲ್ಲಿ ವಿಲೀನವಾಗುವ ನೇರಿಳೆ ಬಣ್ಣದ ಸಸ್ಯ ಮೂಲದ (ಕಲ್ಲು ಹೂಗಳಿಂದ ತೆಗೆದ) ಪದಾರ್ಥ. ಇದು ಆಮ್ಲದಲ್ಲಿ ಕೆಂಪು, ಪ್ರತ್ಯಾಮ್ಲದಲ್ಲಿ ನೀಲಿ ಬಣ್ಣ ತಳೆಯುತ್ತದೆ
litmus

ಲಿಟ್ಮಸ್ ಪರೀಕ್ಷೆ
(ರ) ಲಿಟ್ಮಸ್ ವರ್ಣದ್ರವ್ಯ ದ್ರಾವಣದಲ್ಲಿ ಅದ್ದಿ ತಯಾರಿಸಿದ ಕಾಗದ ಬಳಸಿ ಯಾವುದೇ ದ್ರವ ಆಮ್ಲವೇ ಇಲ್ಲವೇ ಪ್ರತ್ಯಾಮ್ಲವೇ (ಕ್ಷಾರವೇ) ಎಂಬುದನ್ನು ಕಂಡುಹಿಡಿಯುವ ವಿಧಾನ. ಆಮ್ಲವಾದರೆ ಲಿಟ್ಮಸ್ ಕಾಗದ ಕೆಂಪು ಬಣ್ಣಕ್ಕೂ ಪ್ರತ್ಯಾಮ್ಲವಾದರೆ ನೀಲಿ ಬಣ್ಣಕ್ಕೂ ತಿರುಗುತ್ತದೆ
litmus test


logo