logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಲೋಹೀಯ ಬಂಧ
(ರ) ಘನಲೋಹ ಅಥವಾ ಮಿಶ್ರಲೋಹವೊಂದರ ಪರಮಾಣುಗಳನ್ನು ಒಟ್ಟಿಗೆ ಹಿಡಿದು ಇರಿಸುವಂಥ ಬಂಧದ ಮಾದರಿಯ ರಾಸಾಯನಿಕ ಬಂಧ. ಅಂಥ ಘನವಸ್ತುಗಳಲ್ಲಿ ಪರಮಾಣುಗಳು ಅಯಾನೀಕೃತವಾಗಿದ್ದು ಧನಾತ್ಮಕ ಅಯಾನ್‌ಗಳು ಜಾಲಕ ಸ್ಥಾನಗಳಲ್ಲಿರುತ್ತವೆ. ವೇಲೆನ್ಸ್ ಎಲೆಕ್ಟ್ರಾನ್‌ಗಳು ಜಾಲಕದ ಮೂಲಕ ಮುಕ್ತವಾಗಿ (ಅಥವಾ ಬಹುಮಟ್ಟಿಗೆ ಮುಕ್ತವಾಗಿ) ಚಲಿಸುತ್ತ ‘ಎಲೆಕ್ಟ್ರಾನ್ ಅನಿಲ’ವನ್ನು ರೂಪಿಸುತ್ತವೆ. ಧನಾತ್ಮಕ ಲೋಹ ಅಯಾನ್‌ಗಳ ಮತ್ತು ಎಲೆಕ್ಟ್ರಾನ್‌ಗಳ ನಡುವಿನ ಸ್ಥಾಯೀವಿದ್ಯುತ್ ಆಕರ್ಷಣೆಯೇ ಬಂಧಕ ಶಕ್ತಿ. ಮುಕ್ತ ಎಲೆಕ್ಟ್ರಾನ್‌ಗಳ ಅಸ್ತಿತ್ವವೇ ಲೋಹಗಳಲ್ಲಿ ಉತ್ತಮ ವಿದ್ಯುತ್ ಹಾಗೂ ಉಷ್ಣವಾಹಕತೆಯ ಗುಣಗಳನ್ನು ಉಂಟುಮಾಡುವಂತಹುದು
metallic bond

ಲೋಳೆ
(ಭೂವಿ) ಪುಡಿಗುಟ್ಟಿದ ಅದಿರಿನ ತೀರ ಸಣ್ಣ ಗಾತ್ರದ ಕಣಗಳು ನಿಧಾನವಾಗಿ ನೀರಿನಲ್ಲಿಳಿದು ತಲದಲ್ಲಿ ಸಂಚಯಿಸಿ ಆದ ಕೆಸರಿನಂಥ ಅರೆದ್ರವ ಅರೆಘನ ಮಿಶ್ರಣ
slime

ಲೋಳೆಗಟ್ಟಿದ
(ರ) ದಪ್ಪವಾದ ಎಳೆಗಳಂತೆ ಹೊರಗೆ ಎಳೆಯಲು ಸಾಧ್ಯ ಮಾಡಿಕೊಡುವಷ್ಟು ಅಂಟಂಟಾದ (ದ್ರವ)
ropy

ಲೋಳೆಮೀನು
(ಪ್ರಾ) ನೋಡಿ : ಅಂಬಲಿಮೀನು
jelly fish

ಲ್ಯಾಕರ್
(ರ) ಆವಿಶೀಲ ದ್ರವದಲ್ಲಿ ಗೋಂದಿನಂಥ ವಸ್ತುವಿನ ದ್ರಾವಣ. ಮರ, ಲೋಹ, ಬಣ್ಣಗೆಲಸ ಇತ್ಯಾದಿಗಳಿಗೆ ತಿಳಿಯಾದ, ಗಡಸಾದ ಹೊರಲೇಪನ ನೀಡಲು ಬಳಕೆ. ವಾರ್ನಿಷ್. ಮೆರುಗು
lacquer

ಲ್ಯಾಕೊಲಿತ್
(ಭೂವಿ) ಸಾಮಾನ್ಯವಾಗಿ ಗುಮ್ಮಟದಂಥ ಮೇಲುಭಾಗ ಹಾಗೂ ಸಮತಟ್ಟು ಪಾದವಿರುವ ಅಂತಃಸರಣ ಅಗ್ನಿಶಿಲೆ, ಕೆಳಭಾಗದಿಂದ ಶಿಲಾಪಾಕ ಉಬ್ಬುವುದರಿಂದ ಈ ರಚನೆ
laccolith

ಲ್ಯಾಕ್ಕೇಸ್
(ರ) ಬ್ಯಾಕ್ಟೀರಿಯಗಳಲ್ಲೂ ಕೆಲವು ಶಿಲೀಂಧ್ರ ಗಳಲ್ಲೂ ಇರುವ ಒಂದು ಕಿಣ್ವ
laccase

ಲ್ಯಾಕ್ಟಾಲ್ಬುಮಿನ್
(ರ) ಹಾಲಿನಲ್ಲಿರುವ ಒಂದು ಸರಳ ಪ್ರೋಟೀನ್. ಸೀರಮ್ ಆಲ್ಬುಮಿನ್ನನ್ನು ಹೋಲುತ್ತದೆ; ಹೆಚ್ಚು ಪೌಷ್ಟಿಕಾಂಶ ಇದೆ
lactalbumin

ಲ್ಯಾಕ್ಟಿಕ್ ಆಮ್ಲ
(ರ) CH3 CH (OH). COOH ನಿರ್ವರ್ಣ ಸ್ಫಟಿಕ ರೂಪಿ ಘನ. ಹುಳಿ ರುಚಿ, ಸಾಸಾಂ ೧. ೨೦೬, ದ್ರಬಿಂ ೧೮0ಸೆ. ಕುಬಿಂ ೧೨೨0ಸೆ. ಡಿ, ಎಲ್ ಮತ್ತು ಡಿಎಲ್ ಎಂಬ ಮೂರು ಘನ ಸಮಾಂಗಿಗಳುಂಟು. ಹಾಲು ಹುಳಿ ಹಿಡಿದಾಗ ಅದರಲ್ಲಿರುವ ಲಾಕ್ಟೋಸ್ ಸಕ್ಕರೆಯನ್ನು ಬ್ಯಾಕ್ಟೀರಿಯಗಳು ಎಲ್-ರೂಪಿ ಲ್ಯಾಕ್ಟಿಕ್ ಆಮ್ಲಕ್ಕೆ ಪರಿವರ್ತಿಸುತ್ತವೆ. ಇದು ಎಡಮುರಿ. ಏಕಕಾಲದಲ್ಲಿ ಬಲಮುರಿ ರೂಪವೂ ಉಂಟಾಗು ವುದರಿಂದ ಮಿಶ್ರಣಕ್ಕೆ ಡಿಎಲ್ ಲ್ಯಾಕ್ಟಿಕ್ ಆಮ್ಲ ಎಂದು ಹೆಸರು. ಇದು ದ್ಯುತಿಪಟುತ್ವಹೀನ. ಬಣ್ಣ ಹಾಕುವ ಮತ್ತು ಚರ್ಮ ಹದ ಮಾಡುವ ಕೈಗಾರಿಕೆಗಳಲ್ಲಿ ಬಳಕೆ. ಡಿ-ರೂಪಿ ಸಾರ್ಕೊಲ್ಯಾಕ್ಟಿಕ್ ಆಮ್ಲ ಸ್ನಾಯು ಊತಕದಲ್ಲುಂಟು. ಪ್ರಯಾಸಕರ ಅಂಗಸಾಧನೆ ಯಲ್ಲಿ ಸ್ನಾಯುಗಳಲ್ಲಿ ಉಂಟಾಗಿ ಸೆಡೆತ ನೋವುಂಟುಮಾಡುತ್ತದೆ
lactic acid

ಲ್ಯಾಕ್ಟಿಯಲ್
(ಜೀ) ಇದು ಸಣ್ಣಕರುಳಿನ ವಿಲಸ್‌ಗಳಲ್ಲಿ ಇರುವ ಸೂಕ್ಷ್ಮ ದುಗ್ಧನಾಳ. ಜೀರ್ಣಗೊಂಡ ಕೊಬ್ಬಿನ ಪದಾರ್ಥ ಹೀರುವಲ್ಲಿ ಸಹಾಯಕ. ಅನ್ನಕ್ಷೀರ ವಾಹಕ (ನಾಳ)
lacteal


logo