logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ರಕ್ತ ಪ್ರವಾಹ
(ವೈ) ಪರಿಚಲನೆಯಲ್ಲಿರುವ ರಕ್ತ
blood stream

ರಕ್ತ ಬ್ಯಾಂಕ್
(ವೈ) ವ್ಯಕ್ತಿಗೆ ಪೂರಣ ಮಾಡುವ ಸಲುವಾಗಿ ರಕ್ತವನ್ನು ಸಂಗ್ರಹಿಸಿ ಸಂಸ್ಕರಿಸಿಟ್ಟಿರುವ ಶೇಖರಣ ಕೇಂದ್ರ. ಬ್ಲಡ್‌ಬ್ಯಾಂಕ್
blood bank

ರಕ್ತ ಮೂತ್ರ
(ವೈ) ನೋಡಿ: ಹೀಮಚೂರಿಯ
haematuria

ರಕ್ತ ವರ್ಗಗಳು
(ವೈ) ವ್ಯಕ್ತಿಗಳ ರಕ್ತದಲ್ಲಿಯ ಗುಣಗಳನ್ನು (ಅದರಲ್ಲೂ ವಿಶಿಷ್ಟ ಪ್ರತಿಜನಕಗಳು ಇರುವುದನ್ನು ಇಲ್ಲದಿರುವುದನ್ನು) ಆಧರಿಸಿ, ಮಾಡಿರುವ ನಾಲ್ಕು ಮುಖ್ಯ ಗುಂಪುಗಳು: A, B, AB ಮತ್ತು O. ವ್ಯಕ್ತಿಗೆ ರಕ್ತಪೂರಣ ಮಾಡುವ ಮುನ್ನ ಆತನ ರಕ್ತವರ್ಗ ಪೂರಕ ರಕ್ತವರ್ಗದ ಜೊತೆ ಹೊಂದುವುದೇ ಎಂಬುದನ್ನು - ಸಾಮಂಜಸ್ಯ ಪರೀಕ್ಷೆ - ಖಾತ್ರಿ ಮಾಡಿಕೊಳ್ಳುವುದು ಅತಿ ಮುಖ್ಯ. A ಗುಂಪಿನ ಕೆಂಪು ಕೋಶಗಳಲ್ಲಿ, A-ಪ್ರತಿಜನಕಗಳೂ, B ಗುಂಪಿನವುಗಳಲ್ಲಿ B-ಪ್ರತಿಜನಕಗಳೂ ಇರುತ್ತವೆ. O ಗುಂಪಿನವುಗಳಲ್ಲಿ ಯಾವ ಪ್ರತಿಜನಕಗಳೂ ಇರುವುದಿಲ್ಲ. ಅದೇ ರೀತಿ A ಗುಂಪಿನ ವ್ಯಕ್ತಿಗಳಲ್ಲಿ B-ವಿರುದ್ಧ ಪ್ರತಿಕಾಯಗಳೂ, B ಗುಂಪಿನವರಲ್ಲಿ A-ವಿರುದ್ಧ ಪ್ರತಿಕಾಯಗಳೂ, O ಗುಂಪಿನವರಲ್ಲಿ A-ವಿರುದ್ಧ ಹಾಗೂ B-ವಿರುದ್ಧ ಪ್ರತಿಕಾಯಗಳೂ ಇರುತ್ತವೆ. AB ಗುಂಪಿನವರಲ್ಲಿ ಈ ಯಾವ ವಿರೋಧಿ ಪ್ರತಿಕಾಯಗಳೂ ಇರುವುದಿಲ್ಲ. ಆದ್ದರಿಂದ ರಕ್ತ ಪೂರಣ ಮಾಡುವ ಮುನ್ನ ಒಂದು ವೃಂದದ ಕೆಂಪುಕೋಶಗಳಿರುವ ರಕ್ತವನ್ನು ಅವುಗಳ ವಿರುದ್ಧದ ಪ್ರತಿಕಾಯಗಳಿರುವ ವ್ಯಕ್ತಿಗೆ ನೀಡದಿರುವಂತೆ ಖಾತರಿಪಡಿಸಿಕೊಳ್ಳಬೇಕು. ಸಾಮಾನ್ಯವಾಗಿ ಹೇಳುವುದಾದರೆ, A ಹಾಗೂ B ಗುಂಪಿನವರ ರಕ್ತವನ್ನು ಅದೇ ಗುಂಪಿನ ಅಥವಾ AB ಗುಂಪಿನ ಜನರಿಗೆ ನೀಡಬಹುದು. ಆದರೆ ಈ ಗುಂಪುಗಳ ಜನರೇ ತಮ್ಮ ಗುಂಪಿನ ಅಥವಾ O ಗುಂಪಿನ ರಕ್ತವನ್ನಷ್ಟೆ ಪಡೆಯಬಲ್ಲರು. ಆದರೆ ಅವರ ರಕ್ತವನ್ನು ಅದೇ ಗುಂಪಿನವರಿಗಷ್ಟೆ ನೀಡಬಹುದು. O ಗುಂಪಿನ ಜನರ ರಕ್ತವನ್ನು ಯಾರಿಗೂ ನೀಡಬಹುದು. ಆದರೆ ಅವರೇ ಅವರ ಗುಂಪಿನವರ ರಕ್ತವನ್ನಷ್ಟೆ ಪಡೆಯಬಲ್ಲರು. ಹೀಗೆ O ಗುಂಪಿನ ರಕ್ತವಿರುವವರನ್ನು ‘ಸಾರ್ವತ್ರಿಕ ದಾನಿ’ಗಳೆಂದೂ, AB ಗುಂಪಿನ ರಕ್ತವಿರುವವರನ್ನು ‘ಸಾರ್ವತ್ರಿಕ ಗ್ರಾಹಿ’ಗಳೆಂದೂ ಹೇಳಲಾಗುತ್ತದೆ. ಇಂದಿನ ದಿನಗಳಲ್ಲಿ ಸಾರ್ವತ್ರಿಕ ದಾನಿ ಅಥವಾ ಸಾರ್ವತ್ರಿಕ ಗ್ರಾಹಿ ಎಂದು ಸೈದಾಂತಿಕವಾಗಿ ಮಾತ್ರ ಪರಿಗಣಿಸಲಾಗುತ್ತದೆ. ಪ್ರಾಯೋಗಿಕ ವಾಗಿ ಇವುಗಳಿಗೆ ಬೆಲೆಯಿಲ್ಲ. ಏಕೆಂದರೆ ರಕ್ತವರ್ಗೀಕರಣ ವಿಧಾನಗಳು ಅಸಂಖ್ಯ. ಎಬಿಒ ಹಾಗೂ ಆರ್.ಎಚ್ ವರ್ಗೀಕರಣ ಸರಿಯಿದ್ದ ಮಾತ್ರಕ್ಕೆ ಉಳಿದ ಎಲ್ಲಾ ವರ್ಗೀಕರಣ ಸರಿಯಿರಬೇಕೆಂಬ ನಿಯಮವಿಲ್ಲ. ಹಾಗಾಗಿ ದಾನಿ ಹಾಗೂ ಗ್ರಾಹಿಯ ರಕ್ತವನ್ನು ಬೆರೆಸಿ ಸೂಕ್ಷ್ಮದರ್ಶಕ ದಡಿಯಲ್ಲಿ ಅಧ್ಯಯನ ಮಾಡಲಾಗುತ್ತದೆ. ಆಗ ಎರಡೂ ರಕ್ತಕಣಗಳ ನಡುವೆ ಸಾಮಂಜಸ್ಯ ಇರಬೇಕು. ರಕ್ತಕಣಗಳ ನಡುವೆ ವಿರುದ್ಧ ಕ್ರಿಯೆ ನಡೆದು ರಕ್ತಕಣಗಳು ಉಂಡೆಗಟ್ಟಬಾರದು. ಉಂಡೆಗಟ್ಟದಿದ್ದಾಗ ಮಾತ್ರ ಆ ರಕ್ತವನ್ನು ಪೂರಣದಲ್ಲಿ ಬಳಸಲಾಗುತ್ತದೆ
blood groups

ರಕ್ತ ಸಾರ
(ವೈ) ನೋಡಿ: ವಸೆ
serum

ರಕ್ತ ಸ್ತಂಭನ
(ವೈ) ನೋಡಿ: ಹೀಮೊಸ್ಟ್ಯಾಸಿಸ್
haemostasis

ರಕ್ತ ಸ್ರಾವ
(ವೈ) ರಕ್ತನಾಳ ಒಡೆದು ರಕ್ತ ಬಹಳವಾಗಿ ಹೊರ ಸುರಿಯುವುದು
haemorrhage

ರಕ್ತಗತ
(ಪ್ರಾ) ಜಠರದಲ್ಲಿ ಪಚನವಾದ ಆಹಾರದಿಂದ ಆಹಾರ ಸಾರವನ್ನು ಅಥವಾ ಅನ್ನಕ್ಷೀರವನ್ನು ಚಿಕ್ಕ ಕರುಳಿನಲ್ಲಿರುವ ಲೋಮಗಳು ಹೀರಿ ರಕ್ತಕ್ಕೆ ಊಡುವುದು
absorption

ರಕ್ತದ ಇಳಿಯೊತ್ತಡ
(ವೈ) ರಕ್ತದ ಒತ್ತಡ ಸಾಮಾನ್ಯವಾಗಿರುವುದಕ್ಕಿಂತ (೧೨೦/೮೦ ಮಿಮೀ. ಪಾದರಸ ಕ್ಕಿಂತ) ಕಡಿಮೆ ಇರುವ ಸ್ಥಿತಿ. ಈ ಸ್ಥಿತಿ ಜೀವಕ್ಕೇ ಅಪಾಯಕಾರಿ
low blood pressure

ರಕ್ತದಲ್ಲಿ ಸಕ್ಕರೆ
(ವೈ) ರಕ್ತದಲ್ಲಿ ಕಾರ್ಬೊಹೈಡ್ರೇಟ್‌ನ, ಪ್ರಧಾನವಾಗಿ ಗ್ಲೂಕೋಸ್‌ನ ಮಟ್ಟ. ಉಪವಾಸ ಸ್ಥಿತಿಯಲ್ಲಿ (ಬರಿ ಹೊಟ್ಟೆಯಲ್ಲಿ) ಇದು ಸಾಮಾನ್ಯವಾಗಿ ೩.೨ mmol / lರಿಂದ ೫.೨ mmol / lರ ನಡುವೆ ಇರುತ್ತದೆ
blood sugar


logo