logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಮಧುಮೇಹ
(ವೈ) ಕಾರ್ಬೊಹೈಡ್ರೇಟ್ ಬಳಕೆಯಲ್ಲಿನ ನ್ಯೂನತೆಯ ಪರಿಣಾಮವಾಗಿ ದೈಹಿಕ ಉಪಾಪಚಯಕ ವ್ಯವಸ್ಥೆಯಲ್ಲಿ ಆಗುವ ಏರುಪೇರು. ಮೇದೋಜೀರಕಾಂಗದಲ್ಲಿ ಇನ್ಸುಲಿನ್‌ನ ಅಸಮರ್ಪಕ ಅಥವಾ ಅಪಸಾಮಾನ್ಯ ಅಲ್ಪ- ಉತ್ಪಾದನೆಗೆ ಇದು ಸಂಬಂಧಿಸಿದೆ. ಪರಿಣಾಮವಾಗಿ ರಕ್ತದಲ್ಲೂ ಮೂತ್ರದಲ್ಲೂ ಸಕ್ಕರೆಯ ಅಂಶ ಹೆಚ್ಚಾಗುತ್ತದೆ. ತೀವ್ರದಾಹ, ಅತಿಶಯ ಮೂತ್ರಸ್ರಾವ, ನಿಶ್ಶಕ್ತಿ ಮುಂತಾದವು ಈ ರೋಗದ ಲಕ್ಷಣಗಳು. ಇನ್ಸುಲಿನ್‌ಅನ್ನು ನೇರವಾಗಿ ತೆಗೆದುಕೊಳ್ಳುವ ಮೂಲಕ ಅಥವಾ ಇನ್ಸುಲಿನ್ ಉತ್ಪಾದಕ ಮದ್ದು ಅಥವಾ ಆಹಾರ ಸೇವಿಸುವ ಮೂಲಕ ಈ ರೋಗವನ್ನು ಹದ್ದುಬಸ್ತಿನಲ್ಲಿಡುವ ಸಾಧ್ಯತೆ ಇದೆ. ಸಿಹಿ ಮೂತ್ರರೋಗ. ಸಕ್ಕರೆ ರೋಗ
diabetes mellitus

ಮಧ್ಯಚರ್ಮ
(ಪ್ರಾ) ಭ್ರೂಣದ ಪ್ರಾರಂಭಾವಸ್ಥೆಯಾದ ಗ್ಯಾಸ್ಟ್ರುಲಾದಲ್ಲಿ ಬಾಹ್ಯಚರ್ಮ ಅಂತಃಚರ್ಮಗಳ ನಡುವೆ ಇರುವ ಕೋಶಗಳ ಸ್ತರ. ಇದು ಕ್ರಮೇಣ ಸ್ನಾಯುಗಳಾಗಿ, ಪರಿಚಲನಾ ಹಾಗೂ ಲೈಂಗಿಕ ಅಂಗಗಳಾಗಿ ವಿಕಾಸಗೊಳ್ಳುತ್ತದೆ. ಕಶೇರುಕಗಳಲ್ಲಿ ವಿಸರ್ಜಕಾಂಗ ಅಸ್ಥಿಪಂಜರಗಳಾಗಿಯೂ ಬೆಳೆಯುತ್ತದೆ. ನೋಡಿ: ಮೆಸೊಬ್ಲಾಸ್ಟ್
mesoderm

ಮಧ್ಯತ್ವ
(ಗ) ಎರಡು ರಾಶಿಗಳ ನಡುವೆ ಇರುವುದು. ಉದಾ: ೩೩, ೨೨, ೧೭ ಸಂಖ್ಯೆಗಳಲ್ಲಿ ಸಾಂಖ್ಯಕ ಮೌಲ್ಯರೀತ್ಯ ೧೭ ಉಳಿದೆರಡರ ನಡುವೆ ಇದೆ
betweenness

ಮಧ್ಯದಂಡ
(ತಂ) ಎಂಜಿನ್ ಅಥವಾ ಮೋಟರಿನಿಂದ ವಿವಿಧ ಯಂತ್ರಗಳಿಗೆ ಚಲನೆಯನ್ನು ಪಟ್ಟೆಗಳ ಮೂಲಕ ವರ್ಗಾಯಿಸುವಾಗ ನೆರವಾಗುವ ಮಧ್ಯವರ್ತಿ ದಂಡ. ಇದರಲ್ಲಿಯ ಚಕ್ರಗಳ ಗಾತ್ರ ಬದಲಾಯಿಸಿ ಚಲನದರವನ್ನು ಬೇಕಾದಂತೆ ಹೆಚ್ಚಿಸಬಹುದು ಅಥವಾ ತಗ್ಗಿಸಬಹುದು
countershaft

ಮಧ್ಯದಂತೀ
(ಪ್ರಾ) ಕೀಟಗಳಲ್ಲಿ ಮಧ್ಯಮ ಗಾತ್ರದ ಹಲ್ಲಿನಂಥ ಭಾಗಗಳುಳ್ಳ. ಜೀವಿಗಳಲ್ಲಿ ಮಧ್ಯಮ ಗಾತ್ರದ ಹಲ್ಲುಗಳುಳ್ಳ
mesodont

ಮಧ್ಯಪೀನ
(ಜೀ) ಒಂದು ಪಾರ್ಶ್ವ ಉಬ್ಬಿರುವುದು
ventricose

ಮಧ್ಯಫಲಭಿತ್ತಿ
(ಸ) ಫಲಭಿತ್ತಿಯ (ಪೆರಿಕಾರ್ಪ್) ಮೂರು ಸ್ತರಗಳಲ್ಲಿ ಮಧ್ಯದ್ದು. ಬಹುವೇಳೆ ಮೆದು ತಿರುಳಿನಿಂದ ಕೂಡಿದುದು
mesocarp

ಮಧ್ಯಮ ತರಂಗ
(ಭೌ) ಷಾರ್ಟ್, ಮೀಡಿಯಮ್ ವ್ಯಾಪ್ತಿಯ ರೇಡಿಯೋ ಪ್ರಸರಣದಲ್ಲಿ ಬಳಸುವ ೧೦೦ ಮೀಟರ್ ಗಳಿಂದ ೧೦೦೦ ಮೀಟರ್‌ಗಳವರೆಗಿನ ಅಲೆಯುದ್ದದ ತರಂಗ
medium wave

ಮಧ್ಯಮಂಡಲ
(ಖ) ವಾಯುಮಂಡಲದ ಸ್ತರಸೀಮೆ (ಸ್ಟ್ರಾಟೊಪಾಸ್) ಹಾಗೂ ಮಧ್ಯಸೀಮೆಗಳ (ಮೆಸೊಪಾಸ್) (೫೦-೮೫ ಕಿಮೀ) ನಡುವಿನ ವಲಯ. ಇಲ್ಲಿ ಸಾಮಾನ್ಯವಾಗಿ ಎತ್ತರ ಹೆಚ್ಚಿದಂತೆ ಉಷ್ಣತೆ ತಗ್ಗುತ್ತದೆ. ನೋಡಿ: ವಾಯುಮಂಡಲ
mesosphere

ಮಧ್ಯರೇಖೆ
(ಗ) ತ್ರಿಭುಜದ ಯಾವುದೇ ಶೃಂಗವನ್ನು ಎದುರು ಭುಜದ ಮಧ್ಯಬಿಂದುವಿಗೆ ಜೋಡಿಸುವ ರೇಖೆ. ತ್ರಿಭುಜದ ಮೂರು ಮಧ್ಯರೇಖೆಗಳೂ ಏಕಬಿಂದುವಿನಲ್ಲಿ ಸಂಧಿಸುತ್ತವೆ. (ಏಕಬಿಂದುಸ್ಥ)
median


logo