logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಮಾಧ್ಯಕ
(ಸಂವಿ) ಗಾತ್ರಾನುಸಾರ ಬಾಬುಗಳನ್ನು ಅಳವಡಿಸಿ ದಾಗ ನಡುಬಾಬಿನ ಅಳತೆ. ನಡುಬಾಬು ಇಲ್ಲದಾಗ ನಡುವಿನ ಎರಡು ಬಾಬುಗಳ ಸರಾಸರಿ. ಐದು ವಿದ್ಯಾರ್ಥಿಗಳು ೧೫, ೭೫, ೮೦, ೯೫ ಮತ್ತು ೧೦೦ ಅಂಕಗಳನ್ನು ಗಳಿಸಿದರೆ ಇವುಗಳ ಮಾಧ್ಯಕ ೮೦
median

ಮಾಧ್ಯಮ
(ಜೀ) ಜೀವಿ ಅಥವಾ ಅದರ ಒಂದು ಭಾಗ ನೈಸರ್ಗಿಕವಾಗಿ ಅಸ್ತಿತ್ವದಲ್ಲಿರುವ ಪರಿಸರ ಅಥವಾ ಪ್ರಯೋಗಾರ್ಥ ಅದನ್ನು ಇದರಲ್ಲಿ ಇರಿಸಲಾಗಿರುವ ಪರಿಸರ. ಉದಾ: ಜಲೀಯ ಮಾಧ್ಯಮ. (ಭೌ) ಬಲಗಳು ಅಥವಾ ಚಲನೆಗಳು, ಉದಾ: ತರಂಗ ಗಳನ್ನು ಸಾಗಿಸುವ ನಡುವರ್ತಿ. (ರ) ಯಾವುದೇ ಉದ್ದೇಶ ಸಾಧನೆಗೆ ಅಪೇಕ್ಷಿತ ಭೌತಿಕ ಗುಣಗಳನ್ನು ಪಡೆಯಲೋಸುಗ ಮತ್ತೊಂದು ವಸ್ತುವನ್ನು ಮಿಶ್ರ ಮಾಡಿದ ಮೂಲವಸ್ತು; ಆಧಾರ ವಸ್ತು. (ತಂ) ವರ್ಣದ್ರವ್ಯಗಳನ್ನು ಉಪಯೋಗಿಸಲು ಅನುಕೂಲ ವಾಗುವಂತೆ ದ್ರವಗಳನ್ನಾಗಿ ಮಾಡಲು ಬಳಸುವ ವಾಹಕ ದ್ರವ. ಉದಾ: ಎಣ್ಣೆ, ನೀರು
medium

ಮಾನಕ
(ಭೂ) ಭೂಪಟ ಅಥವಾ ನಕ್ಷೆಗಳಲ್ಲಿ ನೈಜ ದೂರಗಳನ್ನು ವ್ಯಕ್ತಪಡಿಸುವ ಸೂಚಿ. ಉದಾ : ೧:೫೦,೦೦೦
scale

ಮಾನಕ
(ಭೂವಿ) ಘಟಕ ಪದಾರ್ಥಗಳ ಅಣು ರಚನೆಗಳನ್ನು ಅಭ್ಯಸಿಸಿ ನಿರ್ಧರಿಸಿದ ಅಗ್ನಿಶಿಲಾರಚನೆ. ವಿವಿಧ ಪದಾರ್ಥಗಳ ತೂಕಗಳನ್ನು ಪರಿಗಣಿಸಿ ಪಡೆದಂಥದಲ್ಲ
norm

ಮಾನಜೈಟ್
(ಭೂವಿ) ಸಿರಿಯಮ್ ಗುಂಪಿಗೆ ಸೇರಿದ ವಿರಳ ಧಾತುಗಳ ಫಾಸ್ಫೇಟ್ ಖನಿಜ. ಏಕನತ ಪದ್ಧತಿಯಲ್ಲಿ ಸ್ಫಟಿಕೀಕರಣ. ಕಾಠಿಣ್ಯಾಂಕ ೫-೫.೫. ಪ್ರತೀಕ CePO4. ಸಾಸಾಂ ೪.೯-೫.೩. ಹಳದಿ ಅಥವಾ ಕಂದು ಬಣ್ಣ. ಪ್ರಧಾನವಾಗಿ ಸಿರಿಯಮ್ ನಿಂದ ಕೂಡಿದ್ದು ಸ್ವಲ್ಪ ಥೋರಿಯಮ್ ಕೂಡ ಇರುತ್ತದೆ. ಮರಳು ರೂಪದಲ್ಲಿ ಇತರ ಖನಿಜಗಳೊಂದಿಗೆ ಮಿಶ್ರಿತವಾಗಿ ಸಮುದ್ರ ದಂಡೆಗಳಲ್ಲಿ ಲಭ್ಯ. ಖನಿಜವು ಹೀಲಿಯಮ್ ಅನಿಲವನ್ನು ಹೀರಿ ಕೊಂಡಿರುವುದುಂಟು. ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಒರಿಸ್ಸಾ ಕರಾವಳಿಗಳಲ್ಲಿ ಹೇರಳ. ಇದು ಥೋರಿಯಮ್ ಧಾತುವಿನ ಪ್ರಮುಖ ಆಕರ. ಮಾನಜೈಟ್ ಎಂಬ ಹೆಸರು ಮಾನೊಜೀನ್ (ಏಕಾಕಿ) ಎಂಬ ಗ್ರೀಕ್ ಪದದಿಂದ ಬಂದದ್ದು. ಕ್ರಿಪ್ಟೊಲೈಟ್. ನೋಡಿ : ಚೇರಲೈಟ್
monazite

ಮಾನವ ಪ್ರಸರಣ ವಿಜ್ಞಾನ
(ಭೂ) ಭೂಮಿಯಲ್ಲಿ ಮಾನವ ಪ್ರಸರಣೆ ಆದ, ಮಾನವ ಜಾತಿಗಳು ವ್ಯತ್ಯಾಸ ಹೊಂದಿದ, ಬಗೆಗೆ ವಿವರಣೆ ನೀಡುವ ವಿಜ್ಞಾನ
anthropography

ಮಾನವ ಭಯ
(ಮ) ಮನುಷ್ಯರ ಬಗ್ಗೆ ಹೆದರಿಕೆ
anthrophobia

ಮಾನವ ಮೂಲಶೋಧ
(ಮ) ಮಾನವನ ಮೂಲದ ಬಗೆಗೆ ಚಿಂತನೆ, ವಿಮರ್ಶೆ. ಮಾನವನ ಹುಟ್ಟನ್ನು ಅಥವಾ ಉಗಮವನ್ನು ಕುರಿತ ಅಧ್ಯಯನ
anthropogeny

ಮಾನವಕೇಂದ್ರೀಯ
(ಮ) ಸೃಷ್ಟಿಯಲ್ಲಿ ಮಾನವನೇ ಕೇಂದ್ರ ಎಂಬ ಭಾವನೆ
anthropocentric

ಮಾನವತ್ವಾರೋಪಣೆ
(ಪ್ರಾ) ವಸ್ತು, ಪ್ರಾಣಿ ಮೊದಲಾದವುಗಳಿಗೆ ಮನುಷ್ಯನ ಗುಣಗಳನ್ನು ಆರೋಪಿಸಿ ಅವುಗಳಲ್ಲಿ ಮಾನವರೂಪ ಅಥವಾ ಗುಣಗಳನ್ನು ಕಾಣುವ ಪ್ರವೃತ್ತಿ
anthropomorphism


logo