logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಲೆಪ್ಟೊಸೆಫಲಸ್
(ಪ್ರಾ) ಕಿರಿದಾದ ತಲೆಬುರುಡೆ ಉಳ್ಳ. ಚಪ್ಪಟೆಯಾದ, ತೆಳುವಾದ, ಪಾರಕವಾದ ಆಂಗ್ವಿಲಿಡೀ ಮೀನಿನ ಮರಿಹುಳು
leptocephalus

ಲೆಪ್ಪ
(ತಂ) ತೂತು ಮುಚ್ಚಲು, ಏಣುಗಳಲ್ಲಿ ಗಾಳಿ ಹೋಗದಂತೆ ಭದ್ರಪಡಿಸಲು,ಮೂಸೆಯ ಮೇಲೆ ಬಳಿಯಲು ಉಪಯೋಗಿಸುವ ಒಂದು ಬಗೆಯ ಜೇಡಿಮಣ್ಣು ಅಥವಾ ಸಿಮೆಂಟ್. ಜೇಡಿ
lute

ಲೆಮ್ಮ
(ಸ) ಹುಲ್ಲು ಹೂವಿನ ಹೊದಿಕೆಯ ತಳದಲ್ಲಿರುವ ಪುಷ್ಪಪಾತ್ರದ ಎರಡು ಎಲೆಗಳಲ್ಲೊಂದು. ಪುಷ್ಪಪಾತ್ರಪುಚ್ಛ. ಉಪಪತ್ರ. (ಗ) ಬೇರೆ ಒಂದು ಪ್ರಮೇಯವನ್ನು ಸಾಧಿಸುವಾಗ ಬಳಸುವ ಪೂರ್ವಸಾಧಿತ ಪ್ರಮೇಯ
lemma

ಲೆವೆಲ್
(ತಂ) ಒಂದು ದೂರದರ್ಶಕ ಹಾಗೂ (ನಡುವಿನಲ್ಲಿ ಗಾಳಿಗುಳ್ಳೆ ಇರುವ) ನಳಿಕೆ ಇರುವ ಸಾಮಾನ್ಯ ಮೋಜಣಿ ಉಪಕರಣ. ನೆಲದ, ಭೂಮಿಯ ಎತ್ತರದ ವ್ಯತ್ಯಾಸಗಳನ್ನು, ಏರುಪೇರುಗಳನ್ನು (ಸುಮಾರು ೩೦ ಮೀಟರ್‌ಗಳವರೆಗೆ) ಕಂಡು ಹಿಡಿಯಲು ಬಳಕೆ. (ವೈ) ಯಾವುದೇ ನಿರ್ದಿಷ್ಟ ಕಾಲದಲ್ಲಿ ಶರೀರದ ರಕ್ತದಲ್ಲಿ ಅಥವಾ ಮತ್ತಾವುದೇ ದ್ರವದಲ್ಲಿ ದತ್ತ ವಸ್ತುವಿನ (ಸಕ್ಕರೆ, ಇತ್ಯಾದಿ) ಪ್ರಮಾಣ. (ಭೌ) ಎಲೆಕ್ಟ್ರಾನ್ ಅಥವಾ ನ್ಯೂಕ್ಲಿಯರ್ ಕಣದ ಸಂಭವನೀಯ ಶಕ್ತಿಮಟ್ಟ
level

ಲೆಸಿತಿನ್
(ರ) ಪ್ರಾಣಿಗಳಲ್ಲಿ ಮೊಟ್ಟೆ ಲೋಳೆಗಳಲ್ಲಿ ಮತ್ತು ಕೆಲವು ಗಿಡಗಳಲ್ಲಿ ಸಹಜವಾಗಿ ಕಾಣಬರುವ ಮತ್ತು ರಾಸಾಯನಿಕವಾಗಿ ಮೇದಸ್ಸಿಗೆ ಸದೃಶವಾಗಿರುವ ಫಾಸ್ಫೊಲಿಪಿಡ್ ಗುಂಪಿನ ಯಾವುದೇ ಫಾಸ್ಫಾರಿಕ್ ಆಮ್ಲ ಸಂಯುಕ್ತ. CH2OR1.CHOR2.CH2OPO2OHR3 - ಇದರಲ್ಲಿ R1 ಹಾಗೂ R2 ಮೇದಾಮ್ಲಗಳು, R3 ಕೊಲೀನ್. ಇದು ಎಮಲ್ಸೀಕಾರಕ, ತೇವಕಾರಕ ಉತ್ಕರ್ಷಣವಿರೋಧಿ ಗುಣವುಳ್ಳದ್ದು
lecithin

ಲೆಸಿತೊಬ್ಲಾಸ್ಟ್
(ಪ್ರಾ) ಭಾಗಶಃ ವಿಘಟನೆಗೊಳ್ಳು ತ್ತಿರುವ ಅಂಡಗಳಲ್ಲಿ ಒಳಗೆ ಹಳದಿ ಲೋಳೆಯುಳ್ಳ ಬ್ಲಾಸ್ಟೊಮೆರ್ (ತತ್ತಿಯ ಅಭಿವರ್ಧನೆಯ ಮೊದಲ ಘಟ್ಟಗಳಲ್ಲಿ ರೂಪುಗೊಂಡ ಮಹಾಕೋಶಗಳಲ್ಲೊಂದು) ಭ್ರೂಣಪೊರೆಗೆ ವಿರುದ್ಧವಾದುದು
lecithoblast

ಲೆಸೀನಿಯ
(ಸ) ಸಸ್ಯದ ಎಲೆ ಅಥವಾ ಹೂವಿನ ಅಂಚಿನಲ್ಲಿರುವ ಅನೇಕ ಕಿರಿದಾದ ನಾಲಗೆಯಂಥ ಭಾಗಗಳ ಪೈಕಿ ಯಾವುದೇ ಒಂದು. (ಪ್ರಾ) ಕೀಟದ ಬಾಯಿಯ ಒಳಗಡೆ ಕಿರಿದಾದ ಹೊರ ಬೆಳೆತ. ಅಥವಾ ಕೆಲವು ಮೀನುಗಳ ತಲೆಯ ಮೇಲಿನ ಹೊರ ಬೆಳೆತ
lacinia

ಲೇಕ್
(ತಂ) ವರ್ಣೋದ್ಯಮದಲ್ಲಿ ಬಳಕೆಯಲ್ಲಿರುವ ಪದ. ಆಗ್ರ್ಯಾನಿಕ್ ವರ್ಣ ಪದಾರ್ಥವನ್ನು ಇನಾರ್ಗ್ಯಾನಿಕ್ ಸಂಯುಕ್ತ (ಆಕ್ಸೈಡ್, ಹೈಡ್ರಾಕ್ಸೈಡ್ ಅಥವಾ ಲವಣ)ದೊಂದಿಗೆ ಮಿಳನ ಗೊಳಿಸಿದಾಗ ಉಂಟಾಗುವ ವರ್ಣಕ. ೧. ಮೊದಲು ಅರಗಿನಿಂದ ಮಾಡುತ್ತಿದ್ದ, ಈಗ ಹಲವು ಬೆರಕೆ ವಸ್ತುಗಳಿಂದ ಮಾಡುವ, ಕಡುಗೆಂಪಿನ ರಂಗು. ೨. ವಿಲೇಯ ರಂಗು ಮತ್ತು ವರ್ಣಬಂಧಕಗಳ ಸಂಯೋಗದಿಂದ ಮೈದಳೆಯುವ ಅವಿಲೇಯ ವರ್ಣದ್ರವ್ಯ. ಪೈಂಟ್ ಮತ್ತು ಪ್ರಿಂಟಿಂಗ್ ಇಂಕ್‌ಗಳಲ್ಲಿ ಬಳಕೆ
lake

ಲೇಬಿಯಮ್
(ಜೀ) ೧. ಕ್ರಿಮಿಗಳು, ವಲ್ಕವಂತ ಪ್ರಾಣಿಗಳು ಮೊದಲಾದವುಗಳ ಬಾಯಿಯ ತಳ; ಏಕಕವಾಟದ ಚಿಪ್ಪಿನ ಒಳತುಟಿ; ಉದರಪಾದಿಗಳ ಚಿಪ್ಪಿನ ಬಾಯಿಯಲ್ಲಿ ಕಾಣುವ ಒಳತುಟಿಯಂಥ ಭಾಗ. ೨. ಭಗೋಷ್ಠ. ಯೋನಿ ತುಟಿ
labium

ಲೇಬೆಲ್ಲಮ್
(ಪ್ರಾ) ಜೇನುಹುಳುಗಳಲ್ಲಿ ‘ಗ್ಲಾಸಾ’ದ ತುದಿಯಲ್ಲಿರುವ ಚಮಚಾಕಾರದ ಹಾಲೆ. (ಸ) ೧. ಆರ್ಕಿಡ್ ಸಸ್ಯದ ಹೂವಿನ ಹಿಂದಳ. ಬಹುವೇಳೆ ಹೂವಿನ ಸುವ್ಯಕ್ತ ಭಾಗ. ೨. ಪರಾಗಸ್ಪರ್ಶ ಕೀಟಗಳಿಗೆ ಅನುಕೂಲವಾಗುವಂತೆ ರಚನೆಯಾದ ಪುಷ್ಪದ ಎಸಳು ಸುತ್ತಿನ ಕೆಳಭಾಗದ ಪೀಠ
labellum


logo