logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಬಲಗಳ ಸಂಯೋಜನೆ
(ಭೌ) ಇತರ ಹಲವಾರು ಬಲಗಳ ಸಮಗ್ರ ಪರಿಣಾಮ ಬೀರಬಲ್ಲ ಒಂಟಿ ಬಲವನ್ನು ಶೋಧಿಸುವ ಪ್ರಕ್ರಿಯೆ. ನೋಡಿ: ಬಲಗಳ ಸಮಾಂತರ ಚತುರ್ಭುಜ
composition of forces

ಬಲದ ಮಹತ್ತ್ವ
(ಭೌ) ಯಾವುದೇ ಅಕ್ಷವನ್ನು ಕುರಿತು ಬಲ ಉತ್ಪಾದಿಸುವ ಆವರ್ತಕ ಪರಿಣಾಮದ ಅಳತೆ. ಇದರ ಅಳತೆ F ´ l. ಇಲ್ಲಿ F ಬಲ, l ಅಕ್ಷದಿಂದ ಬಲದ ವರ್ತನರೇಖೆಯ ಲಂಬದೂರ
moment of a force

ಬಲಮುರಿ
(ಜೀ) ಬಲಕ್ಕೆ ವಾಲಿರುವ. ದಕ್ಷಿಣಾವರ್ತ. ಪ್ರದಕ್ಷಿಣ ವಾಗಿರುವ. ಹೋಲಿಸಿ: ಎಡಮುರಿ. ನೋಡಿ: ದಕ್ಷಿಣಾವರ್ತಕ
dextral

ಬಲರೇಖೆ
(ಭೌ) ವಿದ್ಯುತ್ ಕಾಂತ ಇಲ್ಲವೇ ಗುರುತ್ವದಂಥ ಯಾವುದೇ ಕ್ಷೇತ್ರದಲ್ಲಿಯ ಒಂದು ಕಾಲ್ಪನಿಕ ರೇಖೆ. ಈ ರೇಖೆಯ ಯಾವುದೇ ಬಿಂದುವಿನಲ್ಲಿ ಅದಕ್ಕೆಳೆದ ಸ್ಪರ್ಶಕ ಆ ಬಿಂದುವಿನಲ್ಲಿ ಆ ಕ್ಷೇತ್ರದ ದಿಶೆಯನ್ನು ನೀಡುತ್ತದೆ
line of force

ಬಲವಿಜ್ಞಾನ
(ಭೌ) ವಸ್ತುವಿಗೆ ಸ್ಥಾಯೀಸ್ಥಿತಿ ಇಲ್ಲವೇ ಚಲನಸ್ಥಿತಿ ಕೊಡುವ ಅಥವಾ ಅದರ ಚಲನೆಯಲ್ಲಿ ವ್ಯತ್ಯಾಸ ಉಂಟುಮಾಡುವ ಬಲಗಳ ವರ್ತನೆಯನ್ನು ಅಭ್ಯಸಿಸುವ ಭೌತ ವಿಜ್ಞಾನ ವಿಭಾಗ
dynamics

ಬಲಾಟ
(ಸ) ದಕ್ಷಿಣ ಅಮೆರಿಕದಲ್ಲಿಯ ಬುಲೆಟ್ ಮರದಿಂದ ಒಸರುವ ಸಸ್ಯಕ್ಷೀರ. ರಬ್ಬರ್‌ಸದೃಶ ಪದಾರ್ಥ
balata

ಬಲಿ
(ಪ್ರಾ) ಹಿಂಸ್ರ ಪ್ರಾಣಿಗೆ ಆಹಾರವಾಗುವ ಪ್ರಾಣಿ. ಎರೆ
prey

ಬಲೀನ್
(ಪ್ರಾ) ಕೆಲವು ತಿಮಿಂಗಿಲಗಳಲ್ಲಿ ಅಂಗುಳದ ಲೋಳೆಪೊರೆಯಿಂದ ಹೊರಚಾಚಿರುವ ಕೊಂಬಿನಂಥ ಪದಾರ್ಥ. ಜರಡಿಯಂತೆ ವರ್ತಿಸುತ್ತದೆ. ತಿಮಿಮೂಳೆ
baleen

ಬಲೂನ್
(ಸಾ) ತೆಳು, ಮೃದು, ಆದರೆ ದೃಢ ರೇಷ್ಮೆಯ, ರಬ್ಬರಿನ ಇಲ್ಲವೇ ಪ್ಲಾಸ್ಟಿಕ್‌ನ ವಾಯು ನಿರ್ಬಂಧಿತ ಚೀಲ ದೊಳಗೆ ವಾಯುವಿಗಿಂತ ಹಗುರ ಅನಿಲ ತುಂಬಿ ಉಬ್ಬಿಸಿದ ಸಾಧನ. ವಾಯು ಮಂಡಲದಲ್ಲಿದು ಮುಕ್ತವಾಗಿ ತೇಲಬಲ್ಲದು. ಆಕಾಶಬುಟ್ಟಿ. (ತಂ) ಸ್ವಂತ ಪ್ಲವನತೆಯಿಂದ (ಯಾಂತ್ರಿಕ ಬಲ ಗಳಿಂದ ಅಲ್ಲ) ವಾಯುವಿನಲ್ಲಿ ಹಾರುವ ಯಾವುದೇ ಸಲಕರಣೆ. ತೇಲು ಬುರುಡೆ
balloon

ಬಲ್ಬ್
(ತಂ) ಥರ್ಮಿಯಾನಿಕ್ (ಉಷ್ಣ ವಿದ್ಯುದ್ವಾಹಿ ಕಣ) ಕವಾಟದ ಅಥವಾ ವಿದ್ಯುತ್ ವಿಸರ್ಜನಾ ದೀಪದ ಎಲೆಕ್ಟ್ರೋಡ್ ಗಳನ್ನು ಇಲ್ಲವೇ ವಿದ್ಯುತ್ ತಂತು ದೀಪದ ತಂತುಗಳನ್ನೊಳಗೊಂಡಿರುವ ವಾಯು ನಿರ್ಬಂಧಿತ ಬುರುಡೆ. ವಿದ್ಯುತ್ತು ಪ್ರವಹಿಸಿದಾಗ ಬೆಳಗುತ್ತದೆ
bulb


logo