logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಬಾಟ್ಯುಲಿಸಮ್
(ಪ್ರಾ) ಡಬ್ಬಿ ಇಲ್ಲವೇ ಬಾಟಲಿಯಲ್ಲಿ ಶೇಖರಿಸಿಟ್ಟ ಸಿದ್ಧ ಆಹಾರದಲ್ಲಿ ಕ್ಲಾಸ್ಟ್ರಿಡಿಯಮ್ ಬಾಟ್ಯುಲಿನಮ್ ಎಂಬ ಅವಾಯವಿಕ ಬ್ಯಾಕ್ಟೀರಿಯಗಳು ಉಗಮಿಸುವುದುಂಟು. ಇವು ಬಾಟ್ಯುಲಿನ್ ಎಂಬ ನರಹಾನಿಕಾರಕ ವಿಷವನ್ನು ಉತ್ಪಾದಿಸುತ್ತವೆ. ಇದರಿಂದ ಕಲುಷಿತ ಆಹಾರವನ್ನು ಸೇವಿಸಿದಾಗ ಬರುವ ತೀವ್ರವಾದ, ಬಹುತೇಕ ಮಾರಕವಾದ ವ್ಯಾಧಿಯೇ ಬಾಟ್ಯುಲಿಸಮ್. ಮನುಷ್ಯರಿಗಿಂತ ಪ್ರಾಣಿಗಳಲ್ಲಿ ಅಧಿಕ ಅಪಾಯಕಾರಿ
botulism

ಬಾಡಿ ಕಟ್ಟುವುದು
(ತಂ) ಸಾಗಣೆ ವಾಹನಗಳ ಚಾಸಿಯ (ಯಂತ್ರ ಭಾಗವಿರುವ ಆಧಾರ ಚೌಕಟ್ಟಿನ) ಮೇಲೆ ಒಡಲು ನಿರ್ಮಿಸುವುದು
body building

ಬಾಂಡು
(ತಂ) ಗಾರೆ ಕೆಲಸದಲ್ಲಿ ಇಟ್ಟಿಗೆಗಳನ್ನು ಜೋಡಿಸುವಾಗ ಗೋಡೆ ಭದ್ರವಾಗಿರುವಂತೆ ಅನು ಸರಿಸುವ ಕ್ರಮ (ಚಿತ್ರ ನೋಡಿ) ಇದರಲ್ಲಿ ಎರಡು ಬಗೆ - ಇಂಗ್ಲಿಷ್ ಬಾಂಡು ಮತ್ತು ಫ್ಲೆಮಿಷ್ ಬಾಂಡು - ಗಳು ಬಳಕೆಯಲ್ಲಿವೆ
bond

ಬಾಡು
(ಸ) ಒಣಗಿ ಸೊರಗುವುದು. ವಿಲ್ಟ್. ಬಾಡುರೋಗ
wilt

ಬಾಡು
(ಪ್ರಾ) ನೋಡಿ: ಮಾಂಸ
flesh

ಬಾಂಡ್ ಕಾಗದ
(ಸಾ) ಬ್ಯಾಂಕ್ ಕಾಗದಕ್ಕೆ ಸದೃಶವಾದ ಆದರೆ ತೂಕ 50g/m2 ಅಥವಾ ಹೆಚ್ಚು ಇರುವ ವಿಶೇಷ ಕಾಗದ
bond paper

ಬಾಣ ಹುಳು
(ಪ್ರಾ) ಚಯೆಟೋಗ್ನತ ಪ್ರಾಣಿ ವಿಭಾಗದ ಯಾವುದೇ ಹುಳು; ವಿಸ್ಥಾಪಿತ ಜಲಪ್ರಮಾಣಗಳನ್ನು ಗೊತ್ತು ಹಚ್ಚಲು ಉಪಯುಕ್ತ ಸೂಚಕ ಜೀವಿ
arrow worm

ಬಾಣಂತಿ ನೋವು
(ವೈ) ಮಗು ಹುಟ್ಟಿದ ಬಳಿಕೆ ತಾಯಿಯ ಗರ್ಭಾಶಯ ಗರ್ಭಪೂರ್ವ ಸ್ಥಿತಿ ಹೊಂದಲು ಸಂಕೋಚಿಸು ವುದರ ಪರಿಣಾಮವಾಗಿ ಆಕೆ ಅನುಭವಿಸುವ ದೈಹಿಕ ವೇದನೆ
afterpains

ಬಾತ್ ಲವಣಗಳು
(ರ) ಗಡಸು ನೀರನ್ನು ಮೃದು ವಾಗಿಸಲು ಬಳಸುವ ಲವಣಗಳು. ಮುಖ್ಯ ಘಟಕ ಸಾಮಾನ್ಯವಾಗಿ ಸೋಡಿಯಮ್ ಸೆಸ್‌ಕ್ವಿಕಾರ್ಬೋನೇಟ್, Na2CO3. NaHCO3. 2H2O ಅಥವಾ ಮತ್ತಾವುದೇ ದ್ರಾವ್ಯ ಶೀಲ ಸೋಡಿಯಮ್ ಲವಣ
bath salts

ಬಾದಾಮಿ
(ಸ) ರೋಸೇಸೀ ಕುಟುಂಬಕ್ಕೆ ಸೇರಿದ ಪ್ರಸಿದ್ಧ ಜನಪ್ರಿಯ ಪರ್ಣಪಾತಿ ಮರ. ಇದರ ಬೀಜದ ತಿರುಳು; ಏಪ್ರಿಕಾಟ್ (ಸಕ್ಕರೆ ಬಾದಾಮಿ), ಚೆರಿ, ಪ್ಲಮ್, ಪೀಜ್ ಫಲ ವೃಕ್ಷಗಳ ಹತ್ತಿರ ಸಂಬಂಧಿ. ಪ್ರೂನಸ್ ಅಮಿಗ್ಡಾಲಿಸ್ ಅಥವಾ ಪ್ರೂನಸ್ ಕಮ್ಯೂನಿಸ್ ವೈಜ್ಞಾನಿಕ ನಾಮ. ತವರು ಪಶ್ಚಿಮ ಏಷ್ಯ. ತಿರುಳಿನಲ್ಲಿ ಶೇಕಡ ಸುಮಾರು ೫೦ ಕೊಬ್ಬು ಅಥವಾ ತೈಲ, ೨೦ ಪ್ರೋಟೀನ್, ೨೦ ಕಾರ್ಬೊಹೈಡ್ರೇಟ್ ಜೊತೆಗೆ ಹಲಬಗೆಯ ಖನಿಜಗಳೂ ಜೀವಸತ್ತ್ವಗಳೂ ಇವೆ. ಬೀಜಗಳಿಗೆ ಔಷಧೀಯ ಗುಣವುಂಟು. ತೈಲವನ್ನು ಹಣ್ಣು ಸಾರ, ಸುಗಂಧ ದ್ರವ್ಯ ಹಾಗೂ ಸಾಬೂನು ತಯಾರಿಕೆಯಲ್ಲಿ ಬಳಸಲಾಗುತ್ತದೆ
almond


logo