logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಮರವಜ್ರ
(ಸಾ) ಚರ್ಮ, ಮೂಳೆ, ರಾಳ ಇತ್ಯಾದಿಗಳನ್ನು ನೀರಿನೊಡನೆ ಕುದಿಸಿ ತಯಾರಿಸಿದ, ಗಡುಸಾಗಿಯೂ ಭಿದುರ ವಾಗಿಯೂ ಇರುವ, ಬಿಸಿಯಲ್ಲಿ ಅಂಟಾಗಿ ಉಪಯೋಗಿಸುವ ಕಂದು ಬಣ್ಣದ ಜೆಲಟಿನ್. ಗೋಂದು. ಸರಿ
glue

ಮರಳ ಕಣ
(ಭೂವಿ) ಮರಳು ಶಿಲೆಯ ಒಂದು ವಿಧ. ಸಾಮಾನ್ಯ ಮರಳಿನಲ್ಲಿ ಕಣಗಳು ಗುಂಡಗಿದ್ದರೆ, ಈ ವಿಧದ ಮರಳಿನಲ್ಲಿ ಅವು ಚೂಪು ತುದಿಯವು
grit

ಮರಳು
(ಭೂವಿ) ಖನಿಜ ಅಥವಾ ಶಿಲೆಗಳ ಅಸಂಘಟಿತ ಸಣ್ಣಕಣಗಳು (ವ್ಯಾಸ ೦.೦೬ರಿಂದ ೨ ಮಿಮೀವರೆಗೆ). ಸಾಮಾನ್ಯ ವಾಗಿ ಬೆಣಚನ್ನೇ ಒಳಗೊಂಡಿರುವುದು. ನದಿ ಮತ್ತು ಸಮುದ್ರ ದಂಡೆಗಳಲ್ಲಿ ಕಾಣಬರುತ್ತದೆ. ಉಸುಬು. ಸಿಕತ
sand

ಮರಳುಗಲ್ಲು
(ಭೂವಿ) ಮುಖ್ಯವಾಗಿ ೦.೦೬ರಿಂದ ೨ ಮಿಮೀ ವ್ಯಾಸದ ಬೆಣಚು ಕಲ್ಲಿನ ಕಣಗಳಿರುವ ದಟ್ಟ, ಬಂಧಿತ ಜಲಜ ಶಿಲೆ. ಇದರಲ್ಲಿ ನಾನಾ ಬಗೆಯ ‘ಭಾರ ಖನಿಜ’ ಕಣಗಳೂ ಇರುವುವು. ಬಂಧಿತ ಪದಾರ್ಥದ ಲಕ್ಷಣಕ್ಕೆ ಅನುಗುಣವಾಗಿ ಮರಳುಗಲ್ಲನ್ನು ಸುಣ್ಣಯುಕ್ತ, ಕಬ್ಬಿಣಯುಕ್ತ ಮತ್ತು ಸಿಲಿಕಯುಕ್ತ ಎಂದು ಗುರ್ತಿಸಬಹುದು. ಸಿಕತ ಶಿಲೆ
sandstone

ಮರಳುಪೂರಿತ ಶಿಲೆ
(ಭೂವಿ) ವಿವಿಧ ಗಾತ್ರಗಳ ಹಾಗೂ ಬಗೆಗಳ ಮರಳು ಕಣಗಳೂ ಮರಳು ಕಲ್ಲುಗಳೂ ಘಟಕಗಳಾಗಿರುವ ಅವಸಾದನ ಶಿಲೆ
arenaceous rock

ಮರಾಸ್ಮಸ್
(ವೈ) ಆಹಾರದಲ್ಲಿ ದೀರ್ಘಕಾಲ ಪ್ರೋಟೀನ್ ಹಾಗೂ ಕ್ಯಾಲೊರಿಗಳ ಕೊರತೆಯಿಂದಾಗಿ ವಿಶೇಷವಾಗಿ ಶಿಶುಗಳಲ್ಲಿ ಕಂಡುಬರುವ ಮೈಸವೆತ ಅಥವಾ ದೇಹಕ್ಷಯ
marasmus

ಮರೀಚಿಕೆ
(ಭೌ) ನೆಲದೊಂದಿಗೆ ಸಂಪರ್ಕದಲ್ಲಿರುವ ಬಿಸಿ ಗಾಳಿಯ ಆಳವಿಲ್ಲದ ಸ್ತರಗಳ ಮೇಲ್ಮೈಯಲ್ಲಿ ಬೆಳಕಿನ ಸಂಪೂರ್ಣ ಪ್ರತಿಫಲನದಿಂದಾಗಿ ಉಂಟಾಗುವ ವಿದ್ಯಮಾನ. ಇದರಿಂದಾಗಿ ನೆಲದ ಮೇಲೆ ನೀರಿನ ಹರವಿನ ಭ್ರಾಮಕ ಚಿತ್ರ ಮೂಡಿ ಹೆಚ್ಚು ದೂರದ ವಸ್ತುಗಳು ಇದರಲ್ಲಿ ತಲೆಕೆಳಕಾದ ಪ್ರತಿಬಿಂಬ ಮೂಡಿಸಿ ರುವಂತೆ ಕಾಣಬರುತ್ತದೆ. ನೆಲದ ಸಮೀಪದಲ್ಲಿ ಗಾಳಿಯ ದಟ್ಟವಾದ ಶೀತಲ ಸ್ತರವಿರುವ ಧ್ರುವ ಪ್ರದೇಶಗಳಲ್ಲಿ ಭಿನ್ನ ಮಾದರಿಯ ಮರೀಚಿಕೆಗಳು ಕಂಡುಬರುತ್ತವೆ. ಇಲ್ಲಿ ವಸ್ತುವಿನಿಂದ ಬರುವ ಬೆಳಕು ವೀಕ್ಷಕನತ್ತ ಕೆಳಕ್ಕೆ ಬಾಗುವುದರಿಂದ ವಸ್ತುವು ಗಾಳಿಯಲ್ಲಿ ತೇಲುತ್ತಿರುವಂತೆ ಕಾಣಿಸುತ್ತದೆ. ಮೃಗಜಲ. ಬಿಸಿಲ್ಗುದುರೆ
mirage

ಮರುನೆಡು
(ವೈ) ಅಪಘಾತದಲ್ಲಿ ಹೊಡೆತ ಬಿದ್ದು ಹಲ್ಲು ಉದುರಿದರೆ ಅದನ್ನು ಶುದ್ಧ ನೀರಿನಲ್ಲಿ ತೊಳೆದು ಒಂದು ಗಂಟೆಯೊಳಗಾಗಿ ಯಥಾಸ್ಥಳಕ್ಕೆ ಸೇರಿಸುವ ಕ್ರಿಯೆ. (ಸ) ಸಸಿಯನ್ನು ಬುಡಸಮೇತ ಕಿತ್ತು ಬೇರೊಂದು ಕಡೆ ನೆಡುವುದು. ನಾಟಿ
replantation

ಮರುಪೂರಣ
(ಭೂವಿ) ಮಳೆ ನೀರು ನೆಲದೊಳಗೆ ಜಿನುಗಿ ಅಂತರ್ಜಲ ಮಟ್ಟವನ್ನು ಕೂಡಿಕೊಳ್ಳುವುದು. ಕೃತಕ ವಾಗಿಯೂ, ಉದಾ : ಗುಂಡಿ, ಹಳ್ಳ, ಕೊಳವೆ ಬಾವಿ, ಇವುಗಳ ಮೂಲಕ ನೀರನ್ನು ಶೇಖರಿಸಿ ಅದು ಭೂಮಿಯೊಳಕ್ಕೆ ಇಂಗುವಂತೆ ಮಾಡಿ ಮರುಪೂರಣ ಮಾಡಬಹುದು
recharge

ಮರುಭೂಮಿ
(ಭೂ) ಬಲುಕಡಿಮೆ ಮಳೆ, ಉಷ್ಣತೆಯಲ್ಲಿ ತೀವ್ರ ಏರಿಳಿತಗಳು ಮತ್ತು ಪ್ರಬಲ ಮಾರುತಗಳು ಇವೆಲ್ಲ ಸೇರಿ ಮೈದಳೆದಿರುವ ವಿಸ್ತಾರವಾದ ಬಂಜರು ಭೂಮಿ. ಉದಾ: ರಾಜಸ್ಥಾನದಲ್ಲಿರುವ ಥಾರ್ ಮರುಭೂಮಿ
desert


logo