logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಬಾಗು
(ಗ) ಕಾರ್ಟೀಸಿಯನ್ ಜ್ಯಾಮಿತಿಯಲ್ಲಿ x-ಅಕ್ಷದ ಧನದಿಶೆಗೂ ಯಾವುದೇ ಸರಳರೇಖೆಗೂ ನಡುವಿನ ಕೋನ. ಇದು ಆಗಿದ್ದರೆ tan tವನ್ನು ಆ ರೇಖೆಯ ಬಾಗು (ವಾಟ-ಪ್ರವಣತೆ) ಎನ್ನುತ್ತೇವೆ. ಇಳಕಲು, ಆನತ, ಓರೆ
inclination

ಬಾಗು
(ತಂ) ಪಕ್ಕಪಕ್ಕದಲ್ಲಿ ವಿಭಿನ್ನ ಕೋನಗಳಲ್ಲಿರುವಂತೆ ಅಳವಡಿಸಿರುವ ಸರಳ ನಾಳಗಳ ಇಲ್ಲವೇ ಕೊಳವೆಗಳ ತುದಿಗಳನ್ನು ಸಂಬಂಧಿಸಲು ಬಳಸುವ ಬಗ್ಗುನಾಳ
bend

ಬಾಗು ಮಹತ್ತ್ವ
(ತಂ) ದೂಲದ
bending moment

ಬಾಗುತಲ
(ಗ) ನೋಡಿ: ಓರೆತಲ
inclined plane

ಬಾಗುತ್ರಾಣ
(ತಂ) ಬಾಗುವಿಕೆಯನ್ನು ಎದುರಿಸಿ ನಿಲ್ಲುವಲ್ಲಿ ದೂಲ ಅಥವಾ ಯಾವುದೇ ಸಂರಚನೆ ಪ್ರದರ್ಶಿಸುವ ಸಾಮರ್ಥ್ಯ. ನತತ್ರಾಣ
bending strength

ಬಾಚಿಹಲ್ಲು
(ಪ್ರಾ) ಸ್ತನಿಗಳಲ್ಲಿ, ಕಡಿಯುವುದಕ್ಕೆ ಅನುಕೂಲ ವಾದ ಎಡ ಮತ್ತು ಬಲ ಕೋರೆಹಲ್ಲುಗಳ ನಡುವಣ ಯಾವುದೇ ಹಲ್ಲು. ಈ ಹಲ್ಲುಗಳಿಗೆಲ್ಲ ಬೇರು ಒಂದೇ. ಮೇಲುದವಡೆಯ ಜೊತೆ ಎಲುಬುಗಳಿಗೆ ಹೊಂದಿಕೊಂಡಂತಿರುವ ಹಲ್ಲುಗಳು ಇವು
incisor

ಬಾಜಣೆ
(ಸಾ) ಬಡಿತ, ಹೊಡೆತ. ನೋಡಿ: ಮಹಾಬಾಜಣೆ
bang

ಬಾಟಮ್‌ನೆಸ್
(ಭೌ) ಕ್ವಾರ್ಕ್ (ಆದ್ದರಿಂದ ಹೇಡ್ರಾನ್) ಎಂಬ ಮೂಲಕಣಗಳನ್ನು ಲಕ್ಷಣೀಕರಿಸುವ ಒಂದು ಗುಣ. ಲೆಪ್ಟಾನ್ ಮತ್ತು ಗಾಜ್ ಬೋಸಾನ್ ಮೂಲ ಕಣಗಳ ಬಾಟಮ್‌ನೆಸ್ ಸೊನ್ನೆ. ಕಣಗಳ ನಡುವೆ ಪ್ರಬಲ ಹಾಗೂ ವಿದ್ಯುತ್‌ಕಾಂತ ಅಂತರಕ್ರಿಯೆಗಳಲ್ಲಿ ಬಾಟಮ್‌ನೆಸ್ ರಕ್ಷಿತವಾಗಿರುತ್ತದೆ, ದುರ್ಬಲ ಅಂತರಕ್ರಿಯೆಗಳಲ್ಲಿಲ್ಲ
bottomness

ಬಾಂಟೆಂಗ್
(ಪ್ರಾ) ಭಾರತದ ಕಾಟಿ (ಕಾಡೆಮ್ಮೆ ) ಜಾತಿಯ ಪ್ರಾಣಿ. ಆಗ್ನೇಯ ಏಷ್ಯ ಕಾಡುಗಳಲ್ಲಿ ವಾಸ
banteng

ಬಾಟ್
(ಪ್ರಾ) ಗ್ಯಾಸ್ಟ್ರೋಫೈಲಸ್ ಜಾತಿಯ ನೊಣಗಳ ಮರಿಹುಳು. ಕುದುರೆ ಹೊಟ್ಟೆಪೊರೆ ಬಾಧಿಸುವ ಪರೋಪಜೀವಿ
bot


logo