logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಲೋಮ್
(ತಂ) ಜೇಡಿ, ನೀರು, ಮರಳು ಹಾಗೂ ಕೊಚ್ಚಿದ ಹುಲ್ಲುಗಳ ಮಿಶ್ರಣ. ಇಟ್ಟಿಗೆ ಹಾಗೂ ಗಿಲಾವು ಮಾಡಲು ಬಳಕೆ. ಕಳಿ ಮಣ್ಣು. ಕಡುಮಣ್ಣು. ಕೊಳೆತ ಸಸ್ಯಪದಾರ್ಥ. ಜೇಡಿ ಮತ್ತು ಮರಳುಗಳಿಂದ ಕೂಡಿದ ಫಲವತ್ತಾದ ಮಣ್ಣು
loam

ಲೋಲಕ
(ಭೌ) ದಾರ ಅಥವಾ ತಂತಿಯ ತುದಿಯಲ್ಲಿ ಕಟ್ಟಿದ್ದು ಗುರುತ್ವಬಲದಿಂದಾಗಿ ಮಾಧ್ಯ ಸ್ಥಾನದ ಅತ್ತ ಇತ್ತ ಅನಿರ್ಬಂಧಿತವಾಗಿ ತೂಗಾಡುವ ತೂಕ ಅಥವಾ ಗುಂಡು ಇರುವ ಸಾಧನ. ಆದರ್ಶ ಲೋಲಕದಲ್ಲಿ ಆಂದೋಲನ ಕೋನ ಕಿರಿದು, ದಾರದ ರಾಶಿ ನಗಣ್ಯ. ಲೋಲಕದ ರಾಶಿ ಒಂದು ಬಿಂದುವಿನಲ್ಲಿ ಕೇಂದ್ರೀಕೃತ. ಇಂಥ ಲೋಲಕದ ಒಂದು ಪೂರ್ಣ ಆಂದೋಲನ ಕಾಲ ಗೆ ಸಮ. ಇಲ್ಲಿ l ದಾರದ ಉದ್ದ, g ಗುರುತ್ವ (ಮುಕ್ತಪತನ) ವೇಗೋತ್ಕರ್ಷ
pendulum

ಲೋಷನ್
(ವೈ) ಹುಣ್ಣನ್ನು ಮಾಯಿಸಲು, ಚರ್ಮರೋಗ ವನ್ನು ವಾಸಿಮಾಡಲು, ಮುಖದ ಬಣ್ಣ ಮೊದಲಾದವನ್ನು ಸ್ವಚ್ಛಗೊಳಿಸಲು ಬಳಸುವ ದ್ರವ ಲೇಪ. ದ್ರವೌಷಧ
lotion

ಲೋಹ
(ರ) ಧಾತುಗಳಲ್ಲಿ ಒಂದು ಬಗೆ. ಧಾತುಗಳ ಪೈಕಿ ಶೇಕಡಾ ೮೦ರಷ್ಟು ಲೋಹಗಳು. ಲೋಹಗಳು ಹಾಗೂ ಅವುಗಳ ಆಕ್ಸೈಡುಗಳು ಆಮ್ಲದೊಡನೆ ವರ್ತಿಸಿ ಲವಣಗಳನ್ನು ನೀಡುವುದು ಸಾಮಾನ್ಯ. ಘನ ಹಾಗೂ ದ್ರವರೂಪದ ಲೋಹಗಳಲ್ಲಿ (ಪಾದರಸ) ವಿಶಿಷ್ಟ ಲೋಹಬಂಧವಿರುವ ಕಾರಣ ತನ್ಯತೆ, ಕುಟ್ಯತೆ, ವಿದ್ಯುತ್ ವಾಹಕತೆ, ಉಷ್ಣವಾಹಕತೆ ಇರುತ್ತದೆ. ಹೊಳಪು ಇರುವುದಾದರೂ ಅಪವಾದಗಳುಂಟು
metal

ಲೋಹ ಸಿರ
(ಭೂವಿ) ಲೋಹದ ಅದಿರಿನ ಎಳೆಗಳಿಂದ ಕೂಡಿದ ಖನಿಜ ನಿಕ್ಷೇಪ
lode

ಲೋಹಭಸ್ಮ
(ರ) ಅದಿರೊಂದನ್ನು ಗಾಳಿಯಲ್ಲಿ ಕಾಸಿದಾಗ ರೂಪುಗೊಳ್ಳುವ ಲೋಹದ ಆಕ್ಸೈಡ್. ನೋಡಿ : ಕ್ಯಾಲ್ಕ್ಸ್
calx

ಲೋಹರಚನಾ ಶಾಸ್ತ್ರ
(ತಂ) ದ್ಯುತಿ ಹಾಗೂ ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳು, ಎಕ್ಸ್-ಕಿರಣ ವಿವರ್ತನೆ ಇತ್ಯಾದಿ ಗಳನ್ನು ಬಳಸಿಕೊಂಡು ಲೋಹಗಳ, ಮಿಶ್ರ ಲೋಹಗಳ ಸ್ಫಟಿಕೀಯ ರಚನೆಯನ್ನು ಅಧ್ಯಯನ ಮಾಡುವ ವಿಜ್ಞಾನ ಶಾಖೆ
metallography

ಲೋಹವಿಜ್ಞಾನ
(ತಂ) ಅದಿರುಗಳಿಂದ ಲೋಹಗಳ ತಯಾರಿಕೆ, ಲೋಹಗಳ ಶುದ್ಧೀಕರಣ, ಮಿಶ್ರಲೋಹಗಳ ತಯಾರಿಕೆ, ಎಂಜಿನಿಯರಿಂಗ್ ಕಾರ್ಯಗಳಲ್ಲಿ ಲೋಹಗಳ ಬಳಕೆ ಕಾರ್ಯನಿರ್ವಹಣೆ - ಇವುಗಳಿಗೆ ಸಂಬಂಧಿಸಿದ ಆನ್ವಿತ ವಿಜ್ಞಾನ ಶಾಖೆ. ಲೋಹಗಳ ಆಹರಣ (ನಿಷ್ಕರ್ಷಣ) ಹಾಗೂ ಉತ್ಪಾದನೆಗೆ ಸಂಬಂಧಿಸಿದ್ದು ಪ್ರಕ್ರಿಯಾ ಲೋಹವಿಜ್ಞಾನ. ಯಾಂತ್ರಿಕ ವರ್ತನೆಗೆ ಸಂಬಂಧಿಸಿದ್ದು ‘ಭೌತಿಕ ಲೋಹವಿಜ್ಞಾನ’
metallurgy

ಲೋಹಾಭ
(ರ) ಲೋಹಗಳಿಗೂ ಅಲೋಹಗಳಿಗೂ ಮಧ್ಯವರ್ತಿ ಲಕ್ಷಣಗಳಿರುವ ರಾಸಾಯನಿಕ ಧಾತು. ಬೋರಾನ್, ಸಿಲಿಕಾನ್, ಜರ್ಮೇನಿಯಮ್, ಆರ್ಸೆನಿಕ್ ಮತ್ತು ಟೆಲ್ಲೂರಿಯಮ್‌ಗಳು ಮಾದರಿ ಲೋಹಾಭಗಳು. ಇವು ವಿದ್ಯುತ್ ಅರೆವಾಹಕಗಳು ಮತ್ತು ಇವುಗಳ ಆಕ್ಸೈಡ್‌ಗಳು ಉಭಯ ವರ್ತಿಗಳು - ಆಮ್ಲೀಯವಾಗಿಯೂ, ಪ್ರತ್ಯಾಮ್ಲೀಯವಾಗಿಯೂ ವರ್ತಿಸುತ್ತವೆ. ಅರೆಲೋಹ
metalloid

ಲೋಹಾಯಾಸ
(ತಂ) ಅಂತಿಮ ಕರ್ಷಕ ತ್ರಾಣದ ಮಿತಿಯನ್ನು ಮೀರದಂತೆ ಲೋಹವನ್ನು ಏಕಪ್ರಕಾರವಾಗಿ ತುಯ್ತಕ್ಕೆ ಒಳಪಡಿಸಿದಾಗ ಲೋಹದ ಮೇಲಾಗುವ ಒಟ್ಟಾರೆ ಪರಿಣಾಮ ದಿಂದಾಗಿ ಲೋಹ ತೋರುವ ದುರ್ಬಲತೆ. ಸಂಕ್ಷಾರಣದಂಥ (ಕೊರೆತ) ಇತರ ಅಂಶಗಳೂ ಲೋಹದ ಆಯಾಸದ ಆಯುಷ್ಯವನ್ನು ಕಡಿಮೆ ಮಾಡುತ್ತವೆ
metal fatigue


logo