logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ರೇಡಿಯಸ್
(ಪ್ರಾ) ಚತುಷ್ಪಾದಿಯಲ್ಲಿ ಮುಂದೋಳಿನ
radius

ರೇಡಿಯಾಲಜಿ
(ವೈ) ಎಕ್ಸ್-ಕಿರಣ, ಗ್ಯಾಮಕಿರಣ, ವಿಕಿರಣಪಟು ವಸ್ತು ಮತ್ತಿತರ ಅಯಾನೀಕಾರಕ ವಿಕಿರಣಗಳನ್ನು ವೈದ್ಯಕೀಯ ಉದ್ದೇಶಗಳಿಗೆ, ವಿಶೇಷವಾಗಿ ರೋಗನಿದಾನಕ್ಕೆ ಹಾಗೂ ಕ್ಯಾನ್ಸರ್, ತತ್ಸಂಬಂಧಿತ ರೋಗಗಳ ಚಿಕಿತ್ಸೆಗೆ ಬಳಸು ವುದನ್ನು ಅಭ್ಯಸಿಸುವ ವೈದ್ಯವಿಜ್ಞಾನ ವಿಭಾಗ. ವಿಕಿರಣ ವಿಜ್ಞಾನ
radiology

ರೇಡಿಯೇಟರ್
(ತಂ) ೧. (ಮೋಟಾರು ವಾಹನದ) ಜಲಶೀತಲಿತ ಎಂಜಿನ್‌ನಲ್ಲಿ ಶಾಖವನ್ನು ವಿಸರಿಸಿ ತಂಪಾಗಿಸುವ ಸಾಧನ. ೨. ಕಾಸಿದ ಗಾಳಿ, ನೀರು ಮೊದಲಾದವುಗಳಿಂದ ಕಾವು ಪಡೆದು ಕೊಠಡಿ ಮೊದಲಾದವಕ್ಕೆ ಶಾಖ ಪ್ರಸಾರ ಮಾಡುವ ಸಣ್ಣ ಕೋಷ್ಠ. ಶಾಖಪ್ರಸಾರಕ. ೩. ವಿದ್ಯುತ್ಕಾಂತ ತರಂಗಗಳನ್ನು ಅಂತರಿಕ್ಷಕ್ಕೆ ಪ್ರೇಷಿಸುವ ಆಂಟೆನಾ ಭಾಗ
radiator

ರೇಡಿಯೊ
(ತಂ) ಉನ್ನತಾವೃತ್ತಿಯ ಪರ್ಯಾಯ ವಿದ್ಯುತ್ ಪ್ರವಾಹ ಉತ್ಪಾದಿಸುವ ವಿದ್ಯುತ್ಕಾಂತ ಅಲೆಗಳನ್ನು ಬಳಸಿಕೊಂಡು ವಿದ್ಯುತ್ ಸಂಜ್ಞಾಗಳನ್ನೂ ಶಬ್ದಗಳನ್ನೂ ಅಂತರಿಕ್ಷದ ಮೂಲಕ ಸಾಗುತಂತಿಗಳ ಸಹಾಯವಿಲ್ಲದೆ ಪ್ರೇಷಿಸುವ ಮತ್ತು ಸ್ವೀಕರಿಸುವ ವಿಧಾನಗಳಿಗೆ ನೀಡಿರುವ ಸಾಮಾನ್ಯನಾಮ. ಇದಕ್ಕಾಗಿ ಬಳಸುವ ಉಪಕರಣಕ್ಕೂ ಇದೇ ಹೆಸರಿದೆ
radio

ರೇಡಿಯೊ ಆಕರ
(ಭೌ) ರೇಡಿಯೊ-ಆವೃತ್ತಿಗಳ ವಿದ್ಯುತ್ಕಾಂತ ವಿಕಿರಣವನ್ನು ಉತ್ಸರ್ಜಿಸುವ ಯಾವುದೇ ಆಕಾಶಕಾಯ. ಇದನ್ನು ರೇಡಿಯೊ ದೂರದರ್ಶಕದ ಮೂಲಕ ವೀಕ್ಷಿಸಲಾಗುತ್ತದೆ. ಗುರು, ಸೂರ್ಯ, ಪಲ್ಸಾರ್‌ಗಳು ಮತ್ತು ಸಿಂಕ್ರೊಟ್ರಾನ್ ವಿಕಿರಣದಿಂದ ಉದ್ಭವಿಸುವ ಹಿನ್ನೆಲೆ ವಿಕಿರಣ - ಇವು ಸೌರ ಕ್ಷೀರಪಥದೊಳಗಿನ ರೇಡಿಯೊ ಆಕರಗಳು. ಸುರುಳಿ ಕ್ಷೀರಪಥಗಳು, ರೇಡಿಯೊ ಕ್ಷೀರಪಥಗಳು ಮತ್ತು ಕ್ವೇಸಾರ್‌ಗಳು - ಇವು ಸೌರಕ್ಷೀರ ಪಥದಾಚೆಗಿನ ರೇಡಿಯೊ ಆಕರಗಳು.
radio source

ರೇಡಿಯೊ ಆವೃತ್ತಿ
(ಭೌ) ಸಂಪರ್ಕ ಉದ್ದೇಶ ಗಳಿಗಾಗಿ ವಿದ್ಯುತ್ಕಾಂತ ವಿಕಿರಣವನ್ನು ಉಪಯೋಗಿಸಲು ಅನುಮಾಡಿಕೊಡುವ ಆವೃತ್ತಿ. ಇದು ಸಾಮಾನ್ಯವಾಗಿ ೩ ಕಿಲೊ ಹರ್ಟ್ಸ್‌ನಿಂದ ೩೦೦ ಗಿಗಾಹರ್ಟ್ಸ್‌ವರೆಗಿನ ವ್ಯಾಪ್ತಿಯದು. ಇದನ್ನು ಅತ್ಯಂತ ಕಡಿಮೆ ಆವೃತ್ತಿ, ಕಡಿಮೆ ಆವೃತ್ತಿ, ಮಧ್ಯಮ ಆವೃತ್ತಿ, ಉನ್ನತ ಆವೃತ್ತಿ, ಅತ್ಯುನ್ನತ ಆವೃತ್ತಿ ಮತ್ತು ತೀವ್ರ ಅತ್ಯುನ್ನತ ಆವೃತ್ತಿ (ಪರಮ ಉನ್ನತ) ಎಂದು ಮುಂತಾಗಿ ಎಂಟು ಸಮಾನ ಪಟ್ಟಿ (ಆವೃತ್ತಿ ಶ್ರೇಣಿ)ಗಳನ್ನಾಗಿ ಉಪವಿಭಾಗಿಸಲಾಗಿದೆ. ಸಂಕ್ಷಿಪ್ತ RF
radio frequency

ರೇಡಿಯೊ ಐಸೊಟೋಪ್
(ಭೌ) ವಿಕಿರಣ ಪಟುತ್ವವನ್ನು ಪ್ರದರ್ಶಿಸುವ ಸಹಜವಾಗಿ ಲಭಿಸುವ ಅಥವಾ ಕೃತಕವಾಗಿ ತಯಾರಿಸಿದ ಧಾತು ಸಮಸ್ಥಾನಿ. ಅಸ್ಥಿರವಾದುದು. ವೈದ್ಯಕೀಯ/ಕೈಗಾರಿಕಾ ಉದ್ದೇಶಗಳಿಗೆ ಆಕರವಾಗಿ ಬಳಕೆ
radio isotope

ರೇಡಿಯೊ ಕ್ಷೋಭೆ
(ತಂ) ರೇಡಿಯೊ ಆವೃತ್ತಿ ಸಹಿತವಾಗಿರುವ ವಿದ್ಯುತ್ಕಾಂತೀಯ ಗದ್ದಲ
radionoise

ರೇಡಿಯೊ ಖಗೋಳವಿಜ್ಞಾನ
(ಖ) ಆಕಾಶ ಕಾಯಗಳು ಉತ್ಸರ್ಜಿಸುವ ೧೦೦೦ದಿಂದ ೩೦,೦೦೦ ಮೈಕ್ರೊ ಮೀಟರ್ ವ್ಯಾಪ್ತಿ ಅಲೆಯುದ್ದದಲ್ಲಿ ವಿಶ್ವದ ವಿವಿಧ ಭಾಗಗಳಿಂದ ಬರುವ ರೇಡಿಯೊ ವಿಕಿರಣದ ಅಧ್ಯಯನ. ಅಮೆರಿಕದ ಎಂಜಿನಿಯರ್ ಕಾರ್ಲ್ ಜಾನ್‌ಸ್ಕಿ (೧೯೦೫-೪೦) ಸ್ಥಳೀಯ ರೇಡಿಯೊ ಗಲಭೆಗಳ ಮೂಲವನ್ನು ಶೋಧಿಸುತ್ತಿದ್ದಾಗ, ಆಕಸ್ಮಿಕವಾಗಿ ಆಕಾಶದಿಂದ ಬರುವ ರೇಡಿಯೊ ತರಂಗಗಳ ಅಸ್ತಿತ್ವ ಗುರುತಿಸಿದರು (೧೯೩೨). ಎಂದೇ ಆಕಾಶಕಾಯವೊಂದು ಕೇವಲ ಬೆಳಕಿನ ಉತ್ಸರ್ಜನಕೇಂದ್ರವಲ್ಲ, ವಿದ್ಯುತ್ಕಾಂತ ವಿಕಿರಣದ ಅವಕೆಂಪು ವಿಕಿರಣದ ಉತ್ಸರ್ಜನ ಕೇಂದ್ರವೂ ಹೌದೆಂದು ತಿಳಿದುಬಂದಿತು. ರೇಡಿಯೊ ತರಂಗಗಳನ್ನು ಮಾತ್ರ ಬೀರುವ ಆಕಾಶಕಾಯಗಳಿಗೆ ರೇಡಿಯೊ ನಕ್ಷತ್ರಗಳೆಂದು ಹೆಸರು. ಈ ಅಧ್ಯಯನದಲ್ಲಿ ಒಂಟಿ ಡಿಷ್ (ಬಟ್ಟಲು ಏರಿಯಲ್)ಗಳಿಂದ ಹಿಡಿದು ದೂರದರ್ಶಕಗಳ ವಿಸ್ತೃತ ಜಾಲ ಬಂಧಗಳವರೆಗೆ ನಾನಾ ಮಾದರಿಯ ಆಂಟೆನಾಗಳನ್ನು ಬಳಸಲಾಗುತ್ತದೆ. ವಿಕಿರಣ ಉತ್ಸರ್ಜನೆಯ ಪ್ರಧಾನ ಆಕರಗಳೆಂದರೆ - ಸೂರ್ಯ, ಗುರುಗ್ರಹ, ನಕ್ಷತ್ರಾಂತರ ಹೈಡ್ರೊಜನ್, ಉತ್ಸರ್ಜನ ನೀಹಾರಿಕೆಗಳು, ಪಲ್ಸಾರ್‌ಗಳು, ಸೋಪರ್‌ನೋವಾ ಅವಶೇಷಗಳು, ರೇಡಿಯೊ ಗೆಲಾಕ್ಸಿಗಳು, ಕ್ವೇಸಾರ್‌ಗಳು
radio astronomy

ರೇಡಿಯೊ ಗವಾಕ್ಷಿ
(ಭೌ) ವಾತಾವರಣದಲ್ಲಿ ಸುಮಾರು ೧೦ ಮೆಗಾಹರ್ಟ್ಸ್‌ನಿಂದ ೧೦೦ ಗಿಗಾಹರ್ಟ್ಸ್‌ವರೆಗೆ ವಿಸ್ತರಿಸಿರುವ ಆವೃತ್ತಿಗಳ ಪಟ್ಟಿ. ಬಾಹ್ಯಾಕಾಶದಿಂದ ಬರುವ ವಿಕಿರಣ ಈ ಪಟ್ಟಿಯ ಮೂಲಕ ಭೂಮಿಯ ವಾತಾವರಣವನ್ನು ಪ್ರವೇಶಿಸಿ ಪ್ರವಹಿಸಬಲ್ಲದು. ಅದನ್ನು ಭೂಮಿ ಮೇಲಿನ ರೇಡಿಯೊ ದೂರದರ್ಶಕಗಳ ಮೂಲಕ ಪತ್ತೆ ಹಚ್ಚಬಹುದು. ೧೦೦ ಮೆಗಾಹರ್ಟ್ಸ್‌ಗೂ ಕಡಿಮೆಯ ರೇಡಿಯೊ ಅಲೆಗಳು ಅಯಾನ್ ಗೋಲದಿಂದ ಪ್ರತಿಫಲಿತವಾಗುತ್ತವೆ; ೧೦೦ ಗಿಗಾಹರ್ಟ್ಸ್‌ಗೂ ಮೇಲಿನ ರೇಡಿಯೊ ಅಲೆಗಳು ಹೆಚ್ಚು ಹೆಚ್ಚಾಗಿ ಆಣವಿಕ ಹೀರಿಕೆಗೊಳಗಾಗುತ್ತವೆ
radio window


logo