logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಲಂಬಕೋನೀಯ ವೃತ್ತಗಳು
(ಗ) ಲಂಬಕೋನದಲ್ಲಿ ಸಂಧಿಸುವ ಒಂದು ಜೊತೆ ವೃತ್ತಗಳು. ಸಂಧಿಬಿಂದುವಿನಲ್ಲಿ ಒಂದರ ಸ್ಪರ್ಶಕ ಇನ್ನೊಂದರ ಕೇಂದ್ರದ ಮೂಲಕ ಹಾಯುತ್ತದೆ ಮತ್ತು ವಿಪರ್ಯಯವಾಗಿ
orthogonal circles

ಲಂಬದೂರ
(ಗ) ಅಳತೆಯ ಮುಖ್ಯ ರೇಖೆಯಿಂದ ಅದಕ್ಕೆ ಲಂಬವಾದ ದಿಶೆಯಲ್ಲಿ ಅಳೆದ ಸ್ವಲ್ಪ ದೂರ
offset

ಲಂಬನ
(ಖ) ವೀಕ್ಷಕನ ಸ್ಥಳ ಬದಲಾವಣೆಯ ಫಲವಾಗಿ ಆಕಾಶಕಾಯಗಳ ಸ್ಥಾನಗಳಲ್ಲಿ ಪ್ರಕಟವಾಗುವ ತೋರಿಕೆ ವ್ಯತ್ಯಾಸ. ವಿಶೇಷವಾಗಿ, ಇದು ಅಂತರಿಕ್ಷದಲ್ಲಿ ಭೂಮಿಯ ಚಲನೆಯಿಂದ ಆಗುತ್ತದೆ. ಭೂಮಿಯ ದೈನಂದಿನ ಗಿರಕಿ, ವಾರ್ಷಿಕ ಕಕ್ಷೆ, ವ್ಯೋಮ ದಲ್ಲಿಯ ಚಲನೆ ಇವುಗಳಿಂದಾಗಿ ಸಂಭವಿಸುತ್ತದೆ. ದಿಶಾಂತರ
parallax

ಲಂಬನಕೋನ
(ಖ) ಆಕಾಶಕಾಯವನ್ನು ಧ್ರುವ ಬಿಂದುವಿಗೂ ವೀಕ್ಷಕನ ಖಮಧ್ಯಕ್ಕೂ ಸೇರಿಸುವ ಮಹಾ ವೃತ್ತಖಂಡಗಳ ನಡುವಿನ ಕೋನ. ನೋಡಿ : ಖಗೋಳ ತ್ರಿಭುಜ
parallax angle

ಲಂಬನಿರ್ದೇಶಕಗಳು
(ಗ) ಪರಸ್ಪರ ಲಂಬವಾಗಿರುವ ಸ್ಥಿರರೇಖೆಗಳನ್ನು ಆಧರಿಸಿ ಯಾವುದೇ ಬಿಂದುವನ್ನು ಉಲ್ಲೇಖಿಸುವ ಸಂಖ್ಯೆಗಳ ಒಂದು ಕ್ರಮಗಣ. ಉದಾ : (-೩,೨); (೩,೪,-೫)
rectangular coordinates

ಲಂಬಪಾದ ತ್ರಿಭುಜ
(ಗ) ಯಾವುದೇ ತ್ರಿಭುಜ ABCಯಲ್ಲಿ ಶೃಂಗಗಳಿಂದ ಎದುರು ಭುಜಗಳಿಗೆ ಎಳೆದ ಲಂಬಗಳ ಪಾದಗಳು ರಚಿಸುವ ತ್ರಿಭುಜ: AD, BE, CFಗಳು ಲಂಬಗಳು, D, E, Fಲಂಬ ಪಾದಗಳು ಆದ್ದರಿಂದ ತ್ರಿಭುಜ ABCಯ ಲಂಬಪಾದ ತ್ರಿಭುಜ DEF. ನವಬಿಂದು ವೃತ್ತ ಈ ತ್ರಿಭುಜದ ಪರಿವೃತ್ತ. ಅಲ್ಲದೆ ತ್ರಿಭುಜ ABCಯ ಲಂಬ ಕೇಂದ್ರ O ಲಂಬಪಾದ ತ್ರಿಭುಜದ ಒಳಕೇಂದ್ರ - ಅಂದರೆ AD, BE, CFಗಳು ಅನುಕ್ರಮವಾಗಿ FDE, DEF, EFD ಕೋನಗಳ ಸಮದ್ವಿಭಾಜಕಗಳು
pedal triangle

ಲಂಬಪೂರಕ ಕೋನಗಳು
(ಗ) ೨ ಕೋನಗಳ ಮೊತ್ತ ಲಂಬಕೋನ (=೯೦0) ಆದಾಗ ಒಂದು ಇನ್ನೊಂದರ ಪೂರಕ. ನೋಡಿ: ಸರಳಪೂರಕ ಕೋನಗಳು
complementary angles

ಲಂಬರೇಖಾ ಪ್ರಕ್ಷೇಪ
(ಗ) y = f (x) ಎಂಬ ಸಮೀಕರಣವನ್ನು ಹೊಂದಿರುವ ಹಾಗೂ ಪ್ರತಿಯೊಂದು ಬಿಂದುವಿ ನಲ್ಲೂ ಅವಕಲನೀಯ ಆಗಿರುವ (ಡಿಫರೆನ್ಸಿಯೆಬಲ್) ಒಂದು ವಕ್ರರೇಖೆಯಲ್ಲಿ P(x,y) ಎಂಬುವುದು ಒಂದು ಬಿಂದು ವಾಗಿರಲಿ. QPT ಎಂಬುದು P ಬಿಂದುವಿನಲ್ಲಿ ದತ್ತ ವಕ್ರ ರೇಖೆಗೆ ಸ್ಪರ್ಶರೇಖೆಯೂ ಹಾಗೂ RPN ಎಂಬುದು ಅದಕ್ಕೆ ಲಂಬವಾಗಿರುವ ಲಂಬರೇಖೆಯೂ ಆಗಿರಲಿ. ಆಗ ಅದರ ಪ್ರೇಕ್ಷೇಪವಾಗಿರುವ SN ಎಂಬುದು ಲಂಬರೇಖಾ ಪ್ರಕ್ಷೇಪ. ನೋಡಿ : ಸ್ಪರ್ಶರೇಖಾ ಪ್ರಕ್ಷೇಪ
subnormal

ಲಂಬಸೂತ್ರ
(ತಂ) ಗೋಡೆ ಮೊದಲಾದವುಗಳ ಲಂಬಮಾನವನ್ನು ಪರೀಕ್ಷಿಸಲು ಉಪಯೋಗಿಸುವ ತೂಗುಗುಂಡು ದಾರ
plumbline

ಲಂಬಾಕ್ಷೀಯ
(ಭೂವಿ) ಪರಸ್ಪರ ಲಂಬವಾದ ಅಕ್ಷಗಳಿರುವ (ಸ್ಫಟಿಕ)
orthometric


logo