logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಮಣಿತ
(ಸ) (ಗಿಡವೊಂದರ) ಬಾಗುವ ಕ್ರಿಯೆ, ವಿಶೇಷವಾಗಿ ಗೆಣ್ಣುಗಳಲ್ಲಿ, ಫ್ಲೆಕ್ಷನ್
flexion

ಮಣಿವ ಬಿಂದು
(ತಂ) ಪೀಡನೆಯಲ್ಲಿ ಏರಿಕೆ ಇಲ್ಲದಿದ್ದರೂ ವಸ್ತುವಿನ ನಿರೂಪಣೆಯಲ್ಲಿ ಏರಿಕೆ ಉಂಟಾಗುವ ಬಿಂದು ಮತ್ತು ಇದಕ್ಕೆ ಸಂವಾದಿಯಾದ ಕನಿಷ್ಠ ಪೀಡನೆ
yield point

ಮಣ್ಣಿನ ಸವಕಳಿ
(ಪವಿ) ಮಣ್ಣಿನ ಕಣಗಳು ಸಡಿಲ ಗೊಂಡು ಮೂಲ ಸ್ಥಳದಿಂದ ಇನ್ನೊಂದೆಡೆಗೆ ವರ್ಗಾವಣೆ ಯಾಗುವ ಯಾವುದೇ ಕ್ರಿಯೆ. ಇದು ನೈಸರ್ಗಿಕ. ಬಿರುಗಾಳಿ, ಪ್ರವಾಹಗಳಿಂದ ತೀವ್ರ ಸವಕಳಿ ಉಂಟಾಗಬಹುದು. ಮಾನವ ಚಟುವಟಿಕೆಗಳಿಂದಲೂ ತೀವ್ರ ಸವಕಳಿ ಉಂಟಾಗುತ್ತದೆ
soil erosion

ಮಣ್ಣು
(ಭೂವಿ) ಸಸ್ಯಗಳು ಬೆಳೆಯುವ ಮತ್ತು ಶಿಥಿಲ ಶಿಲೆಗಳೂ ಜೈವಿಕ ಉಳಿಕೆಗಳೂ ಸೇರಿರುವ ಭೂಮಿಯ ಮೇಲ್ಪದರ. ಮಣ್ಣಿನ ಅಜೈವಿಕ ಭಾಗವು ಪ್ರಧಾನವಾಗಿ ನಾನಾ ಲೋಹಗಳ - ಅಲ್ಯೂಮಿನಿಯಮ್, ಕಬ್ಬಿಣ, ಕ್ಯಾಲ್ಸಿಯಮ್, ಮೆಗ್ನೀಸಿಯಮ್ ಇತ್ಯಾದಿಗಳ - ಸಿಲಿಕೇಟುಗಳಿಂದಾಗಿರುವುದು. ಜೈವಿಕ ಭಾಗ ವಾದರೋ ಕೊಳೆತ ಸಸ್ಯಗಳ ಅಂಟಾದ ಕಪ್ಪು ಗೊಬ್ಬರದಿಂದಾದುದು
soil

ಮತಿಮಾಂದ್ಯತೆ
(ಮ) ಜನ್ಮತಃ ಬಂದ ದೋಷದ ಇಲ್ಲವೇ ತರುವಾಯದ ಗಾಸಿ ಅಥವಾ ಕಾಯಿಲೆಯ ಕಾರಣವಾಗಿ ಮನಸ್ಸಿನ ಸಹಜಾಭಿವರ್ಧನೆ ಕುಂಠಿತವಾಗಿರುವುದು. ಮಾನಸಿಕ ನ್ಯೂನತೆ. ಮಂಕುತನ, ಹೆಡ್ಡತನ. ನೋಡಿ: ಮನೋವೈಕಲ್ಯ
amentia

ಮತಿವಿಕಲ್ಪಿ
(ವೈ) ನಿರ್ಲಕ್ಷ್ಯ ಮನೋಭಾವದಿಂದ ಅಪರಾಧಪ್ರeಯೂ ಇಲ್ಲದೆ ಪದೇ ಪದೇ ಸಮಾಜವಿರೋಧಿ ನಡವಳಿಕೆಗಳಲ್ಲಿ ತೊಡಗುವ ವಿಕೃತಿಗೆ ವೈದ್ಯಕೀಯ ಕಾನೂನಿನಲ್ಲಿ ಬಳಸುವ ಪದ. ಬುದ್ಧಿಕೆಟ್ಟವ
psychopath

ಮತ್ತು ಬರಿಸುವುದು
(ವೈ) ಮತ್ತು ಬರುವಂತೆ ಔಷಧಿ ನೀಡಿಕೆ
doping

ಮತ್ಸ್ಯ ವಿಜ್ಞಾನ
(ಪ್ರಾ) ಮೀನುಗಳನ್ನು ಕುರಿತು ಅಧ್ಯಯನ ಮಾಡುವ ಕಶೇರುಕ ಪ್ರಾಣಿ ವೃತ್ತಾಂತ ವಿಭಾಗ
ichthyology

ಮತ್ಸ್ಯಕೃಷಿ
(ಜೀ) ಆಹಾರವಾಗಿ ಉಪಯೋಗಿಸಲು ಕೃತಕವಾಗಿ ಮೀನನ್ನು ಬೆಳೆಸುವುದು
pisciculture

ಮತ್ಸ್ಯಾಗಾರ
(ಜೀ) ಜಲಸಸ್ಯ ಗಳನ್ನೂ ಜಲಚರಗಳನ್ನೂ ಪ್ರದರ್ಶಿಸಲು ರಚಿಸಿರುವ ಕೊಳ ಅಥವಾ ತೊಟ್ಟಿ. ಮೀನು ತೊಟ್ಟಿ. ಇವನ್ನು ಪ್ರದರ್ಶನಕ್ಕಾಗಿ ಇಟ್ಟಿರುವ ಸ್ಥಳ. ಮತ್ಸ್ಯ ಸಂಪುಟ. ಜಲಜೀವಿ ಸಂಗ್ರಹಾಲಯ
aquarium


logo