logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಬಾರ್ಬಿಟ್ಯುರಿಕ್ ಆಮ್ಲ
(ರ) ಮಲೊನಿಕ್ ಆಮ್ಲವನ್ನು ಯೂರಿಯಾದ ಜೊತೆ ಕಾಸಿದಾಗ ದೊರೆಯುವ ಪದಾರ್ಥ. ನಿರ್ವರ್ಣ ಹರಳುಗಳಾಗಿ ಸ್ಫಟಿಕೀಕರಿಸುತ್ತದೆ. ಬಾರ್ಬಿಟ್ಯುರೇಟ್‌ಗಳ ತಯಾರಿಕೆಯಲ್ಲಿ ಬಳಸುವ ಕಚ್ಚಾ ಸಾಮಗ್ರಿ. ದ್ರಬಿಂ ೨೪೮0ಸೆ. CO(NH.CO)2CH2. ಮ್ಯಾಲೊನಿಲ್ ಯೂರಿಯ
barbituric acid

ಬಾರ್ಬಿಟ್ಯುರೇಟ್‌ಗಳು
(ರ) ಬಾರ್ಬಿಟ್ಯುರಿಕ್ ಆಮ್ಲದಿಂದ ಪಡೆದ ಆರ್ಗ್ಯಾನಿಕ್ ಸಂಯುಕ್ತಗಳು. ಇವು ನಿದ್ರಾಜನಕಗಳು. ಚಟವಾಗಬಲ್ಲವು. ಅತಿಯಾದಲ್ಲಿ ಮರಣಕಾರಕ ಗಳೂ ಹೌದು. ಈಗ ಸುರಕ್ಷಿತ ನಿದ್ರಾಜನಕಗಳುಂಟು
barbiturates

ಬಾರ‍್ಯೇ
(ಭೌ) ಸಿಜಿಎಸ್ ಪದ್ಧತಿಯಲ್ಲಿ ಒತ್ತಡದ ಏಕಮಾನ = ೦.೧ಪ್ಯಾಸ್ಕಲ್ = ೧ಡೈನ್/ಸೆಮೀ೨ = ೦.೦೦೧ ಮಿಲಿಬಾರ್. ಮೈಕ್ರೊಬಾರ್ ಎಂದೂ ಕರೆಯುವುದುಂಟು
barye

ಬಾಲಚಂದ್ರ
(ಖ) ಶುಕ್ಲಪಕ್ಷದ ಮೊದಲ ವಾರದಲ್ಲಿ ಕಾಣುವ ಚಂದ್ರಬಿಂಬ. ಶೃಂಗ ಚಂದ್ರ
crescent moon

ಬಾಲಚುಕ್ಕಿ
(ಖ) ನೋಡಿ: ಧೂಮಕೇತು
comet

ಬಾಲಪ್ರೌಢಿಮೆ
(ಜೀ) ವಯಸ್ಸಿಗೆ ಮೊದಲೇ ಬುದ್ಧಿ ಶಕ್ತಿ, ಪ್ರೌಢಿಮೆ ಪೂರ್ಣ ವಿಕಾಗೊಂಡಿರುವುದು
precocity

ಬಾಲವಾಡಿ
(ಸಾ) ಪಾಠ ವಸ್ತು, ಆಟದ ಸಾಮಾನು, ಆಟಗಳು, ಹಾಡುವಿಕೆ, ಅಭಿನಯ ಮೊದಲಾದವುಗಳ ಮೂಲಕ ಮಕ್ಕಳ ಮನಸ್ಸನ್ನು ವಿಕಾಸಗೊಳಿಸುವ ಪಾಠಶಾಲೆ. ಕಿಂಡರ್‌ಗಾರ್ಟನ್
kindergarten

ಬಾಲ್ಕನಿ
(ತಂ) ಉಪ್ಪರಿಗೆಯ ಮೊಗಸಾಲೆ
balcony

ಬಾಲ್ಸಮ್
(ಸ) ಕೆಲವು ಬಗೆಯ ಸಸ್ಯಗಳು ಸ್ರವಿಸುವ ಸುವಾಸನಾಯುಕ್ತ ಪದಾರ್ಥ. ಸಾಧಾರಣವಾಗಿ ಇದೊಂದು ತೈಲಯುಕ್ತ ರಾಳ. ಬೆನ್ಝೋಯಿಕ್ ಅಥವಾ ಸಿನ್ನಮಿಕ್ ಆಮ್ಲ ಇದರ ಒಂದು ಘಟಕ. ಔಷಧೀಯ ಉಪಯೋಗವಿದೆ. ಗುಗ್ಗುಳ, ಕರ್ಣಕುಂಡಲ. ಗೌರಿಹೂವು
balsam

ಬಾವಲಿ
(ಪ್ರಾ) ಕೈರಾಪ್ಟರ ಗಣಕ್ಕೆ ಸೇರಿದ ಮತ್ತು ಹಕ್ಕಿಯಂತೆ ಹಾರಬಲ್ಲ ಸ್ತನಿ. ಕಾಲ್ಬೆರಳುಗಳು ಚರ್ಮದ ರೆಕ್ಕೆಗಳಿಗೆ ಆಸರೆ ಯಾಗಿರುವಂತೆ ವಿಸ್ತೃತ. ಇಲಿ ರೂಪದ ಚತುಷ್ಪಾದಿ. ನಿಶಾಚರಿ. ಕಣ್‌ಕಪಟ. ಚಕ್ಕಳದ ಹಕ್ಕಿ. ತೋಲಕ್ಕಿ
bat


logo