logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಯೂಸ್ಟೀಲ್
(ಸ) ನಗ್ನ ಹಾಗೂ ಆವೃತ ಬೀಜ ಸಸ್ಯಗಳ ಕಾಂಡದಲ್ಲಿ ವಿಶೇಷವಾಗಿ ಕಂಡುಬರುವ ಆಹಾರ ಮತ್ತು ನೀರು ಸಾಗುವ ನಾಳಗಳ ಕಂತೆ
eustele

ಯೂಸ್ಟೇಕಿಯನ್ ಕವಾಟ
(ಪ್ರಾ) ಸ್ತನಿಗಳಲ್ಲಿ ಉಚ್ಚ ಮಹಾಧಮನಿಯ ತೆರಪುಗಳನ್ನು ನೀಚ ಮಹಾಧಮನಿಯ ತೆರಪುಗಳಿಂದ ಪ್ರತ್ಯೇಕಿಸುವ ಅಪೂರ್ಣಾವಸ್ಥೆಯ ಕವಾಟ. ಇದು ಭ್ರೂಣದಲ್ಲಷ್ಟೇ ಕ್ರಿಯಾಶೀಲವಾಗಿದ್ದು ಜನನಾನಂತರ ನಿಷ್ಕ್ರಿಯವಾಗುವುದು
eustachian valve

ಯೂಸ್ಟೇಕಿಯನ್ ನಾಳ
(ಪ್ರಾ) ಕಶೇರುಕಗಳಲ್ಲಿ ಗಂಟಲಿನ ಮೇಲ್ಭಾಗದಿಂದ ನಡುಗಿವಿಯ ಕುಹರಕ್ಕೆ ಹೋಗುವ ನಾಳ. ಇದು ಸಾಮಾನ್ಯ ವಾಗಿ ಮುಚ್ಚಿರುತ್ತದೆ. ಆದರೆ ನುಂಗುವಾಗ ತೆರೆದು ಗಾಳಿ ನಡುಗಿವಿಗೆ ಹೋಗಲು ನೆರವಾಗು ತ್ತದೆ. ಇದರಿಂದ ಟಿಂಪಾನಮ್‌ನ (ಕಿವಿ ತಮಟೆಯ) ಎರಡು ಪಕ್ಕಗಳಲ್ಲೂ ಒತ್ತಡ ಸಮವಾಗುತ್ತದೆ. ಇಟಲಿಯ ಅಂಗರಚನಾಶಾಸ್ತ್ರಜ್ಞ ಬಾರ್ಟೊಲೊಮಿಯ ಯೂಸ್ಟೇಕಿಯ (೧೫೨೦-೭೪) ಗೌರವಾರ್ಥ ಈ ಹೆಸರು
eustachian tube

ಯೋಗಾಂತರಾನುಪಾತ
(ಗ) a:b :: c:d ಆಗಿದ್ದರೆ (a+b) : (a-b) :: (c+d):(c-d) ಅಂತೆಯೇ (a-b) : (a+b) :: (c-d) : (c+d) ಕೂಡ ಸಾಧು ಎಂಬ ನಿಯಮ
componendo dividendo

ಯೋಜಕ
(ಗ) ನೋಡಿ: ಸಂಕಲನ
augend

ಯೋಜ್ಯ
(ಗ) ನೋಡಿ: ಸಂಕಲನ
addend

ಯೋನಿ
(ಪ್ರಾ) ಸ್ತ್ರೀಯಲ್ಲಿ ಗರ್ಭಾಶಯದಿಂದ ಭಗದವರೆಗೆ ವ್ಯಾಪಿಸಿರುವ ಜನನಾಂಗದ ನಾಲೆ
vagina

ಯೋನಿತುಟಿ
(ಜೀ) ನೋಡಿ : ಲೇಬಿಯಮ್
labium

ಯೋನಿಪೊರೆ
(ವೈ) ಕನ್ಯೆಯ ಯೋನಿಯ ಬಹಿರ್ದ್ವಾರವನ್ನು ಮುಚ್ಚಿರುವ ಪೊರೆ. ಯೋನಿ ಪಟಲ
hymen


logo