logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಬಹುಶೃಂಗೀ
(ಸ) (ಎಲೆಗಳಲ್ಲಿ) ಒಂದಕ್ಕಿಂತ ಹೆಚ್ಚು ಮೊನಚು ಕೊನೆಗಳುಳ್ಳ (ತುದಿ) (ವೈ) (ಹಲ್ಲಿನ ಮೇಲ್ಭಾಗದಲ್ಲಿ) ಒಂದಕ್ಕಿಂತ ಹೆಚ್ಚು ಚಾಚು ಮೊನೆಗಳಿರುವ
multicuspid

ಬಹುಸಾಮರ್ಥ್ಯ ಆದಿಕೋಶಗಳು
(PSCs) (ವೈ) ಯಾವುದೇ ರೀತಿಯ ಜೀವಕೋಶವಾಗಿ ಬೆಳೆಯುವ ಸಾಮರ್ಥ್ಯವನ್ನು ಪಡೆದಿರುವ ಮೂಲ ಜೀವಕೋಶಗಳು
pluripotent stem cells

ಬಹ್ವಂಗುಲಿ
(ಪ್ರಾ) ಸಹಜವಾಗಿರುವುದಕ್ಕಿಂತಲೂ
polydactyl

ಬಳಿ
(ವೈ) ಮುಲಾಮು, ಔಷಧಿ ಲೇಪಿಸುವುದು
smear

ಬಳೆ
(ಗ) ನೋಡಿ: ಟೋರಸ್
torus

ಬಳ್ಳಿ
(ಸ) ಚಾಚು ಕುಡಿಗಳಿಂದ ಆಧಾರ ಸಸ್ಯ ಅಥವಾ ಇತರ ಊರೆಯನ್ನು ಬಿಗಿಹಿಡಿದು ಹಬ್ಬುವ ಸಸ್ಯ. ಹಂಬು
creeper

ಬಳ್ಳಿ
(ಸ) ಬೆಂಬಲಕ್ಕಾಗಿ ಮತ್ತೊಂದು ಸಸ್ಯದ ಸುತ್ತ ಬಳಸಿಕೊಂಡು ಬೆಳೆಯುವ ಸಸ್ಯ
twiner

ಬಾಕ್ಸೈಟ್
(ಭೂವಿ) ಉಷ್ಣ ಪ್ರದೇಶಗಳಲ್ಲಿ ಹವೆಯ ಅಪಕ್ಷಯದ ಫಲವಾಗಿ ರೂಪುಗೊಂಡು ಬಹುತೇಕ ಅಲ್ಯೂಮಿನಿಯಮ್ ಹೈಡ್ರಾಕ್ಸೈಡ್‌ಗಳನ್ನು ಮಾತ್ರ ಒಳಗೊಂಡಿರುವ ಅವಶಿಷ್ಟ ಶಿಲೆ. ಅಲ್ಯೂಮಿನಿಯಮ್‌ನ ಅತ್ಯಂತ ಮುಖ್ಯ ಅದಿರು. ರಾಸಾಯನಿಕ ಸೂತ್ರ Al2O3.2H2O
bauxite

ಬಾಗಿದ
(ಸ) ಬೆಳೆಯುತ್ತಿರುವ ಗಿಡದ ಕಾಂಡ ಡೊಂಕಾಗಿ ಇರುವುದು. ಬಾಗಿ ನೆಲಮುಖಿಯಾಗಿರುವುದು
nutant

ಬಾಗಿಸೂತ್ರ
(ಸ) ಬರ್ಬೆರಿಡೇಸೀ ಕುಟುಂಬಕ್ಕೆ ಸೇರಿದ ಮುಳ್ಳು ಸಸ್ಯ. ಬರ್ಬೆರಿಸ್ ಅರಿಸ್ಟೇಟ ವೈಜ್ಞಾನಿಕ ನಾಮ. ಇದರ ಎಲೆಗಳು ಮೊನಚು ಮುಳ್ಳುಗಳಾಗಿ ಪರಿವರ್ತನೆಗೊಂಡಿರುವುವು. ಹಿಮಾಲಯದ ವಾಯವ್ಯ ಪ್ರಾಂತ ಕುಲು, ಕುಮಾಂವ್ ಪ್ರದೇಶ ಗಳಲ್ಲೂ ನೀಲಗಿರಿ ಬೆಟ್ಟಗಳಲ್ಲೂ ವಿಶೇಷವಾಗಿ ಬೆಳೆಯುತ್ತದೆ. ಬೇರು, ಕಾಂಡಗಳಿಂದ ಲಭಿಸುವ ರಾಳವಸ್ತುವನ್ನು ಚರ್ಮ ಕೈಗಾರಿಕೆಯಲ್ಲಿ ಬಳಸಲಾಗುತ್ತದೆ
barberry


logo