logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಮರುಭೂಮೀಕರಣ
(ಭೂ) ಹವಾಗುಣದ ಸಹಜ ಪರಿವರ್ತನೆಗಳ ಫಲವಾಗಿ ಅಥವಾ ಅರೆಶುಷ್ಕ ವಲಯದ ಅವ್ಯವಸ್ಥಿತ ನಿರ್ವಹಣೆಯ ಫಲವಾಗಿ ಶುಷ್ಕ ಬಂಜರು ಮರುಭೂಮಿ - ಸದೃಶ ಪರಿಸ್ಥಿತಿಗಳ ನಿರ್ಮಾಣ
desertification

ಮರುಸಂಯೋಗ
(ಭೌ) ಆವೇಶಗಳ ಸಂಯೋಜನೆಯಿಂದ ಅಥವಾ ಎಲೆಕ್ಟ್ರಾನ್‌ಗಳ ವರ್ಗಾವಣೆಯಿಂದ ಅನಿಲದಲ್ಲಿಯ ಅಯಾನ್‌ಗಳ ತಟಸ್ಥೀಕರಣ. (ಜೀ) ಯುಗ್ಮಕಗಳು ಅಥವಾ ಪುನರುತ್ಪಾದಕ ಕೋಶಗಳು ರೂಪುಗೊಂಡಾಗ ಜೀನ್‌ಗಳಲ್ಲಾಗುವ ಪುನರ್‌ವ್ಯವಸ್ಥೆ. ಪುನಃಸಂಯೋಗ
recombination

ಮರುಹೀರಿಕೆ
(ಭೂವಿ) ಶಿಲಾಪಾಕದ ಉಷ್ಣತೆ, ಒತ್ತಡ ಅಥವಾ ಸಂಯೋಜನೆಯಲ್ಲಿಯ ಬದಲಾವಣೆಗಳ ಪರಿಣಾಮವಾಗಿ ಅದರ ಖನಿಜ ಅಥವಾ ಶಿಲಾಚೂರುಗಳು ಮತ್ತೆ ಭಾಗಶಃ ಅಥವಾ ಪೂರ್ಣ ದ್ರವರೂಪ ತಾಳುವುದು. ಪುನರವಶೋಷಣ. (ಜೀ) ದೇಹದೊಳಗೆ ಊತಕಗಳು ಹೀರಿ ಹೋಗುವುದು, ಒಳಗೇ ಕರಗಿ ಹೋಗುವುದು
resorption

ಮರ್ಕ್ಯೂರಿಕ್ ಕ್ಲೋರೈಡ್
(ರ) HgCl2 ಕರೋಸಿವ್ ಸಬ್ಲಿಮೇಟ್. ರಸಕರ್ಪೂರ. ಉತ್ಪತನ ಹೊಂದುವ ವಿಷ ಪದಾರ್ಥವಾದ್ದರಿಂದ ಹೀಗೆ ಕರೆಯಲಾಗಿದೆ. ಬಿಳಿ ಹರಳುರೂಪಿ ವಿಲೇಯಘನ ಪೂತಿನಾಶಕವಾಗಿ ಬಳಕೆ
mercuric chloride

ಮರ್ಕ್ಯೂರಿಕ್ ಫಲ್ಮಿನೇಟ್
(ರ) ಮರ್ಕ್ಯೂರಿಕ್ ಐಸೊಸಯನೇಟ್. Hg(ONC)2. ಬಿಳಿ ಹರಳು ರೂಪಿ ಘನ. ಘರ್ಷಣೆಯಾದಾಗ ಸಿಡಿಯುವ ಗುಣ. ಸ್ಫೋಟನ ಉತ್ತೇಜಕ. ಆದ್ದರಿಂದ ವಿಸ್ಫೋಟಕವಾಗಿ ಬಳಕೆ
mercuric fulminate

ಮರ್ಕ್ಯೂರಿಕ್ ಸಲ್ಫೈಡ್
(ರ) Hgs ಸಿನಬಾರ್ ಅದಿರು ರೂಪದಲ್ಲಿ ಲಭ್ಯ. ಅವಿಲೇಯ ಕೆಂಪು ಪುಡಿ. ದ್ರಬಿಂ. ೫೮೩.೩0 ಸೆ. ವರ್ಣದ್ರವ್ಯವಾಗಿ ಉಪಯುಕ್ತ
mercuric sulphide

ಮರ್ತ್ಯತೆ
(ವೈ) ಯುದ್ಧದಿಂದ ಅಥವಾ ಜಾಡ್ಯದಿಂದ ಆದ ಭಾರಿ ಪ್ರಮಾಣದ ಸಾವು. ಪ್ರಾಣಹಾನಿ, ಸಾವಿನ ದರ
mortality

ಮರ್ಮರ
(ವೈ) ಎದೆಗೂಡಿನ ಮೇಲೆ ಸ್ಟೆತೊಸ್ಕೋಪ್ ಇಟ್ಟು ಹೃದಯದ ಮಿಡಿತವನ್ನು ಆಲಿಸಿದಾಗ ಮಿಡಿತದಲ್ಲಿ ಕೇಳಿಬರುವ ಲಯ ತಪ್ಪಿದ ಶಬ್ದ. ಸಾಮಾನ್ಯವಾಗಿ ಇದು ಹೃದಯ ಕವಾಟಗಳ ರೋಗವನ್ನು ಸೂಚಿಸುತ್ತದೆ. ರಕ್ತನಾಳಗಳಲ್ಲೂ ಇದೇ ರೀತಿಯ ಶಬ್ದ ಕೇಳಿ ಬರುವುದುಂಟು
murmur

ಮರ್ಸರೈಸೇಷನ್
(ತಂ) ಸಜಲ ಸೋಡಿಯಮ್ ಹೈಡ್ರಾಕ್ಸೈಡ್‌ಗಳಂಥ (ಕಾಸ್ಟಿಕ್ ಸೋಡ) ರಾಸಾಯನಿಕ ದ್ರವ್ಯಗಳನ್ನು ಬಳಸಿ ಜಗ್ಗಿ ಹಿಡಿದ ಹತ್ತಿ ಅಥವಾ ನೂಲು ಬಟ್ಟೆಗಳಿಗೆ ಹೊಳಪು ನೀಡಲೂ ಬಣ್ಣ ಗಟ್ಟಿಯಾಗಿ ನಿಲ್ಲುವಂತೆ ಮಾಡಲೂ ಜಾನ್ ಮರ್ಸರ್ ೧೮೪೪ರಲ್ಲಿ ಮೊದಲು ಬಳಕೆಗೆ ತಂದ ವಿಧಾನ
mercerization

ಮಲಕಾರಕ ವಸ್ತು
(ವೈ) ಜಠರದಲ್ಲಿ ಜೀರ್ಣವಾಗದೆ ಉಳಿದ ಸೆಲ್ಯುಲೋಸ್ ಅಂಶ. ಉದಾ: ಧಾನ್ಯದ ತವುಡು, ಕಾಯಿಪಲ್ಯಗಳ ನಾರು, ಸೊಪ್ಪು. ಇವು ಕರುಳಿನ ಚಲನೆಗಳಿಗೆ ಜೀರ್ಣಕ್ರಿಯೆಗೆ ಉತ್ತೇಜನ ನೀಡುತ್ತವೆ
roughage


logo